Breaking News

ಪೆಟ್ರೋಲ್‌ ಸಿಗಲ್ಲ ಅಂತ ಬಂಕ್‌ಗೆ ಮುಗಿಬಿದ್ದ ಬೆಳಗಾವಿ ಜನ

Spread the love

ಬೆಳಗಾವಿ: ನಾಲ್ಕೈದು ದಿನ ಪೆಟ್ರೋಲ್‌  ಸಿಗುವುದಿಲ್ಲ ಎಂಬ ಫೇಕ್‌ ಮೆಸೇಜ್‌  ನೋಡಿದ ಜನತೆ ತಮ್ಮ ವಾಹನಗಳಿಗೆ ಪೆಟ್ರೋಲ್‌ ತುಂಬಿಸಲು ಮುಗಿಬಿದ್ದ ಘಟನೆ ಬೆಳಗಾವಿಯಲ್ಲಿನಡೆದಿದೆ.

ಸೋಮವಾರ ರಾತ್ರಿ ಬಹುತೇಕ ಪೆಟ್ರೋಲ್ ಬಂಕ್‌ಗಳಲ್ಲಿ ಜನರು ಸರತಿ ಸಾಲಿನಲ್ಲಿ ವಾಹನ ನಿಲ್ಲಿಸಿದ್ದರು. ಅಜಮ್ ನಗರ, ವೈಭವ್ ನಗರ, ಕೊಲ್ಲಾಪುರ ಸರ್ಕಲ್, ನೆಹರು ನಗರ, ಸೇಠ್ ಪೆಟ್ರೋಲ್ ಬಂಕ್, ವೈಭವ ನಗರ ಗಾಂಧಿ ನಗರ, ಚೆನ್ನಮ್ಮ ಸರ್ಕಲ್ ಹೀಗೆ ನಗರದಲ್ಲಿ ಬೈಕ್‌, ಕಾರುಗಳಿಗೆ ಪೆಟ್ರೋಲ್‌ ಹಾಕಿಸಿದ್ದಾರೆ.

ಕೆಲವರು ನೀರಿನ ಬಾಟಲಿಗಳಲ್ಲಿ ಪೆಟ್ರೋಲ್‌ ತುಂಬಿಸಿದ್ದಾರೆ. ದಿಢೀರ್‌ ದಟ್ಟಣೆಯಿಂದ ಪರಿಸ್ಥಿತಿ ನಿಯಂತ್ರಣ ಮಾಡಲು ಬಂಕ್‌ ಸಿಬ್ಬಂದಿಯೂ ಪರದಾಟ ನಡೆಸಿದರು.

ಭಾರತದಲ್ಲಿ ಪೆಟ್ರೋಲ್‌, ಡೀಸೆಲ್‌ ವಿತರಣೆಗೆ ಸದ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ. ಜನರು ಯಾವುದೇ ಸುಳ್ಳು ವದಂತಿಯನ್ನು ನಂಬುವ ಅಗತ್ಯವಿಲ್ಲ.


Spread the love

About Laxminews 24x7

Check Also

ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು

Spread the love ಬೆಳಗಾವಿ: ಡಾ.ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು. ಹೀಗಾಗಿ, ಅವರ ಕೃತಿಗಳಲ್ಲಿ ಸ್ತ್ರೀತ್ವದ ಅಂಶಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