ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಗುಡುಗು, ಸಿಡಿಲು, ಬಿರುಗಾಳಿ ಸಹಿತ ಭಾರೀ ಮಳೆಯಾಗಿದ್ದು, ಬಿರುಗಾಳಿಯ ರಭಸಕ್ಕೆ ಮನೆಗಳ ಛಾವಣಿ ಹಾಗೂ ಹೆಂಚುಗಳು ಹಾರಿವೆ.
ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಹೋಬಳಿಯಾದ್ಯಂತ ಭಾನುವಾರ ಸಂಜೆ ಭಾರೀ ಮಳೆ ಸುರಿದಿದ್ದು, ಬಿರುಗಾಳಿ ಸಹಿತ ಮಳೆಗೆ ಜನ ತತ್ತರಿಸಿ ಹೋಗಿದ್ದಾರೆ.
ಸಂಜೆ ಗುಡುಗು ಸಹಿತ ಪ್ರಾರಂಭವಾದ ಬಿರುಗಾಳಿ ಮಳೆಗೆ ಶನಿವಾರಸಂತೆ ಸಮೀಪದ ಅಪ್ಪಶೆಟ್ಟಳ್ಳಿ, ದೊಡ್ಡ ಬಿಳಾಹ, ಗಸುಳುಗಳಲೆ ಕಾಲೋನಿ ಹಾಗೂ ಚಿನ್ನಳ್ಳಿ ಗ್ರಾಮಗಳ ಹಲವು ಮನೆಗಳ ಮೇಲ್ಛಾವಣಿ, ಹೆಂಚುಗಳು ಹಾಗೂ ವಿದ್ಯುತ್ ಕಂಬಗಳು ದರೆಗೆ ಉರುಳಿ ಅಪಾರ ನಷ್ಟ ಸಂಭವಿಸಿದೆ. ಮುಂಗಾರು ಪೂರ್ವದ ಮಳೆಯ ಅಬ್ಬರ ಕಂಡು ಗ್ರಾಮಸ್ಥರು ಆತಂಕಗೊಂಡಿದ್ದಾರೆ.