ಬೆಂಗಳೂರು: ಇವತ್ತು ರಾತ್ರಿ ಸಭೆ ಇತ್ತು. ಅದು ರದ್ದಾಗಿದೆ. ಸಂಪುಟ ವಿಸ್ತರಣೆ ತಡ ಆಗಬಹುದು ಎಂದು ಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾಳೆ ಪ್ರಮಾಣವಚನ ಕೊಡಬೇಕು ಅಂತಾ ತೀರ್ಮಾನ ಮಾಡಿದ್ದೆ. ರಾಜ್ಯಪಾಲರಿಗೂ ಮಾಹಿತಿ ನೀಡಿದ್ದೆ. ಮಧ್ಯಾಹ್ನ 12 ಕ್ಕೆ ಸಭೆ ಆಗಬೇಕಿತ್ತು. ಈಗ ಮುಂದಕ್ಕೆ ಹೋಗಬಹುದು. ನಮ್ಮ ನಾಯಕರು ಬಂಧನಕ್ಕೊಳಗಾಗಿದ್ದಾರೆ. ಸಂಪುಟ ವಿಸ್ತರಣೆ ತಡ ಆಗಬಹುದು ಎಂದರು.
ಪ್ರತಿಭಟನಾ ಸ್ಥಳಕ್ಕೆ ಕೇಂದ್ರದ ಮಂತ್ರಿಗಳು ಬಂದಿದ್ದರು. ನಾವು ಚರ್ಚೆಗೆ ಅವಕಾಶ ಮತ್ತು ರಾಜೀನಾಮೆ ಕೇಳಿದ್ದೆವು. ಅವರು ನಿರ್ಧಾರ ತೆಗೆದುಕೊಳ್ಳಲಿಲ್ಲ. ರಾಹುಲ್ ಗಾಂಧಿಯನ್ನು ಕೆಟ್ಟ ರೀತಿಯಲ್ಲಿ ನಡೆಸಿಕೊಂಡರು. ಸಂಸದರನ್ನು ಒಳಗೆ ಬಿಡಲಿಲ್ಲ. ಪೊಲೀಸರು ಅಸಭ್ಯವಾಗಿ ನಡೆದುಕೊಂಡರು. ಮಹಿಳಾ ನಾಯಕಿಯರ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದಾರೆ. ರಾಹುಲ್ ಪ್ರಿಯಾಂಕಾ ಗಾಂಧಿ ಅವರನ್ನು ಬಂಧಿಸಿದ್ದಾರೆ. ರಾಹುಲ್ ಗಾಂಧಿ ಮಕ್ಕಳಿಗಾಗಿ ಹೋರಾಟ ಮಾಡುತ್ತಿದ್ದಾರೆ ಎಂದು ಹೇಳಿದರು.
ನಾನು ಸಂಪುಟ ವಿಸ್ತರಣೆಗೆ ರೆಡಿ ಇದ್ದೀನಿ. ಮುಂದೆ ಹಾಕಲು ಇಷ್ಟ ಇಲ್ಲ. ಪರಿಸ್ಥಿತಿ ಸರಿ ಇಲ್ಲ. ನಿನ್ನೆ ದೆಹಲಿಗೆ ಬರಬೇಕಿತ್ತು. ನಿನ್ನೆ ಆಗಲಿಲ್ಲ ಹಾಸನಕ್ಕೆ ಹೋಗಬೇಕಿತ್ತು. ರಾತ್ರಿ ಸಭೆ ಇತ್ತು ಅದು ರದ್ದಾಗಿದೆ ಎಂದು ತಿಳಿಸಿದರು.
ನಾನು ಪೊಲೀಸ್ ಸ್ಟೇಷನ್ಗೆ ಹೊಗ್ತಿದ್ದೀನಿ. ನಮ್ಮ ಪಕ್ಷದಲ್ಲಿ ಹೈಕಮಾಂಡ್ ಇದೆ. ನಮ್ಮ ಅಭಿಪ್ರಾಯ ನಾವು ಹೇಳ್ತೀವಿ. ಜಿಲ್ಲಾವಾರು ಸಮುದಾಯ ವಾರು. ಅಂತಿಮವಾಗಿ ಹೈಕಮಾಂಡ್ ಹೇಳಿದಂತೆ ಕೇಳ್ತೇವೆ. ನಾನು ಮೊದಲ ಬಾರಿಗೆ ಶಾಸಕನಾದಾಗ ಮಂತ್ರಿ ಆದೆ. ಯುವಕರನ್ನು ಬೆಳೆಸುವುದು ನನ್ನ ಆಸೆ. ಹೈಕಮಾಂಡ್ ಹೇಳಿದಂತೆ ಕೇಳಬೇಕು ಎಂದು ಮಾತನಾಡಿದರು.
