ಬೆಳಗಾವಿ: ಸತೀಶ್ ಜಾರಕಿಹೊಳಿ ಅವರಿಗೆ ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಗಲಿ ಎಂದು ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ. ಸೋಮವಾರ ಬೆಳಗಾವಿ ನಗರದ ರೈಲ್ವೆ ನಿಲ್ದಾಣದ ಬಳಿ ಇರುವ ಹಜರತ್ ಸೈಯ್ಯದ ಮುರಾದಲಿ ಶಾ ದರ್ಗಾದಲ್ಲಿ ಪ್ರಾರ್ಥನೆ ಪ್ರಾರ್ಥನೆ ಸಲ್ಲಿಸಲಾಗಿದೆ. ಕಾಂಗ್ರೇಸ್ ಕಾರ್ಯಕರ್ತೆ ಆಯೇಶಾ ಸನದಿ ನೇತೃತ್ವದಲ್ಲಿ ಮುರಾದಲಿ ಶಾಗೆ ಹೂವಿನ ಹೊದಿಕೆ ಅರ್ಪಿಸಿ ಸತೀಶ್ ಜಾರಕಿಹೊಳಿಗೆ ಕೆಪಿಸಿಸಿ ಅಧ್ಯಕ್ಷಗಿರಿ ಹಾಗೂ ಡಿಸಿಎಂ ಹುದ್ದೆ ಸಿಗಲೆಂದು ಕೈಯಲ್ಲಿ ಬಿತ್ತಿ …
Read More »ಜಮೀರ್ ಸಚಿವ, ಡಿಸಿಎಂ ಆಗದಂತೆ ಷಡ್ಯಂತ್ರ – ವೈರಲ್ ಆಡಿಯೋ ಬಗ್ಗೆ ಮೊಹಮ್ಮದ್ ಸಿರಾಜ್ ಪ್ರತಿಕ್ರಿಯೆ
ದಾವಣಗೆರೆ: ಜಮೀರ್ ಅಹಮ್ಮದ್ ಹೆಸರಿಗೆ ಮಸಿ ಬಳಿಯೋಕೆ ಯಾರೋ ಆಡಿಯೋ ಬಿಟ್ಟಿದ್ದಾರೆ ಎಂದು ಮೊಹಮ್ಮದ್ ಸಿರಾಜ್ ಆರೋಪಿಸಿದ್ದಾರೆ. ದಾವಣಗೆರೆ ಉಪಚುನಾವಣೆ ವಿಚಾರವಾಗಿ ವೈರಲ್ ಆಗಿರುವ ಆಡಿಯೋ ಬಗ್ಗೆ ಅವರು ಮಾತನಾಡಿದರು. ಈ ವೇಳೆ, ಸಾಹೇಬ್ರು ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ಕಾಂಗ್ರೆಸ್‌ಗಾಗಿ ಶ್ರಮಿಸಿದ್ದಾರೆ. ಜಮೀರ್ ಹೆಸರಿಗೆ ಮಸಿ ಬಳಿಯಲು ಯಾರೋ ಈ ಪ್ರಯತ್ನ ಮಾಡಿದ್ದಾರೆ ನಮ್ಮಿಬ್ಬರ ಮಧ್ಯೆ ಅಂತಹ ಚರ್ಚೆಗಳೇ ನಡೆದಿಲ್ಲ. ಯಾರೋ ಈ ರೀತಿ ಮಾಡಿದ್ದಾರೆ. ನನಗೆ ಈ …
Read More »ಸಿದ್ದರಾಮಯ್ಯ ಗ್ಯಾಂಗ್‌ಗೆ ಕತ್ತರಿ ಹಾಕೋಕೆ ಕಾಂಗ್ರೆಸ್‌ನವರಿಂದಲೇ ಆಡಿಯೋ ರಿಲೀಸ್: ಅಶೋಕ್
ಬೆಂಗಳೂರು: ಸಿದ್ದರಾಮಯ್ಯ ಗ್ಯಾಂಗ್‌ಗೆ ಕತ್ತರಿ ಹಾಕೋಕೆ ಆಡಿಯೋ ರಿಲೀಸ್ ಆಗಿದೆ ಅಂತ ವಿಪಕ್ಷ ನಾಯಕ ಆರ್. ಅಶೋಕ್ ಆರೋಪ ಮಾಡಿದ್ದಾರೆ. ಮಾಜಿ ಸಚಿವ ಜಮೀರ್ ಅಹಮದ್ ಅವರದ್ದು ಎನ್ನಲಾದ ಆಡಿಯೋ ವೈರಲ್ ಆದ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ಗ್ಯಾಂಗ್‌ಗೆ ಕತ್ತರಿ ಹಾಕೋಕೆ ಈ ಆಡಿಯೋ ರಿಲೀಸ್ ಆಗಿದೆ. ಸಿದ್ದರಾಮಯ್ಯ ಗ್ಯಾಂಗ್ ಹುಷಾರಾಗಿ ಇರಬೇಕು. ಚುನಾವಣೆ ಆಗಿ ಎಷ್ಟು ದಿನ ಆಯ್ತು. ಈಗ ಯಾಕೆ ರಿಲೀಸ್ ಮಾಡಿದ್ರು. …
