Breaking News
Home / ಜಿಲ್ಲೆ / ರಾಯಚೂರು (page 2)

ರಾಯಚೂರು

ನಾಗರ ಹಾವು ಕುತ್ತಿಗೆಗೆ ಹಾಕ್ಕೊಂಡು ಚುನಾವಣಾ ಭವಿಷ್ಯ ನುಡಿದ ವ್ಯಕ್ತಿ..!

ರಾಯಚೂರು: 2023 ವಿಧಾನಸಭಾ ಚುನಾವಣೆ ರಂಗೇರಿದೆ. ಈಗಾಗಲೇ ಮೂರು ಪಕ್ಷದವರೂ ಸೇರಿದಂತೆ ಬೇರೆ ಬೇರೆ ಪಕ್ಷದವರು ಕೂಡ ಅಬ್ಬರದ ಪ್ರಚಾರ ಮಾಡ್ತಾ ಇದ್ದಾರೆ. ಒಂದಿಷ್ಟು ಆಂತರಿಕ ‌ಸರ್ವೇಗಳು ಕೂಡ ಅಭ್ಯರ್ಥಿಗಳ ಗೆಲುವಿನ ಲೆಕ್ಕಾಚಾರ ಆಗ್ತಾ ಇವೆ. ಇದರ ಬೆನ್ನಲ್ಲೇ ರಾಯಚೂರು ಜಿಲ್ಲೆಯಲ್ಲಿ ವಿಭಿನ್ನವಾಗಿ ಅಭ್ಯರ್ಥಿಯ ರಾಜಕೀಯ ಭವಿಷ್ಯ ನುಡಿದಿದ್ದಾನೆ ಓರ್ವ ವ್ಯಕ್ತಿ. ಹೌದು, ನಾಗರ ಹಾವು ಹಿಡಿದು ಕುತ್ತಿಗೆಗೆ ಹಾಕೊಂಡು ಚುನಾವಣಾ ಭವಿಷ್ಯ ನುಡಿದ್ದಾನೆ. ನಾಗರಹಾವು ಹಿಡಿದು ಜೆಡಿಎಸ್ ಅಭ್ಯರ್ಥಿ ಗೆಲುವಿನ …

Read More »

14 ತಿಂಗಳ ಮಗುವಿನ ನೇತ್ರದಾನ: ಮಗನ ಸಾವಿನ ನೋವಲ್ಲೂ ಸಾರ್ಥಕತೆ ಮೆರೆದ ರಾಯಚೂರು ದಂಪತಿ

ರಾಯಚೂರು: 14 ತಿಂಗಳ ಮಗು ಸಾವಿನಲ್ಲೂ ಸಾರ್ಥಕತೆ ಮೆರೆದಿದೆ. ಮಗನನ್ನು ಕಳೆದುಕೊಂಡ ನೋವಲ್ಲೂ ಆತನ ಕಣ್ಣುಗಳನ್ನು ದಾನ ಮಾಡಿ ಹಲವರ ಬದುಕಿಗೆ ಬೆಳಕು ನೀಡಿ ಮಾನವೀಯತೆ ಮರೆದಿದ್ದಾರೆ. ಇಂತಹ ಮನಕಲಕುವ ಘಟನೆ ರಾಯಚೂರು ಜಿಲ್ಲೆಯಲ್ಲಿ ಸಂಭವಿಸಿದೆ.   ಗೆಜ್ಜಲಗಟ್ಟಾ ಗ್ರಾಮದ ನಿವಾಸಿ, ಗಣಿ ಕಂಪನಿ ನೌಕರ ಅಮರೇಗೌಡ ಕಾಮರೆಡ್ಡಿ ಮತ್ತು ವಾಣಿ ದಂಪತಿಯು ತಮ್ಮ ಮೂರನೇ ಪುತ್ರ 14 ತಿಂಗಳ ಬಸವಪ್ರಭುವಿನ ಎರಡೂ ಕಣ್ಣುಗಳನ್ನು ರಾಯಚೂರಿನ ನವೋದಯ ಮೆಡಿಕಲ್​ ಕಾಲೇಜಿಗೆ ದಾನ …

Read More »

ಹತ್ತಿ ಕಟಾವಿಗೂ ಕೊಡಬೇಕು ಪೊಲೀಸರ ರಕ್ಷಣೆ!