ನಾನು ಎಲ್ಲ ಸ್ಥಾನ ತುಂಬಬೇಕು ಅನ್ನೋದು ಆಸೆ. ಇದರ ಜೊತೆಗೆ ಇನ್ನೂ ಹಲವು ಹುದ್ದೆ ತುಂಬಬೇಕು. ಹತ್ತು ದಿನ ಅಧಿವೇಶನ ಮಾಡಬೇಕು. ಅದರೊಳಗೆ ಎಲ್ಲ ಮಾಡಬೇಕು. ಹೈಕಮಾಂಡ್ ಹೇಳಿದ ತಕ್ಷಣ ಮಾಡುತ್ತೇನೆ. 136 ಶಾಸಕರು ಸಮರ್ಥರು. ಪಕ್ಷಕ್ಕೆ ಒಳ್ಳೆಯದಾಗೊದಾದರೆ ಹೊಸ ಪ್ರಯೋಗ ಮಾಡೋಣ ಎಂದು ತಿಳಿಸಿದರು.
ದೆಹಲಿಯ ಜಂತರ್ಮಂತರ್ನಲ್ಲಿ ನಡೆಯುತ್ತಿರುವ ಪ್ರತಿಭಟನೆ ಕುರಿತು ಮಾತನಾಡಿ, ನಮ್ಮ ದೇಶ ಯುವಕರ ಮೇಲೆ ನಿಂತಿದೆ. ಪ್ರತಿ ಪೋಷಕರು ತಮ್ಮ ಮಕ್ಕಳು ಒಳ್ಳೆ ಭವಿಷ್ಯ ಕಟ್ಟಿಕೊಳ್ಳಬೇಕು ಎಂದು ಬಯಸುತ್ತಾರೆ. ಈಗ ನ್ಯಾಯಬದ್ಧ ಬದುಕು ಕಟ್ಟಿಕೊಳ್ಳಲು ಕಷ್ಟವಾಗುತ್ತಿದೆ. ಮಕ್ಕಳ ಕಷ್ಟಪಟ್ಟು ಓದಿದ ಬಳಿಕವೂ ಉದ್ಯೋಗ ಸಿಗ್ತಿಲ್ಲ. ಉದ್ಯೋಗ ಸೃಷ್ಟಿ ಮಾಡೋ ಶಕ್ತಿ ಯುವಕರಲ್ಲಿದೆ. ಪೇಪರ್ ಲೀಕ್ ಒಂದು ಮಾರಕ. ಮನಸ್ಸಿಗೆ ನೋವು ಆದವರು ಪ್ರತಿಭಟನೆ ಮಾಡ್ತಿದ್ದಾರೆ. ಪ್ರತಿಭಟನಾಕಾರರನ್ನು ಯಾವ ದೃಷ್ಟಿಯಲ್ಲಿ ನೊಡ್ತಿದ್ದೀವಿ, ಅದು ಸರಿ ಇಲ್ಲ. ಕಾಂಗ್ರೆಸ್ ವಿದ್ಯಾರ್ಥಿಗಳ ಜೊತೆಗೆ ನಿಂತಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಆಗಬೇಕು, ಮಂತ್ರಿಗಳು ರಾಜೀನಾಮೆ ಕೊಡಬೇಕು. ಸಂಸತ್ನಲ್ಲಿ ಚರ್ಚೆಗೆ ಅವಕಾಶ ಕೇಳಿದ್ದೇವೆ, ಯಾವುದಕ್ಕೂ ಸರ್ಕಾರ ಒಪ್ಪುತ್ತಿಲ್ಲ. ಅದಕ್ಕಾಗಿ ನಿನ್ನೆ ಯುವಕರು ಪ್ರತಿಭಟನೆ ನಡೆಸಿದ್ದಾರೆ. ಯುವವಕರು ದೇಶದ ಆಸ್ತಿ ಮುಂದಿನ ಭವಿಷ್ಯ. ಅವರಿಗೆ ಹೊಡೆಯುವುದು ನಮ್ಮ ಮಕ್ಕಳಿಗೆ ನಾವೇ ಹೊಡೆದಂತಲ್ವೆ? ಕಾಂಗ್ರೆಸ್ ಇದರ ವಿರುದ್ಧ ಧ್ವನಿ ಎತ್ತಿದೆ. ಇಂತಹ ಆಂದೋಲಗಳ ಮೂಲಕ ಕಾಂಗ್ರೆಸ್ ಜನರ ಧ್ವನಿಯಾಗಿ ಕೆಲಸ ಮಾಡಿದೆ ಎಂದರು.
Laxmi News 24×7