Breaking News

ಅನ್ನಭಾಗ್ಯ ಅಕ್ಕಿಗೆ ಸ್ಪಲ್ಪ ಅರಿಶಿಣ ಬೆರೆಸಿ ಅಯೋಧ್ಯೆಯಿಂದ ತಂದಿರುವ ಪ್ರಸಾದ ಅಂದಿದ್ರು: ಬಿಜೆಪಿಗೆ ಡಿಕೆಶಿ ಟಾಂಗ್‌

Spread the love

ಬೆಳಗಾವಿ: ನಾವು ನೀಡಿದ್ದ ಅಕ್ಕಿಗೆ ಸ್ವಲ್ಪ ಅರಿಶಿನ ಬೆರೆಸಿ ಇದು ಅಯೋಧ್ಯೆಯಿಂದ ತಂದಿರುವ ಪ್ರಸಾದ್‌ ಅಂದಿದ್ರು ಎಂದು ಬಿಜೆಪಿಗೆ ಸಿಎಂ ಡಿ.ಕೆ.ಶಿವಕುಮಾರ್‌ ಟಾಂಗ್‌ ಕೊಟ್ಟರು.

ಬೆಳಗಾವಿಯ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ನೀವು ಮಾಧ್ಯಮದಲ್ಲಿ ನೋಡ್ತಿದ್ದೀರಿ. ಅವರೇನು ಸುಳ್ಳು ಹೇಳ್ತಿಲ್ಲ. ದೇಶದ ಜನತೆಯ ನಂಬಿಕೆಗೆ ದ್ರೋಹ ಆಗಿದೆ ಎಂದು ರಾಮಮಂದಿರ ದೇಣಿಗೆ ಕಳ್ಳತನಕ್ಕೆ ಬೇಸರ ವ್ಯಕ್ತಪಡಿಸಿದರು.

ಇವತ್ತು ಸುವರ್ಣಸೌಧದಲ್ಲಿ ಕಿತ್ತೂರು ಕರ್ನಾಟಕದ ಶಾಸಕರು‌ ಹಾಗೂ ಅಧಿಕಾರಿಗಳ ಸಭೆ ಮಾಡಿದ್ದೆ. ಪ್ರತಿಯೊಂದು ಮುಜರಾಯಿ ಇಲಾಖೆಗೆ ಸಂಬಂಧಪಟ್ಟ ದೇವಸ್ಥಾನಗಳಲ್ಲಿ ಸಿಸಿಟಿವಿ ಅಳವಡಿಸುವಂತೆ ಸಭೆಯಲ್ಲಿ ತಿಳಿಸಿದ್ದೇನೆ. ರಾಮಮಂದಿರ ನಿರ್ಮಾಣಕ್ಕೆ ದೇಶದ ಪ್ರತಿಯೊಬ್ಬರು ಭಕ್ತಿಯ ಕಾಣಿಕೆ ನೀಡಿದ್ದಾರೆ. ಬೇರೆ ರಾಜ್ಯಗಳಲ್ಲಿ ನಡೆಯುತ್ತಿರುವ ದೇವಸ್ಥಾನದ ಹಣ ದುರುಪಯೋಗವಾಗಬಾರದೆಂದು ಈ ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದರು.

ನಾವು ನೀಡಿದ್ದ ಎಲ್ಲ ಯೋಜನೆಗಳು ಜಾರಿಯಲ್ಲಿರುತ್ತವೆ. ಈಗಾಗಲೇ ರಾಹುಲ್ ಗಾಂಧಿಯವರು ದೇಶದ ಸಮಗ್ರತೆಗಾಗಿ ಯುವಕರ ದೃಷ್ಟಿಯಿಂದ ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಪಾದಯಾತ್ರೆ ಮಾಡುವ ಮೂಲಕ ಜನರ ನಾಡಿಮಿಡಿತ ಅರಿತಿದ್ದಾರೆ. ನಾಯಕತ್ವ ಗುರುತಿಸುವ ಸಲುವಾಗಿ ಕಾಲೇಜುಗಳಲ್ಲಿ ವಿದ್ಯಾರ್ಥಿ ಎಲೆಕ್ಷನ್ ಕಂಡಕ್ಟ್ ಮಾಡಬೇಕು ಅಂತ ರಾಹುಲ್ ಗಾಂಧಿ ಮಾರ್ಗದರ್ಶನ ಮಾಡಿದ್ದಾರೆ ಎಂದರು.


Spread the love

About Laxminews 24x7

Check Also

15 ದಿನದ ಹಿಂದಷ್ಟೇ ಉದ್ಘಾಟನೆಯಾದ ಕೃಷ್ಣಪಥ ಹೆದ್ದಾರಿ ಈಗ ಸಾವಿನ ಹೈವೇ

Spread the loveಬೆಂಗಳೂರು: ಕಳೆದ 15 ದಿನದ ಹಿಂದಷ್ಟೇ ಉದ್ಘಾಟನೆಯಾದ ಬೆಂಗಳೂರಿನ ಕೃಷ್ಣಪಥ ಹೆದ್ದಾರಿ ಈಗ ಸಾವಿನ ಹೈವೇ ಆಗ್ತಿದೆ. ಬಹುಕೋಟಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