Breaking News

ಬೆಳಗಾವಿ: ವಿಜ್ಞಾನ ವನಕ್ಕೆ ಸಚಿವ ಈಶ್ವರ ಖಂಡ್ರೆ ಭೇಟಿ

Spread the love

ಬೆಳಗಾವಿ: ಸುವರ್ಣಸೌಧದ ಆವರಣದಲ್ಲಿರುವ ‘ವಿಜ್ಞಾನ ವನ’ಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಸಚಿವ ಈಶ್ವರ ಖಂಡ್ರೆ ಗುರುವಾರ ಭೇಟಿ ನೀಡಿ, ಮಕ್ಕಳಲ್ಲಿ ಆಟದ ಮೂಲಕ ವಿಜ್ಞಾನದ ಅರಿವು ಮೂಡಿಸುವ ವಿನೂತನ ಪರಿಕಲ್ಪನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ವಿಜ್ಞಾನ ವನದಲ್ಲಿರುವ ವಿವಿಧ ವೈಜ್ಞಾನಿಕ ಪರಿಕರಗಳನ್ನು ವೀಕ್ಷಿಸಿದ ಸಚಿವರು, ಮಕ್ಕಳು ಹಾಗೂ ಸಾರ್ವಜನಿಕರು ಮನರಂಜನೆಯೊಂದಿಗೆ ವಿಜ್ಞಾನದ ಮೂಲತತ್ವಗಳನ್ನು ಸುಲಭವಾಗಿ ತಿಳಿದುಕೊಳ್ಳಲು ಈ ಕೇಂದ್ರ ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಬಳಿಕ ವಿಜ್ಞಾನ ವನದ ಆವರಣದಲ್ಲಿ ಸಸಿ ನೆಟ್ಟು ನೀರೆರೆಯುವ ಮೂಲಕ ಪರಿಸರ ಸಂರಕ್ಷಣೆಯ ಸಂದೇಶ ಸಾರಿದರು.
ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಅವರು ವಿಜ್ಞಾನ ವನದ ವಿಶೇಷತೆಗಳು ಹಾಗೂ ಅದರ ಉದ್ದೇಶಗಳ ಕುರಿತು ಸಚಿವರಿಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಶಾಸಕ ಗಣೇಶ ಹುಕ್ಕೇರಿ, ಜಿಪಂ ಉಪಕಾರ್ಯದರ್ಶಿ (ಅಭಿವೃದ್ಧಿ) ಬಸವರಾಜ ಅಡವಿಮಠ, ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಜೇಶ್ವರಿ ಈರನಟ್ಟಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಕಿರಣ ಘೋರ್ಪಡೆ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಯಶವಂತಕುಮಾರ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀನಾಥ ಕಡೋಲಕರ್, ವಲಯ ಅರಣ್ಯಾಧಿಕಾರಿ ಗಿರೀಶ ಇಟಗಿ ಇತರರಿದ್ದರು.

Spread the love

About Laxminews 24x7

Check Also

15 ದಿನದ ಹಿಂದಷ್ಟೇ ಉದ್ಘಾಟನೆಯಾದ ಕೃಷ್ಣಪಥ ಹೆದ್ದಾರಿ ಈಗ ಸಾವಿನ ಹೈವೇ

Spread the loveಬೆಂಗಳೂರು: ಕಳೆದ 15 ದಿನದ ಹಿಂದಷ್ಟೇ ಉದ್ಘಾಟನೆಯಾದ ಬೆಂಗಳೂರಿನ ಕೃಷ್ಣಪಥ ಹೆದ್ದಾರಿ ಈಗ ಸಾವಿನ ಹೈವೇ ಆಗ್ತಿದೆ. ಬಹುಕೋಟಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