Home / ಜಿಲ್ಲೆ / ರಾಯಚೂರು (page 3)

ರಾಯಚೂರು

ಬಟ್ಟೆಯಲ್ಲೇ ಶೌಚ ಮಾಡಿದ್ದಕ್ಕೆ ಬಾಲಕನ ಮೇಲೆ ಬಿಸಿ ನೀರು ಎರಚಿದ ಶಿಕ್ಷಕ, ಮಗುವಿನ ಸ್ಥಿತಿ ಗಂಭೀರ!

ರಾಯಚೂರು(ಸೆ.09): ಬಾಲಕನೊಬ್ಬ ಶಾಲಾ ಸಮವಸ್ತ್ರದಲ್ಲಿ (School Uniform) ಮಲವಿಸರ್ಜನೆ ಮಾಡಿರುವ ವಿಚಾರವಾಗಿ ಕೋಪಗೊಂಡ ಶಿಕ್ಷಕನೊಬ್ಬ ಮಗುವಿನ ಮೇಲೆ ಬಿಸಿನೀರು ಸುರಿದಿದ್ದಾನೆ. ಹೌದು ರಾಯಚೂರು (Raichuru) ಜಿಲ್ಲೆ ಮಸ್ಕಿ ತಾಲೂಕಿನ ಸಂತೆಕೆಲ್ಲೂರು ಗ್ರಾಮದಲ್ಲಿ ಘಟನೆ ನಡೆದಿದೆ. ಗ್ರಾಮದ ಘನಮಠೇಶ್ವರ ಗ್ರಾಮೀಣ ಸಂಸ್ಥೆಯ ಪ್ರಾಥಮಿಕ ಶಾಲೆಯ ಶಿಕ್ಷಕ ಹುಲಿಗೆಪ್ಪ ಎಂಬಾತನೇ ಈ ರಾಕ್ಷಸ ಕೃತ್ಯ ಮೆರೆದ ವ್ಯಕ್ತಿ. ಸದ್ಯ ಬಿಸಿ ನೀರಿನ ದಾಳಿಗೊಳಗಾದ 2ನೇ ತರಗತಿಯ ವಿದ್ಯಾರ್ಥಿ ಎಂಟು ವರ್ಷದ ಅಖಿತ್ ಸ್ಥಿತಿ ಗಂಭೀರವಾಗಿದೆ. …

Read More »

ಪೊಲೀಸ್‌ ನೇಮಕಾತಿ ವಯೋಮಿತಿ ಹೆಚ್ಚಿಸಲು ಆಗ್ರಹ

ರಾಯಚೂರು: ಪೊಲೀಸ್‌ ನೇಮಕಾತಿಯಲ್ಲಿ ವಯೋಮಿತಿ ಹೆಚ್ಚಿಸಬೇಕು, ಖಾಲಿ ಇರುವ ಎಲ್ಲ ಹುದ್ದೆಗಳನ್ನು ಭರ್ತಿ ಮಾಡುವಂತೆ ಆಗ್ರಹಿಸಿ ಅಖೀಲ ಭಾರತ ನಿರುದ್ಯೋಗ ಯುವಜನರ ಹೋರಾಟ ಸಮಿತಿ ಸದಸ್ಯರು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಈ ಕುರಿತು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಒಂದೆಡೆ ಪದವೀಧರರು ಡಿಗ್ರಿಗಳನ್ನು ಪಡೆದು ಸಣ್ಣ ಪುಟ್ಟ ಕೆಲಸ ಮಾಡುವ ಪರಿಸ್ಥಿತಿ ಇದೆ. ಅಲ್ಲದೇ, ಕೋವಿಡ್‌ -19 ಪರಿಸ್ಥಿತಿಯಲ್ಲಿ, ಉದ್ಯೋಗ ಕಳೆದುಕೊಂಡು ಯುವಕರು ಕಂಗಾಲಾಗಿದ್ದಾರೆ. ಆದರೆ, ಸರ್ಕಾರಿ …

Read More »

ಒತ್ತಾಯಪೂರಕವಾಗಿ ಧರ್ಮಾಚರಣೆ ಮಾಡಿಸುವುದು ಸರಿಯಲ್ಲ.

