Breaking News
Home / ಜಿಲ್ಲೆ / ಹೆಣ್ಣುಮಕ್ಕಳಿಗೆ ಸಂತೋಷ ತರುವ ಹಬ್ಬ ಗುಳ್ಳವನ ಹಬ್ಬ,……?

ಹೆಣ್ಣುಮಕ್ಕಳಿಗೆ ಸಂತೋಷ ತರುವ ಹಬ್ಬ ಗುಳ್ಳವನ ಹಬ್ಬ,……?

Spread the love

ಬಾಗಲಕೋಟೆ: ಹೆಣ್ಣುಮಕ್ಕಳಿಗೆ ಸಂತೋಷ ತರುವ ಹಬ್ಬ ಗುಳ್ಳವನ ಹಬ್ಬ, ಬಾಗಲಕೋಟ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನಲ್ಲಿ ಗುಳ್ಳವ್ವನ ಹಬ್ಬ ಬಲು ಜೋರಾಗಿ ಗುಳ್ಳವ್ವನ ತಯಾರಿಸುತ್ತಿರುವ ರಬಕವಿ ಗ್ರಾಮದ ಬಸಪ್ಪ ಕುಂಬಾರ ಒಂದರಿಷಿನ ಕ್ಯಾದಗಿ ಪರಿಮಳ ಗೂಳ್ಳವನ ಹೆಣ್ಣುಮಕಳ್ಳು ಆಡುತ್ತಾ ಬಂದಿದ್ದಾರೆ. ಉತ್ತತಿ ಬನಕ ತೊಟ್ಟಿಲ ಕಟ್ಟಿ ಜಯ ಒಂದು ಜಯ ಒಂದು ಎಂಬ ಜನಪದ ಹಾಡುಗಳು ಆಶಾಡ ಮಾಸದ ನಾಲ್ಕು ಮಂಗಳವಸರಗಳಂದು ಉತ್ತರ ಕರ್ನಾಟಕದ ಬಾಲೆಯರ ಕಂಟದಿಂದ ಪುಂಖಾಣಿ ಪುಂಕವಾಗಿ ಕೇಳಿಬರುತ್ತಿದೆ.

ಇದು ಜಾನಪದ ಹಬ್ಬದ ಆಚರಣೆಯ ಪ್ರಮೂಕ ಅಂಗವಾಗಿದೆ. ಈ ಆಚರಣೆಯ ಬಹು ಮುಖ್ಯು ಉದ್ದೇಶಿತ ಸಕಲ ಜೀವಿಗಳನ್ನು ಪೊರೆದು ಪೋಸಿಸುವ ಭೂದೇವಿಗೆ ಅರ್ಚನೆ ಸಲ್ಲಿಸುವ ಆಚರಣೆ ಇದಾಗಿದೆ. ಮಣ್ಣಿಂದ ಕಾಯ ಮಣ್ಣಿಂದ ಸಕಲ ಸಂಪದವು ಎಂದು ಪ್ರಾಚೀನ ತತ್ವಜ್ಞಾನಿಗಳು ಆಡಿ ಮಣ್ಣಿನ ಗಣ ಸಿರಿವಂತಿಕೆಯನ್ನು ಮತ್ತು ಮಣ್ಷು ಜೀವನದ ಮೂಲಾದಾರ ಎಂಬುವುದನ್ನು ಸ್ಪಷ್ಟ ಪಡೀಸಿದರು .

