ಬೆಳಗಾವಿ: ಕೊರೊನಾದಿಂದ ಸರ್ಕಾರ ಲಾಕ್ ಡೌನ್ ಜಾರಿ ಮಾಡಿರುವುದರಿಂದ ಬಡ ಕುಟುಂಬಗಳ ಆಹಾರಕ್ಕೆ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್ಸ್ ಫಾರ್ ಚೇಂಜ್ ಫೌಂಡೇಶನಿಂದ ಇಲ್ಲಿನ ಕಣಬರಗಿಯಲ್ಲಿ ವಾಸವಾಗಿರುವ ಪ್ಲಾಸ್ಟಿಕ್, ಬಾಟಲ್ ಆಯ್ದು ಜೀವನ ಸಾಗಿಸುತ್ತಿರುವ ಸುಮಾರು 50 ಕುಟುಂಬಗಳಿಗೆ ಮಹಿಳಾ ಕಲ್ಯಾಣ ಸಂಸ್ಥೆಯ ಸಹಯೋಗದಲ್ಲಿ ದಿನಸಿ ಸಾಮಗ್ರಿಗಳ ಕಿಟ್ ವಿತರಿಸಿದರು.
ಅಕ್ಕಿ, ಬೇಳೆ, ರವಾ, ಗೋಧಿಹಿಟ್ಟು, ಎಣ್ಣೆ ಇತ್ಯಾದಿ ವಸ್ತುಗಳನ್ನು ಒಳಗೊಂಡಿರುವ ಕಿಟ್ ನೀಡಿದರು.
ಮಹಿಳಾ ಕಲ್ಯಾಣ ಸಂಸ್ಥೆಯ ಗೌರವ ಕಾರ್ಯದರ್ಶಿ ವೈಜಯಂತಿ ಚೌಗಲಾ ಮಾತನಾಡಿ ಅಲ್ಲಿನ ನಿವಾಸಿಗಳಿಗೆ ಕೊರೊನಾ ವೈರಸ್ ಹರಡುವಿಕೆಯಿಂದ ರಕ್ಷಿಸಿಕೊಳ್ಳಲು ಮಾರ್ಗಸೂಚಿಗಳನ್ನು ತಿಳಿಸಿ ಆಹಾರ ಸಾಮಗ್ರಿಗಳ ಕಿಟ್ ನ್ನು ವಿತರಿಸಿ ಅವರಲ್ಲಿ ಆತ್ಮಸ್ಥೈರ್ಯ ತುಂಬಿದರು.
ರೆಡ್ ಕ್ರಾಸ್ ಸಂಸ್ಥೆಯ ಕೊರೊನಾ ಸೈನಿಕರಾದ ಕಿರಣಕುಮಾರ ಪಾಟೀಲ, ವಿಶಾಲ ಥೈಕಾರ, ಪ್ರವೀಣ ಹಿರೇಮಠ, ಸಹಕರಿಸಿದರು, ಮಾಳಮಾರುತ ಪೊಲೀಸ ಠಾಣೆಯ ಎ. ಎಸ್. ಆಯ್ ದುಂಡಗಿ, ಸಂಗಾತಿ ಕೌಟುಂಬಿಕ ಸಲಹಾ ಕೇಂದ್ರದ ಸಲಹಾಗಾರ ಸಂತೋಷ ಬಡಿಗೇರ, ಶಾಹಿನ ಹೊಂಬಳ, ಕಿರಣ ಚೌಗಲಾ ಉಪಸ್ಥಿತರಿದ್ದರು.