Breaking News

ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಬಿಎಸ್‌ಎನ್‌ಎಲ್ ನೌಕರರ ಪ್ರತಿಭಟನೆ

Spread the love

ಬೆಳಗಾವಿ:ವೇತನ, ಪಿಂಚಣಿ ಪರಿಷ್ಕರಣೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಗುರುವಾರ ನಗರದ ಭಾರತ ಸಂಚಾರ್ ನಿಗಮ ಲೀ. (ಬಿಎಸ್‌ಎನ್‌ಎಲ್) ಕಚೇರಿ ಆವರಣದಲ್ಲಿ  ಬಿಎಸ್‌ಎನ್‌ಎಲ್ ನೌಕರರ ಸಂಘ, ಡಿಒಟಿ ಪಿಂಚಣಿದಾರರ ಸಂಘ ಮತ್ತು ಗುತ್ತಿಗೆ ಕಾರ್ಮಿಕರ ಒಕ್ಕೂಟದ ನೇತೃತ್ವದಲ್ಲಿ ನೌಕರರು, ಪಿಂಚಣಿದಾರರು, ಗುತ್ತಿಗೆ ಕಾರ್ಮಿಕರು ಪ್ರತಿಭಟನೆ ನಡೆಸಿದರು.
ಬಿಎಸ್‌ಎನ್ ಎಲ್ ನೌಕರರಿಗೆ ವೇತನ ಪರಿಷ್ಕರಣೆ ಆಗಬೇಕು. ನಿವೃತ್ತರಿಗೆ ಶೇ.30ರಷ್ಟು  ಸೌಲಭ್ಯ ಕೊಡಬೇಕು. 2017ರಿಂದಲೇ ಪಿಂಚಣಿದಾರರ ಪರಿಷ್ಕರಣೆ ಜಾರಿ ಆಗಬೇಕು. ಗುತ್ತಿಗೆ ಕಾರ್ಮಿಕರ ಸೇವೆ ಕಡಿತ ನಿಲ್ಲಿಸಿ ಕನಿಷ್ಠ ವೇತನ ಸೌಲಭ್ಯ ಕಲ್ಪಿಸಬೇಕು. ಕ್ಯಾಶುಯಲ್ ಲೇಬರ್ ಮತ್ತು ಟಿಎಸ್‌ಎಂಗಳಿಗೆ 7ನೇ ಕೇಂದ್ರ ವೇತನ ಆಯೋಗ ಜಾರಿಗೊಳಿಸಬೇಕು.
ಕೇಂದ್ರ ಸರ್ಕಾರವು ಬಿಎಸ್‌ಎನ್‌ಎಲ್‌ಸಂಸ್ಥೆಗೆ ಮೂಲಸೌಕರ್ಯ ಒದಗಿಸದ ಕಾರಣ ಸಂಸ್ಥೆ ನಷ್ಟದಲ್ಲಿದೆ. ಇದಕ್ಕೆ ನೌಕರರನುನ ಹೊಣೆಗಾರನನ್ನಾಗಿ ಮಾಡಬಾರದು. ಖಾಸಗಿ ಸಂಸ್ಥೆಗಳಿಗೆ  ಆದ್ಯತೆ ನೀಡುತ್ತಿರುವ ಸರ್ಕಾರ ಬಿಎಸ್‌ಎನ್‌ಎಲ್‌ಗೆ ನೀಡುತ್ತಿಲ್ಲ. 4ಜಿ ಮತ್ತು 5ಜಿ ಸೇವೆಗಳ ವಿಸ್ತರಣೆಗೆ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷೃ ಮಾಡುತ್ತಿರುವುದು ಸಮಸ್ಯೆಗೆ ಮೂಲ ಕಾರಣವಾಗಿದೆ ಎಂದು ದೂರಿದರು.
ರಾಮು ತಟಪಟ್ಟಿ, ಎಸ್.ವಿ. ಪಾಟೀಲ, ಎಸ್.ಎಸ್.ಸಾರಾಪುರೆ, ಅರವಿಂದ ಕವಲಗಿ, ವಾಯ್.ಆರ್.ಹಂಚಿನಮನಿ, ಬಿ.ಬಿ. ಅಂಗಡಿ, ಎಸ್.ಎ.ಮುತ್ತಗಿ ಇತರರಿದ್ದರು.

Spread the love

About Laxminews 24x7

Check Also

ಡಿಸೆಂಬರ್ ಹೊತ್ತಿಗೆ ಕ್ವಿನ್ ಸಿಟಿಯಲ್ಲಿ 200 ಎಕರೆ ಸೆಮಿಕಂಡಕ್ಟರ್ ಪಾರ್ಕ್ ಆರಂಭ: ಎಂ.ಬಿ ಪಾಟೀಲ್

Spread the loveಬೆಂಗಳೂರು: ರಾಜ್ಯದಲ್ಲಿ ಸದ್ಯದಲ್ಲೇ ಜಾರಿಗೆ ಬರಲಿರುವ 2026-2031ರ ನೂತನ ವೈಮಾಂತರಿಕ್ಷ ಮತ್ತು ರಕ್ಷಣಾ ನೀತಿಯಲ್ಲಿ ಆಧುನಿಕ ಎಲೆಕ್ಟ್ರಾನಿಕ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