ರಾಯಚೂರು: ಒಬ್ಬರಿಂದ ಒತ್ತಾಯಪೂರಕವಾಗಿ ಧರ್ಮಾಚರಣೆ ಮಾಡಿಸುವುದು ಸರಿಯಲ್ಲ. ಇನ್ನೊಬ್ಬರ ಧರ್ಮದ ಬಗ್ಗೆ ಅಗೌರವ ತೋರಿಸದೇ ನಮ್ಮ ಧರ್ಮ ಆಚರಿಸಬೇಕು. ಇದನ್ನು ಎಲ್ಲರೂ ಅರ್ಥೈಸಿಕೊಂಡು ಸೌಹಾರ್ದವಾಗಿ ಬಾಳಬೇಕು ಎಂದು ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ತಿಳಿಸಿದರು.   ಮಂತ್ರಾಲಯದಲ್ಲಿ ಭಾನುವಾರ ಶ್ರೀ ರಾಘವೇಂದ್ರ ಸ್ವಾಮಿಗಳವರ 351ನೇ ಉತ್ತರಾರಾಧನೆ ನಿಮಿತ್ತ ಶ್ರೀ ಪ್ರಹ್ಲಾದರಾಜರ ಮಹಾರಥೋತ್ಸವಕ್ಕೆ ಚಾಲನೆ ನೀಡಿ ಅನುಗ್ರಹ ಸಂದೇಶ ನೀಡಿದ ಶ್ರೀಗಳು, ನಾವೆಲ್ಲ ಹಿಂದೂಗಳು. ಸನಾತನ ಭಾರತೀಯ ಹಿಂದೂ …

Read More »

ರಾಯರಿಗೆ ಶ್ರೀರಂಗಂ ದೇವಸ್ಥಾನದಿಂದ ಶೇಷವಸ್ತ್ರ: ಮೊದಲ ಬಾರಿ ತಮಿಳುನಾಡು ಸರ್ಕಾರದಿಂದ ಸೇವೆೆ

ರಾಯಚೂರು: ಮಂತ್ರಾಲಯದಲ್ಲಿ ಭಕ್ತರ ಆರಾಧ್ಯದೈವ, ಕಲಿಯುಗ ಕಾಮಧೇನು ಶ್ರೀ ರಾಘವೇಂದ್ರ ಸ್ವಾಮಿಗಳ 351ನೇ ಆರಾಧನಾ ಮಹೋತ್ಸವ ನಿಮಿತ್ತ ಶುಕ್ರವಾರ ಪೂರ್ವಾರಾಧನೆ ವಿಜೃಂಭಣೆಯಿಂದ ನೆರವೇರಿಸಲಾಯಿತು. ಪ್ರತಿ ವರ್ಷ ಮಧ್ಯಾರಾಧನೆ ದಿನ ರಾಯರಿಗೆ ತಿರುಪತಿ ತಿಮ್ಮಪ್ಪನ ಸನ್ನಿಧಾನದಿಂದ ಶೇಷವಸ್ತ್ರ ಬರುವ ಸಂಪ್ರದಾಯವಿದೆ. ಈ ಬಾರಿ ಪೂರ್ವಾರಾಧನೆ ದಿನ ತಮಿಳುನಾಡಿನ ಶ್ರೀರಂಗಂ ದೇವಸ್ಥಾನದಿಂದ ಶ್ರೀ ರಂಗನಾಥ ಸ್ವಾಮಿಯ ಶೇಷವಸ್ತ್ರಗಳನ್ನು ರಾಯರ ಆರಾಧನೆಗೆ ತಂದಿದ್ದು ವಿಶೇಷವಾಗಿತ್ತು. ಪೂರ್ವಾರಾಧನೆ ನಿಮಿತ್ತ ಬೆಳಗ್ಗೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ ನೆರವೇರಿಸಲಾಯಿತು. ಬೆಳಗಿನ …

Read More »