ರಾಯಚೂರು: ಸಮಾಜದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಪಾತ್ರ ಪ್ರಮುಖವಾದುದು. ಸಾರ್ವಜನಿಕವಾಗಿ ಎಷ್ಟೇ ಟೀಕೆ ವ್ಯಕ್ತಪಡಿಸಿದರೂ, ಪೊಲೀಸರಿಲ್ಲದ ಸಮಾಜವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ವಿವಿಧ ಸಂದರ್ಭಗಳಲ್ಲಿ ಸೂಕ್ತ ಬಂದೋಬಸ್ತ್​​ ಮಾಡಿ, ಭದ್ರತೆ ಒದಗಿಸುವ ಕೆಲಸ ಮಾಡುತ್ತಾರೆ.   ಗಣ್ಯ ವ್ಯಕ್ತಿಗಳ ಭೇಟಿ, ಸಮಾವೇಶ, ಗಲಭೆ ಮುಂತಾದ ಸಂದರ್ಭದಲ್ಲಿ ಅಗತ್ಯಕ್ಕನುಗುಣವಾಗಿ ಅಗತ್ಯವಿದ್ದಾಗ ಸೂಕ್ತ ಭದ್ರತೆ ಪೊಲೀಸ್ ಇಲಾಖೆಯಿಂದ ಲಭಿಸುತ್ತದೆ. ಆದರೆ ಇದೀಗ ರಾಯಚೂರಿ ದೇವದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರೊಬ್ಬರು ವಿಶೇಷ ಬಂದೋಬಸ್ತ್​​ ವ್ಯವಸ್ಥೆ ಮಾಡಿ …

Read More »

BREAKING NEWS : ರಾಯಚೂರಿನಲ್ಲಿ ಭೀಕರ ರಸ್ತೆ ಅಪಘಾತ : ಬೈಕ್ ಗೆ ಸಾರಿಗೆ ಬಸ್ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಸಾವು.

ರಾಯಚೂರು : ರಾಯಚೂರು ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಸಾರಿಗೆ ಬಸ್ -ಬೈಕ್ ನಡುವೆ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.   ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಗುಡದೂರು ಬಳಿ ಬೈಕ್ ಗೆ ಸಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೂವರು ಬೈಕ್ ಸವಾರರು ಮೃತಪಟ್ಟಿದ್ದಾರೆ. ಮೃತರನ್ನು ನಾಗರಾಜು (25), ಸೀನು (30) ಮತ್ತು ಜಯಪಾಲ (30) ಎಂದು ಗುರುತಿಸಲಾಗಿದ್ದು, ಶ್ರೀಕಾಂತ ಕರ್ನೂಲು ಎಂಬುವರಿಗೆ …

Read More »

ಅಕ್ರಮಕ್ಕೆ ಅಧಿಕಾರಿಗಳ ನೆರವು ಚಿಲುಮೆ ಆಯಪ್‌ ರೂಪಿಸಿದ್ದ ವ್ಯಕ್ತ ವಿಚಾರಣೆ

ಬೆಂಗಳೂರು: ಮತದಾರರ ದತ್ತಾಂಶ ಕಳವು ಆರೋಪ ಹೊತ್ತಿರುವ ‘ಚಿಲುಮೆ’ ಸಂಸ್ಥೆಯ ಅಕ್ರಮಕ್ಕೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಕೆಲವು ವಲಯ ಅಧಿಕಾರಿಗಳೇ ಬೆಂಬಲವಾಗಿದ್ದರು ಎನ್ನುವ ಅಂಶ ಪೊಲೀಸ್‌ ತನಿಖೆಯಿಂದ ಹೊರಬಿದ್ದಿದೆ.   ‘ಚಿಲುಮೆ’ ಸಮೀಕ್ಷಾ ತಂಡವು ಬೆಂಗಳೂರಿನ ಬಹುತೇಕ ವಿಧಾನ ಸಭಾ ಕ್ಷೇತ್ರಗಳ ಸಮೀಕ್ಷೆ ನಡೆಸಿದ್ದು, ಅದಕ್ಕೆ ಬಿಬಿಎಂಪಿಯ ವಲಯದ ಕಂದಾಯ ಅಧಿಕಾರಿಗಳು (ಆರ್‌ಒ) ಹಾಗೂ ಸಿಬ್ಬಂದಿ ನೆರವು ನೀಡಿ ದ್ದರು. ವಾರ್ಡ್‌ವಾರು ಮತದಾರರ ಪಟ್ಟಿಯನ್ನು ಈ ಸಂಸ್ಥೆಗೆ ಅಧಿಕಾರಿಗಳೇ …

Read More »

