Home / ಜಿಲ್ಲೆ / ಬೆಂಗಳೂರು / ಲಾಕ್‍ಡೌನ್ ರಿಲೀಫ್ ಜೊತೆ ಖಡಕ್ ಎಚ್ಚರಿಕೆ:ಪೊಲೀಸ್ ಆಯುಕ್ತ ಭಾಸ್ಕರ್ ರಾವ್

ಲಾಕ್‍ಡೌನ್ ರಿಲೀಫ್ ಜೊತೆ ಖಡಕ್ ಎಚ್ಚರಿಕೆ:ಪೊಲೀಸ್ ಆಯುಕ್ತ ಭಾಸ್ಕರ್ ರಾವ್

Spread the love

ಬೆಂಗಳೂರು: ಕಂಟೈನ್‍ಮೆಂಟ್ ಝೋನ್ ಹೊರತುಪಡಿಸಿ ಬಹುತೇಕ ಬೆಂಗಳೂರು ನಾಳೆಯಿಂದ ಓಪನ್ ಆಗಲಿದೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಬೆಂಗಳೂರಿಗರಿಗೆ ಬಹುತೇಕ ರಿಲೀಫ್ ನೀಡಿದ್ದಾರೆ. ಪಾಸ್ ಇಲ್ಲದೆಯೂ ಓಡಾಡಬಹುದು ಎಂದಿದ್ದಾರೆ. ಕೆಲವೊಂದು ಷರತ್ತು ವಿಧಿಸಲಾಗಿದ್ದು, ನಿಯಮ ಉಲ್ಲಂಘಿಸಿದ್ರೆ, ಸೆಕ್ಷನ್ 188ರ ಅಡಿ ಕೇಸ್ ದಾಖಲಿಸಲಾಗುತ್ತೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ನಾಳೆಯಿಂದ ಅಂದ್ರೆ ಸೋಮವಾರದಿಂದ ಪಾಸ್ ಇಲ್ಲದೆಯೂ ಓಡಾಡಬಹುದು. ಒಂದು ಪೊಲೀಸರು ಪರಿಶೀಲನೆಗೆ ತಡೆದಾಗ ರಸ್ತೆಗೆ ಬಂದಿದ್ದರ ಬಗ್ಗೆ ಸ್ಪಷ್ಟ ಉತ್ತರ ನೀಡಬೇಕು. ಉದ್ಯೋಗಿಗಳಾಗಿದ್ರೆ ಐಡಿ ಕಾರ್ಡ್ ತೋರಿಸಬೇಕು. ಸೋಮವಾರದಿಂದ ಟ್ರಾಫಿಕ್ ನಿಯಮಗಳನ್ನ ಕಡ್ಡಾಯವಾಗಿ ಪಾಲಿಸತಕ್ಕದ್ದು, ಸಿಕ್ಕಿ ಬಿದ್ರೆ ದಂಡ ಪಾವತಿಸಬೇಕು. ಸಂಜೆ 6.30ರ ನಂತರ ಬೆಂಗಳೂರಿನಲ್ಲಿ ಕರ್ಫ್ಯೂ ಜಾರಿಯಾಗುತ್ತದೆ. ಸಂಜೆ 7 ರಿಂದ ಬೆಳಗ್ಗೆ 9 ಗಂಟೆವರೆಗೆ ಯಾರು ಮನೆಯಿಂದ ಹೊರ ಬರುವಂತಿಲ್ಲ.

ಕರ್ಫ್ಯೂ ಸಮಯದಲ್ಲಿ ಹೊರ ಬರುವ ಜನರು (ಐಟಿ/ಬಿಟಿ ಉದ್ಯೋಗಿಗಳು) ಪಾಸ್ ಪಡೆದು ಓಡಾಡಬೇಕು. ಸಂಜೆ ಕರ್ಫ್ಯೂ ಜಾರಿಯಾಗುತ್ತಿದ್ದಂತೆ ಎಲ್ಲ ವಿಧದ ಅಂಗಡಿಗಳು ಸೇರಿದಂತೆ ಮದ್ಯದಂಗಡಿಗಳು ಬಂದ್ ಮಾಡಬೇಕು. ಬೆಳಗ್ಗೆ 7 ರಿಂದ 9 ಗಂಟೆವರೆಗೆ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದ್ದು, ವ್ಯವಹಾರದ ವೇಳೆ ಮಾಸ್ಕ್, ಗ್ಲೌಸ್, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಅನಿವಾರ್ಯ.

ಸೋಮವಾರ ಬೆಂಗಳೂರಿನಲ್ಲಿ ಚಿನ್ನ, ಪಾತ್ರೆ, ಬಟ್ಟೆ ಸೇರಿದಂತೆ ಎಲ್ಲಾ ಅಂಗಡಿಗಳನ್ನು ತೆರೆಯಬಹುದು. ಇಲ್ಲಿಯೂ ಕೊರೊನಾ ನಿಯಮಗಳನ್ನು ವ್ಯಾಪಾರಸ್ಥರು ಪಾಲಿಸಬೇಕು. ಹೋಟೆಲ್ ಗಳಲ್ಲಿ ಪಾರ್ಸೆಲ್ ಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಮಾಲ್, ಪಾರ್ಕ್, ದೇವಸ್ಥಾನ, ಸಲೂನ್, ಬ್ಯೂಟಿ ಪಾರ್ಲರ್ ತೆರೆಯುವಂತಿಲ್ಲ. ಬಿಎಂಟಿಸಿ, ಕೆಎಸ್‍ಆರ್ ಟಿಸಿ, ಮೆಟ್ರೋ ಸಂಚಾರ ಇರಲ್ಲ. ಮದುವೆಯಲ್ಲಿ 50 ಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ. ಅಂತ್ಯಕ್ರಿಯೆಗಳಲ್ಲಿ 20ಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ. ಇನ್ನು ಬೇರೆ ರಾಜ್ಯಗಳಿಗೆ, ಜಿಲ್ಲೆಗಳಿಗೆ ಹೋಗುವವರು ನಾಳೆಯಿಂದ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬಹುದು


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