ಜಮೀನು ಕೆಲಸಕ್ಕೆಂದು ಹೋದ ರೈತ ನಾಪತ್ತೆ.. ನೀರುಪಾಲು ಶಂಕೆ

ರಾಯಚೂರು: ನಿನ್ನೆ ಸುರಿದ ಧಾರಾಕಾರ ಮಳೆಗೆ ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ರೈತನೋರ್ವ ಕೊಚ್ಚಿ ಹೋಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಜಿಲ್ಲೆಯ ಮಾನ್ವಿ ತಾಲೂಕಿನ ಕುರ್ಡಿ ಗ್ರಾಮದ ಹೊರವಲಯದ ಹಳ್ಳದಲ್ಲಿ ಘಟನೆ ಜರುಗಿದೆ. ವೆಂಕಟೇಶ(36) ಕೊಚ್ಚಿ ಹೋದ ರೈತ ಎಂದು ಹೇಳಲಾಗುತ್ತಿದೆ. ಜಮೀನು ಕೆಲಸಕ್ಕೆ ಹೋಗಿ ಸಂಜೆ ಮನೆಗೆ ಮರಳುವಾಗ ಘಟನೆ ನಡೆದಿದೆ ಎಂದು ಶಂಕಿಸಲಾಗುತ್ತಿದೆ. ಘಟನಾ ಮಾಹಿತಿ ದೊರೆತ ಬಳಿಕ ಸ್ಥಳಕ್ಕೆ ಮಾನ್ವಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. …

Read More »

ನಾಪತ್ತೆಯಾಗಿದ್ದ ರಾಯಚೂರು ವಿದ್ಯಾರ್ಥಿನಿಯರು ಹುಬ್ಬಳ್ಳಿಯಲ್ಲಿ ಪತ್ತೆ

ರಾಯಚೂರು: ಕಾಲೇಜಿಗೆ ಹೋಗಿ ಬರುವುದಾಗಿ ಮನೆಯಿಂದ ಶನಿವಾರ ತೆರಳಿದ್ದ ನಾಲ್ವರು ವಿದ್ಯಾರ್ಥಿನಿಯರು ನಾಪತ್ತೆಯಾಗಿದ್ದಾರೆ ಎಂದು ಪಾಲಕರು ಭಾನುವಾರ ಮಹಿಳಾ ಪೊಲೀಸ್‌ ಠಾಣೆಗೆ ನೀಡಿದ್ದ ದೂರು, ಕೊನೆಗೂ ಸೋಮವಾರ ಸುಖಾಂತ್ಯ ಕಂಡಿದೆ. ಹುಬ್ಬಳ್ಳಿಯಲ್ಲಿ ನಾಲ್ವರು ವಿದ್ಯಾರ್ಥಿನಿಯರು ಗೆಳೆಯರೊಂದಿಗೆ ರೈಲ್ವೆ ನಿಲ್ದಾಣದಲ್ಲಿ ಸೋಮವಾರ ಪತ್ತೆಯಾಗಿದ್ದು, ಪೊಲೀಸರು ವಾಪಸ್‌ ಕರೆತರುತ್ತಿದ್ದಾರೆ. ರೈಲ್ವೆ ನಿಲ್ದಾಣದಲ್ಲಿ ಅನುಮಾನಾಸ್ಪದ ರೀತಿ ಓಡಾಡುತ್ತಿದ್ದ ವಿದ್ಯಾರ್ಥಿಗಳನ್ನು ರೈಲ್ವೆ ಭದ್ರತಾ ಸಿಬ್ಬಂದಿ ವಿಚಾರಿಸಿ, ಹುಬ್ಬಳ್ಳಿ ಶಹರ ಠಾಣೆಗೆ ಒಪ್ಪಿಸಿದ್ದರು. ಇದೀಗ ಅಲ್ಲಿಂದ ರಾಯಚೂರಿಗೆ …

Read More »

