ಬೆಳಗಾವಿ -ಇಲ್ಲಿಯ ಸ್ಮಾರ್ಟ್ ಸಿಟಿಯಿಂದ ಅಭಿವೃದ್ಧಿಪಡಿಸಿರುವ ಆಯುಷ್ ಬೆಳಗಾವಿ ಆ್ಯಪ್ ಈಗ ಪ್ಲೇ ಸ್ಟೋರ್ ನಲ್ಲಿ ಲಭ್ಯವಿದೆ.
ಸಧ್ಯಕ್ಕೆ ಕೋವಿಡ್ -19 ಕುರಿತು ಮೊದಲ್ಯ ಆದ್ಯತೆಯ ಮೇಲೆ ಮಾಹಿತಿಗಳನ್ನು ನೀಡುವ ಈ ಆ್ಯಪ್ ನಂತರದಲ್ಲಿ ಬೆಳಗಾವಿ ನಗರದ ಸಂಪೂರ್ಣ ಮಾಹಿತಿ ಒದಗಿಸುವ ಸಿಟಿಜನ್ ಆ್ಯಪ್ ಆಗಿ ಪರಿವರ್ತನೆಯಾಗಲಿದೆ.
ಪ್ಲೇ ಸ್ಟೋರ್ ಗೆ ಹೋಗಿ AyushBelagavi ಎಂದು ಹುಡುಕಿದರೆ ಆ್ಯಪ್ ಲಭ್ಯವಿದೆ. ಕೊರೋನಾ ಕುರಿತು ಕರ್ನಾಟಕದ ಮತ್ತು ಬೆಳಗಾವಿ ಜಿಲ್ಲೆಯ ಸಂಪೂರ್ಣ ಮಾಹಿತಿ ಇದರಲ್ಲಿ ಲಭ್ಯವಿದೆ. ಕೆಲವು ಮಾಹಿತಿಗಳು ಇನ್ನೂ ಅಪ್ ಡೇಟ್ ಆಗಬೇಕಿದೆ.
ಕೋವಿಡ್ ಫಿವರ್ ಕ್ಲಿನಿಕ್, ಕ್ವಾರಂಟೈನ್ ಸೆಂಟರ್, ಲ್ಯಾಬ್ ಆ್ಯಂಡ್ ಟೆಸ್ಟ್ ಸೆಂಟರ್, ಮೆಡಿಕಲ್ ಸಫ್ಲೈಸ್, ಪ್ರಿವೆನ್ಶನ್ ಆ್ಯಂಡ್ ಪ್ರಿಕಾಶನ್ಸ್, ಹೈಜಿನ್, ರೆಡ್ ಝೋನ್, ಆರೋಗ್ಯ ಸೇತು, ಎಸೆನ್ಶಿಯಲ್ ಕಮಾಡಿಟಿಸ್, ಪಿಎಂ ಕೇರ್ಸ್, ಗವರ್ನಮೆಂಟ್ ಆರ್ಡರ್ಸ್, ಹೆಲ್ಪಲೈನ್ ನಂಬರ್ ಇತ್ಯಾದಿ ಇದರಲ್ಲಿದೆ. ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಸಲ್ಲಿಸುವುದಕ್ಕೂ ಅದರಲ್ಲಿ ಅವಕಾಶ ಕಲ್ಪಿಸಲಾಗಿದೆ.
ಆ್ಯಪ್ ನಲ್ಲಿ ಇನ್ನೂ ಸಾಕಷ್ಟು ವಿಷಯಗಳು ಅಪ್ ಡೇಟ್ ಆಗಬೇಕಿದೆ. ಜೊತೆಗೆ ಈಗ ಕೇವಲ ಇಂಗ್ಲೀಷ್ ನಲ್ಲಿ ಮಾಹಿತಿಗಳಿದ್ದು, ಸ್ಥಳೀಯ ಭಾಷೆಯಲ್ಲಿ ಮಾಹಿತಿ ಲಭ್ಯವಾಗುವಂತೆ ಮಾಡಬೇಕಿದೆ.