ರಾಜ್ಯದಲ್ಲಿ ಜನವರಿ ಬಳಿಕ ಕಾಂಗ್ರೆಸ್ ಮಾತ್ರವಲ್ಲ ಎಲ್ಲ ಪಕ್ಷಗಳಲ್ಲೂ ಪಕ್ಷಾಂತರ ಮಾಡುವ ನಾಯಕರಿದ್ದಾರೆ: ಸತೀಶ್ ಜಾರಕಿಹೊಳಿ

ರಾಯಚೂರು: ರಾಜ್ಯದಲ್ಲಿ ಜನವರಿ ಬಳಿಕ ಕಾಂಗ್ರೆಸ್ ಮಾತ್ರವಲ್ಲ ಎಲ್ಲ ಪಕ್ಷಗಳಲ್ಲೂ ಪಕ್ಷಾಂತರ ಮಾಡುವ ನಾಯಕರಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಶನಿವಾರ ಭವಿಷ್ಯ ನುಡಿದಿದ್ದಾರೆ.   ನಗರದಲ್ಲಿ ‘ಭಾರತ್ ಜೋಡೋ’ ಕಾರ್ಯಕ್ರಮ ನಿಮಿತ್ತ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಪಕ್ಷದವರು ಬೇರೆ ಕಡೆ ಹೋಗುತ್ತಾರೆ. ಆ ಪಕ್ಷದವರು ನಮ್ಮಲ್ಲಿಗೆ ಬರುತ್ತಾರೆ. ಚುನಾವಣೆ ಬಂದರೆ ಇದೊಂದು ಸಾಮಾನ್ಯ ಪ್ರಕ್ರಿಯೆ. ಆದರೆ, ಯಾರು ಹೋಗುತ್ತಾರೆ, ಬರುತ್ತಾರೆ ಎಂಬದು ಗೊತ್ತಾಗಬೇಕಾದರೆ ಜನವರಿವರೆಗೂ ಕಾಯಬೇಕು …

Read More »

ಯಾತ್ರೆಯಲ್ಲಿ ಮಂತ್ರಾಲಯ ರಾಯರ ದರ್ಶನ ಪಡೆದ ರಾಹುಲ್‌ಗಾಂಧಿ

ರಾಯಚೂರು: ಭಾರತ್‌ ಜೋಡೊ ಪಾದಯಾತ್ರೆ ಆರಂಭಿಸಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಸುಕ್ಷೇತ್ರ ಮಂತ್ರಾಲಯಕ್ಕೆ ಗುರುವಾರ ತಲುಪಿದ್ದು, ಶ್ರೀರಾಘವೇಂದ್ರಸ್ವಾಮಿಗಳ ಮಠಕ್ಕೆ ಭೇಟಿ ನೀಡಿ ಮೂಲ ವೃಂದಾವನ ದರ್ಶನ ಪಡೆದು ‘ಪೂಜ್ಯಾಯ ರಾಘವೇಂದ್ರಾಯ..’ ಮಂತ್ರ ಉಚ್ಛರಿಸಿದ್ದು ವಿಶೇಷವಾಗಿತ್ತು.   ಯಮ್ಮಿಗನೂರು ಮಾರ್ಗದಿಂದ ಸುಕ್ಷೇತ್ರಕ್ಕೆ ಸಂಜೆ ತಲುಪಿದ ರಾಹುಲ್‌ಗಾಂಧಿ ಅವರು ಮೊದಲು ಅತಿಥಿಗೃಹಕ್ಕೆ ಹೋಗಿ ಮಠದ ಸಂಪ್ರದಾಯದಂತೆ ಬಿಳಿಪಂಚೆ ಹಾಗೂ ಶಲ್ಯ ಧರಿಸಿ ಮಠದ ಕಡೆಗೆ ಬಂದರು. ಮಠದ ಆಡಳಿತಾಧಿಕಾರಿಗಳು ಹೂಮಾಲೆ …

Read More »