ಒಂದೇ ಕಾಲೇಜಿನ ನಾಲ್ವರು ವಿದ್ಯಾರ್ಥಿನಿಯರು ನಾಪತ್ತೆ

ರಾಯಚೂರು: ಜಿಲ್ಲೆಯಲ್ಲಿ ಕಾಲೇಜಿಗೆ ತೆರಳಿದ್ದಂತ ಒಂದೇ ಕಾಲೇಜಿನ ನಾಲ್ವರು ವಿದ್ಯಾರ್ಥಿನಿಯರು ನಾಪತ್ತೆಯಾಗಿರೋದಾಗಿ ತಿಳಿದು ಬಂದಿದೆ. ಹೀಗಾಗಿ ಪೋಷಕರು ಮಕ್ಕಳು ನಾಪತ್ತೆಯಾಗಿರೋದ್ರಿಂದ ಆತಂಕಗೊಂಡಿದ್ದಾರೆ.   ರಾಯಚೂರು ಜಿಲ್ಲೆಯ ಸ್ಟೇಷನ್ ರಸ್ತೆಯಲ್ಲಿರುವಂತ ಸರ್ಕಾರಿ ಕಾಲೇಜಿನಲ್ಲಿ ಓದುತ್ತಿದ್ದಂತ ನಾಲ್ವರು ವಿದ್ಯಾರ್ಥಿನಿಯರು, ಕಾಲೇಜಿಗೆ ಹೋಗಿ ಬರೋದಾಗಿ ತೆರಳಿದ್ದರು. ಹೀಗೆ ತೆರಳಿದ್ದಂತ ನಾಲ್ವರು ವಿದ್ಯಾರ್ಥಿನಿಯರು ಮನೆಗೆ ವಾಪಾಸ್ ಆಗಿಲ್ಲ ಎಂಬುದಾಗಿ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.   ವಿದ್ಯಾರ್ಥಿನಿಯರ ಪೋಷಕರು ನೀಡಿದಂತ ದೂರನಿಂದಾಗಿ ಸದರಬಜಾರ್ ಠಾಣೆಯ ಪೊಲೀಸರು …

Read More »

ಆ.10ರಿಂದ ಮಂತ್ರಾಲಯದಲ್ಲಿ ರಾಯರ ಆರಾಧನೆ

ರಾಯಚೂರು: ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಆ.10ರಿಂದ 16ರವರೆಗೆ ಶ್ರೀರಾಘವೇಂದ್ರ ಸ್ವಾಮಿಗಳ 351ನೇ ಆರಾಧನಾ ಮಹೋತ್ಸವ ನಿಮಿತ್ತ ಸಪ್ತರಾತ್ರೋತ್ಸವವು ಜರುಗಲಿದೆ. ಶ್ರೀಮಠದ ಪೀಠಾಧಿ ಪತಿ ಶ್ರೀ ಸುಬುಧೇಂದ್ರ ತೀರ್ಥರ ಸಾನ್ನಿಧ್ಯದಲ್ಲಿ ಕಾರ್ಯಕ್ರಮಗಳು ಜರುಗಲಿವೆ. ಈ ವರ್ಷ ಮಂತ್ರಾಲಯದ ವಿದ್ವಾನ್‌ ಅರ್ಚಕ ಕೃಷ್ಣಾಚಾರ್‌, ಆಂಧ್ರಪ್ರದೇಶದ ನಿವೃತ್ತ ಡಿಜಿಪಿ ಆರ್‌.ಪ್ರಭಾಕರರಾವ್‌, ತಿರುವನಂತಪುರದ ವಿದ್ವಾನ್‌ ಆರ್‌.ಕೃಷ್ಣಮೂರ್ತಿ ಶಾಸ್ತ್ರಿ, ಬೆಂಗಳೂರಿನ ವಿದ್ವಾನ್‌ ಮಾಳಗಿ ರಾಮಾಚಾರ, ಮೈಸೂರಿನ ವಿದ್ವಾನ್‌ ಸಿ.ಎಚ್‌. ಶ್ರೀನಿವಾಸಮೂರ್ತಿ, ಆಂಧ್ರಪ್ರದೇಶದ ಧಾರ್ಮಿಕ ದತ್ತಿ ಇಲಾಖೆ ನಿವೃತ್ತ ಜಂಟಿ …

Read More »