ಮಣ್ಣಿ ಮಾತ್ರೋ ಸ್ಥಾನ ವಿರೂವುದಲ್ಲದೆ ನಿತ್ಯ ಮನಕೂಲವನ್ನು ತಾಯಿಯಂತೆ ಸಲುಹುದೆಂಭ ಕಾರಣಕೆ ನಮ್ಮ ಪೂರ್ವಜರು ಮಣ್ಣಿನ ಪೂಜೆಗೆ ಮುಂದಾಗಿ ಕೃತಜ್ಞತೆಗೆ ಮತ್ತು ಗೌರವ ಸಲ್ಲಿಸುವುದಕ್ಕಾಗಿ ಕಾರ ಹುಣ್ಣುಮೆ ಸಂದರ್ಭದಲ್ಲಿ ಮಣ್ಣಿನ ಬಸವಣ್ಣ ಮಾಡಿ ಆಶಾಡದಲ್ಲಿ ಗೂಳ್ಳವನ ಪೂಜೆ, ಭಾದ್ರಪದ ಮಾಸದಲ್ಲಿ, ಗಣೇಶ ದೇವರು ಮತ್ತು ಜೋಕುಮಾರ ಪೂಜೆಯನ್ನು ಮಾಡುವ ಸಂಪ್ರದಾಯವಿದೆ. ಉತ್ತರ ಕರ್ನಾಟಕದಲ್ಲಿ ಗೂಳ್ಳವಾ ಆಚರಣೆ ಬಹೂ ಜನಪ್ರೀಯವಾಗಿರುವ ಜಾನಪದ ಹಬ್ಬ ಗೂಳ್ಳವಾ ಪ್ರತಿಮೆಯನ್ನ ಮಣ್ಣಿನಿಂದ ತಯಾರಿಸಲಾಗುತ್ತದೆ. ಇದನ್ನು ಮಾಸದ ಮೋದಲ ಮಂಗಳವಾರದಿಂದ ಇಡೀ ಮಾಸಾಂತ್ಯ ಒಟ್ಟು ನಾಲ್ಕು ಮಂಗಳವಾರವಾಗಿ ಈ ಆಚಣೆಯಾಗಿ ಆಚರಿಸುವ ಹಬ್ಬವಿದು.

ಈ ಹಬ್ಬದಲ್ಲಿ ಗೂಳ್ಳವನ ಪ್ರತಿ ಸ್ಥಾಪಿಸಿ ಜೋಳ,ಗೋದಿ,ಯಳು ದಾನ್ಯಗಳ ಜೊತಗೆ ಗುಲ್ಲಗಂಜಿಗಳಿಂದ ಶ್ರೀಂಗರಿಸಿ ಪೂಜಿಸಲಾಗುತ್ತದೆ ಅಂದು ಮನೇ ಮನೇಯಲ್ಲಿ ತೂಂಬಿದ ಮಣ್ಣಿನಾರತಿ ಬೇಳಗಿಸುವ ಮುಖಾಂತರ ಬಾಲ್ಯೆಯರು ಸಂಭ್ರಮದಿಂದ ಹಾಡಿ ಹಬ್ಬವನ್ನು ಆಚರಿಸಲಾಗುತ್ತದೆ.

ಈ ಆಚರಣೆ ನೇಪಮಾಡಿ ವಿಶೇಷ ಸಿಹಿ ತಿಂಡಿಗಳನ್ನು ತಯಾರಿಸಿಕೊಂಡು ಊರಿನ ಪಕ್ಕದಲ್ಲಿರುವ ತೋಟ,ಉದ್ಯಾನ ವನ,ನದಿಗಳಿಗೆ ಸಂಭಂದಿಕರೊಂದಿಗೆ ತೆರಳಿ ಕಾಲಕಳೆಯುವ ಒಂದು ಹಬ್ಬದ ಈ ಆಚರಣೆ ಆಗಿದೆ. ಸದ್ಯ ಆಧುನಿಕ ಭರಾಟೆಯಲ್ಲಿ ಗ್ರಾಮೀಣ ಹಬ್ಬಗಳು ಮರೇಯಾಗಿ ಉಳಿಯುತ್ತಿದ್ದು ಈ ಅಚರಣೆಗಳು ಉತ್ತರ ಕರ್ನಾಟಕದಲ್ಲಿ ಬಹೂ ಜನರ ಪ್ರಿಯವಾಗಿ ಇನ್ನು ಕೆಲವುಕಡೆ ಆಚರಣೆ ನಡೆಯುತ್ತದೆ.


Spread the love

About Laxminews 24x7

Check Also

ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

Spread the love ಬೆನಕಟ್ಟಿ: ಗ್ರಾಮಕ್ಕೆ ಆಗಮಿಸಿದ ಮಾಜಿ ಕೇಂದ್ರ ಸಚಿವ ದಿ. ಸುರೇಶ ಅಂಗಡಿ ಪುತ್ರಿ ಶ್ರದ್ಧಾ ಶೆಟ್ಟರ್ ಬಿಜೆಪಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