ರಾಯಚೂರಿಗೆ ಬರಲಿದೆ ಏಮ್ಸ್, ಮಂತ್ರಾಲಯ ಸೇತುವೆಗೆ ಬಿಎಸ್‌ವೈ ಹೆಸರು: ಬೊಮ್ಮಾಯಿ

ರಾಯಚೂರು: ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಾದ ಏಮ್ಸ್ ಸಂಸ್ಥೆಯನ್ನು ರಾಯಚೂರಿಗೆ ತರಲು ಎಲ್ಲಾ ಪ್ರಯತ್ನಗಳು ನಡೆದಿವೆ. ನರೇಂದ್ರ ಮೋದಿಯವರ ಆಶೀರ್ವಾದದಿಂದ ಏಮ್ಸ್ ರಾಯಚೂರಿಗೆ ಬರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.   ಗಿಲ್ಲೆಸುಗೂರಿನಲ್ಲಿ ನಡೆದ ಜನ ಸಂಕಲ್ಪ ಯಾತ್ರೆ ಸಮಾವೇಶದಲ್ಲಿ ಮಾತನಾಡಿದ ಬೊಮ್ಮಾಯಿ, ಈಗಾಗಲೇ ಕೇಂದ್ರ ಆರೋಗ್ಯ ಸಚಿವರ ಬಳಿ ಮಾತನಾಡಿದ್ದೇನೆ. ಮುಂದಿನ ವಾರ ದೆಹಲಿಗೆ ಹೋಗಿ ಏಮ್ಸ್ ಕುರಿತಾಗಿ ಮಾತನಾಡಲಿದ್ದೇನೆ. ಮಂತ್ರಾಲಯದ ಸೇತುವೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರ …

Read More »

ಎಲ್ರೂ ನನ್ನ ಶವ ನೋಡಲು ಬನ್ನಿ, ಇಲ್ಲಂದ್ರೆ ದೆವ್ವ ಆಗಿ ಬರ್ತೀನಿ’; ಡೆತ್​ನೋಟ್​ನಲ್ಲಿತ್ತು ಈ ಕೊನೇ ಆಸೆ

ರಾಯಚೂರು: ಯುವತಿಯೊಬ್ಬಳು ಗಣೇಶ ವಿಸರ್ಜನೆಗಾಗಿ ನಿರ್ಮಿಸಿದ್ದ ಕೆರೆಯೊಂದಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಅದಕ್ಕೂ ಮೊದಲು 4 ಪುಟಗಳ ಸುದೀರ್ಘ ಡೆತ್​ನೋಟ್​ ಕೂಡ ಬರೆದಿಟ್ಟಿದ್ದಳು. ಇದೀಗ ಆ ಡೆತ್​​ನೋಟ್ ಮಾಹಿತಿ ಬಹಿರಂಗಗೊಂಡಿದ್ದು, ಯುವತಿ ಅದರಲ್ಲಿ ತನ್ನ ಕೊನೆಯ ಆಸೆಯನ್ನೂ ಹೇಳಿಕೊಂಡಿದ್ದಾಳೆ.   ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಈ ಘಟನೆ ನಡೆದಿದೆ. ಹತ್ತನೇ ತರಗತಿ ವಿದ್ಯಾರ್ಥಿನಿ ಸಾರಿಕಾ (16) ಆತ್ಮಹತ್ಯೆ ಮಾಡಿಕೊಂಡವಳು. ನಾಲ್ಕು ಪುಟಗಳ ಡೆತ್​ನೋಟ್ ಸಿಕ್ಕಿದ್ದರೂ ಆತ್ಮಹತ್ಯೆಗೆ ಕಾರಣ ಏನು ಎಂಬ ಬಗ್ಗೆ …

Read More »

ಬಸ್​- ಲಾರಿ ಡಿಕ್ಕಿ: 50ಕ್ಕೂ ಹೆಚ್ಚು ಪ್ರಯಾಣಿಕರ ಜೀವ ಉಳಿಸಿತು ಚಾಲಕನ ಸಮಯ ಪ್ರಜ್ಞೆ

ರಾಯಚೂರು: ಸಾರಿಗೆ ಬಸ್ ಹಾಗೂ ಲಾರಿ ನಡುವೆ ಅಪಘಾತ ನಡೆದಿದ್ದು, ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಸ್ವಲ್ಪದಲ್ಲಿಯೇ ಭಾರಿ ಅನಾಹುತವೊಂದು ತಪ್ಪಿದೆ. ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ತಿಂಥಣಿ ಸೇತುವೆ ಬಳಿ ಘಟನೆ ಸಂಭವಿಸಿದೆ. ಅಪಘಾತದ ರಭಸಕ್ಕೆ ಪಲ್ಟಿಯಾಗಿ ಲಾರಿ ಕಂದಕಕ್ಕೆ ಉರುಳಿದೆ. ಬಸ್​ನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಅದೃಷ್ಟವಶಾತ್ ಬಸ್​ನಲ್ಲಿದ್ದ 50ಕ್ಕೂ ಹೆಚ್ಚು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಸ್ತೆಗೆ ಅಡ್ಡಲಾಗಿ ಸಾರಿಗೆ ಬಸ್ ನಿಂತ ಹಿನ್ನೆಲೆಯಲ್ಲಿ ಜೇವರ್ಗಿ-ಚಾಮರಾಜನಗರ ಹೆದ್ದಾರಿ ಬಂದ್ …

Read More »