ಅವೈಜ್ಞಾನಿಕ ಕಾಮಗಾರಿ : ರಸ್ತೆ ಮೇಲೆ ನಿಲ್ಲುತ್ತಿದೆ ಕೊಳಚೆ ನೀರು,

ಕುಷ್ಟಗಿ : ಅವೈಜ್ಞಾನಿಕ ರಸ್ತೆ ನಿರ್ಮಾಣದ ಹಿನ್ನೆಲೆಯಲ್ಲಿ ಸಿಸಿ ರಸ್ತೆಯ ಮೇಲೆ ನೀರು ನಿಲ್ಲುತ್ತಿರುವುದು ನಿತ್ಯ ತೊಂದರೆ ಅನುಭವಿಸುವಂತಾಗಿದೆ. ದಿನ ಬೆಳಗಾದರೆ ಈ ಗಲೀಜು ದಾಟಿಕೊಂಡು ಮನೆ ಸೇರಬೇಕಿದೆ. ಇದು ಕುಷ್ಟಗಿ ಪಟ್ಟಣದ 2ನೇ ವಾರ್ಡಿನ ಬುತ್ತಿಬಸವೇಶ್ವರ ನಗರದ ರಥ ಬೀದಿಗೆ ಹೊಂದಿಕೊಂಡಿರುವ ಎನ್.ಜೆ.ಕಿಡ್ಸ್ ಶಾಲೆಯ ದುಸ್ಥಿತಿ ಇದು.   ಇದು ಕುಷ್ಟಗಿ ಪಟ್ಟಣದ 2ನೇ ವಾರ್ಡಿನ ಬುತ್ತಿಬಸವೇಶ್ವರ ನಗರದ ರಥ ಬೀದಿಗೆ ಹೊಂದಿಕೊಂಡಿರುವ ಎನ್.ಜೆ.ಕಿಡ್ಸ್ ಶಾಲೆಯ ದುಸ್ಥಿತಿ ಇದು. ಈ …

Read More »

ಭ್ರಷ್ಟಾಚಾರ ಸಾಭೀತಾದ ಹಿನ್ನೆಲೆ: ಗ್ರಾ. ಪಂ ಸೇವೆಯಿಂದ ಪಿಡಿಓ ವಜಾ

ರಾಯಚೂರು: ಭ್ರಷ್ಟಾಚಾರ ಸಾಬೀತಾದ ಹಿನ್ನೆಲೆಯಲ್ಲಿ ಜಿಲ್ಲೆಯ ದೇವದುರ್ಗ ತಾಲೂಕಿನ ರಾಮದುರ್ಗ ಗ್ರಾಮ‌ ಪಂಚಾಯಿತಿ ಪಿಡಿಓ ಶರಣಪ್ಪ ಸರ್ಕಾರಿ ಸೇವೆಯಿಂದ ವಜಾಗೊಂಡಿದ್ದಾರೆ. 2010-11 ರ ಅವಧಿಯಲ್ಲಿ ಮಾನ್ವಿ ತಾಲೂಕಿನ ಕಪಗಲ್ ಗ್ರಾಪಂ‌ ಪಿಡಿಓ ಆಗಿದ್ದಾಗ ನಡೆದ ಭ್ರಷ್ಟಾಚಾರ ಹಿನ್ನೆಲೆಯಲ್ಲಿ ಇದೀಗ ಕ್ರಮ ಕೈಗೊಂಡಿದ್ದು ಪಿಡಿಓ ಶರಣಪ್ಪ ಅವರನ್ನು ಸೇವೆಯಿಂದ ವಜಾ ಮಾಡಲಾಗಿದೆ. ನಿಯಮ ಉಲ್ಲಂಘಿಸಿ ಸರ್ಕಾರಕ್ಕೆ 34,77,999 ರೂ. ನಷ್ಟ ಉಂಟು ಮಾಡಿದ ಆರೋಪ ಪ್ರಕರಣದಲ್ಲಿ ಭ್ರಷ್ಟಾಚಾರ ತನಿಖೆಯಲ್ಲಿ ಧೃಡಪಟ್ಟ ಹಿನ್ನೆಲೆ …

Read More »