ಬೆಳಗಾವಿ: ಕೋವಿಡ್-19 ವೈರಾಣು ಜಿಲ್ಲೆಯ ಸಾರ್ವಜನಿಕರನ್ನು ಕಂಗೆಡಿಸಿದ ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರವು
ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದವರಿಗೂ ಪಡಿತರ ದೊರೆಯಲಿ ಎಂಬ ಸದುದ್ದೇಶದಿಂದ ಏ.14 , 2020 ರಿಂದ ಪಡಿತರವನ್ನು ವಿತರಿಸಲು ಪ್ರಾರಂಭಿಸಿದೆ. ಈ ಯೋಜನೆಯಡಿ ಅರ್ಜಿದಾರರು ಏಪ್ರಿಲ್ 24, 2020 ರ ರಾತ್ರಿ 8-00 ಗಂಟೆಯವರೆಗೆ ತಮ್ಮ ಪಾಲಿನ ಪಡಿತರ ಧಾನ್ಯವನ್ನು ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದ್ದಾರೆ.
ಆನ್ಲೈನ್‌ದಲ್ಲಿ ಸಲ್ಲಿಸಿದ ಪ್ರತಿ ಬಿ.ಪಿ.ಎಲ್(ಆದ್ಯತಾ) ಪಡಿತರ ಚೀಟಿ ಅರ್ಜಿಗೆ ಉಚಿತವಾಗಿ 10ಕೆ.ಜಿ ಯಂತೆ ಅಕ್ಕಿಯನ್ನು ಮತ್ತು ಎ.ಪಿ.ಎಲ್(ಆದ್ಯತರ) ಪಡಿತರ ಚೀಟಿ ಏಕ
ಸದಸ್ಯ ಅರ್ಜಿಗೆ 5 ಕೆ.ಜಿ ಅಕ್ಕಿ ಮತ್ತು ಇಬ್ಬರಿಗಿಂತ ಹೆಚ್ಚು ಸದಸ್ಯರಿರುವ ಅರ್ಜಿಗೆ 10 ಕೆ.ಜಿ ಅಕ್ಕಿಯನ್ನು
ಪ್ರತಿ ಕೆ.ಜಿಗೆ 15/- ರೂಪಾಯಿಯಂತೆ ವಿತರಿಸಲಾಗುತ್ತಿದೆ.
2019 ಮೇ ಮಾಹೆಯಿಂದ ಇಲ್ಲಿಯವರೆಗೆ
ಅರ್ಜಿ ಸಲ್ಲಿಸಿದವರು 24-04-2020 ರವರೆಗೆ” ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಲು
ಕೋರಿದೆ. ಪಡಿತರ ಚೀಟಿದಾರರು ಅರ್ಜಿಯಲ್ಲಿ ತಾವು ನಮೂದಿಸಿದ ನ್ಯಾಯಬೆಲೆ ಅಂಗಡಿಗಳಲ್ಲಿ ಮಾತ್ರ
ಈ ಪಡಿತರವನ್ನು ಪಡೆಯಬಹುದಾಗಿದೆ.
ಅರ್ಜಿದಾರರು ತಾವು ಸಲ್ಲಿಸಿದ ಅರ್ಜಿಯ ಪ್ರತಿ
(ಸ್ವೀಕೃತಿ)ಯೊಂದಿಗೆ ಆಧಾರ ಕಾರ್ಡ ಮತ್ತು ಮೊಬೈಲ್‌ನ್ನು ತೆಗೆದುಕೊಂಡು ಹೋಗಬೇಕು. ಆಧಾರ
ಕಾರ್ಡ ದೃಢೀಕರಣದೊಂದಿಗೆ ಅರ್ಜಿದಾರರ ಮೊಬೈಲ್‌ಗೆ ಬರುವ ಓ.ಟಿ.ಪಿ(One time password)
ದಾಖಲಿಸಿ ಪಡಿತರ ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.