Read More »ವೈರಲ್ ಆಗಿರೋದು AI ಆಡಿಯೋ, ಯಾವ ತನಿಖೆ ಬೇಕಾದ್ರೂ ಆಗಲಿ – ಜಮೀರ್ ಸವಾಲು
ಬೆಂಗಳೂರು: ರಾಜ್ಯದ ಕೆಲವು ಮಾಧ್ಯಮಗಳಲ್ಲಿ ಪ್ರಸಾರ ವಾಗುತ್ತಿರುವ ನನ್ನ ಕುರಿತ ಆಡಿಯೋ ನಕಲಿ, ಎಐ ತಂತ್ರಜ್ಞಾನ ಬಳಸಿ ಮಾಡಲಾಗಿದೆ ಎಂದು ಕಾಂಗ್ರೆಸ್ ನಾಯಕ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ. ವೈರಲ್ ಆಗುತ್ತಿರುವ ಆಡಿಯೋ ಬಗ್ಗೆ ಅವರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಹೇಳಿಯಲ್ಲಿ, ಇದೊಂದು ರಾಜಕೀಯ ಷಡ್ಯಂತ್ರ. ನಕಲಿ ಆಡಿಯೋ ಮಾಡಿ ವೈರಲ್ ಮಾಡಿರುವವರ ವಿರುದ್ಧ ಸೈಬರ್ ಠಾಣೆಗೆ ದೂರು ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. …
Read More »ಕರ್ನಾಟಕದ 4 ರಾಜ್ಯಸಭೆ, 7 ಪರಿಷತ್ ಸ್ಥಾನಗಳ ಚುನಾವಣೆಗೆ ಇಂದಿನಿಂದ ನಾಮಪತ್ರ ಸಲ್ಲಿಕೆ
ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಬೆಳವಣಿಗೆಗಳು ಬಿರುಸು ಪಡೆದುಕೊಂಡಿರುವ ಮಧ್ಯೆಯೇ ಇಂದಿನಿಂದ 4 ರಾಜ್ಯಸಭೆ, 7 ಪರಿಷತ್ ಸ್ಥಾನಗಳ ಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭವಾಗಿದೆ. ಇಂದು ಎರಡೂ ಚುನಾವಣೆಗಳ ಅಧಿಸೂಚನೆ ಪ್ರಕಟವಾಗಿದೆ. ಸಿಎಂ ಆಯ್ಕೆ, ಸಂಪುಟ ರಚನೆ ಒತ್ತಡದಲ್ಲಿ ಅಭ್ಯರ್ಥಿಗಳ ಆಯ್ಕೆ ಕಾಂಗ್ರೆಸ್‌ನಲ್ಲಿ ಈಗಾಗಲೇ ವಿಳಂಬವಾಗಿದೆ. ಜೂ.8ರಂದು ನಾಮಪತ್ರಗಳ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಜೂ.11ರಂದು ನಾಮಪತ್ರಗಳ ವಾಪಸಾತಿಗೆ ಕೊನೇ ದಿನವಾಗಿದೆ. ಇನ್ನು ಜೂ.18ರಂದು ಮತದಾನ ನಡೆದು ಅಂದೇ ಫಲಿತಾಂಶ ಪ್ರಕಟವಾಗಲಿದೆ. ಇನ್ನೂ …
Read More »ಸೋಮಣ್ಣ ದೊರೆತಿರೋದು ತುಮಕೂರು ಜಿಲ್ಲೆಯ ಭಾಗ್ಯ – ಗುಣಗಾನ ಮಾಡಿದ ಕಾಂಗ್ರೆಸ್ ಶಾಸಕ
ತುಮಕೂರು: ಸೋಮಣ್ಣ ದೊರೆತಿರೋದು ತುಮಕೂರು ಜಿಲ್ಲೆಯ ಭಾಗ್ಯ ಎಂದು ಗುಬ್ಬಿ ಕಾಂಗ್ರೆಸ್ ಶಾಸಕ ಎಸ್‌ಆರ್ ಶ್ರೀನಿವಾಸ್ ಕೇಂದ್ರ ಸಚಿವ ವಿ.ಸೋಮಣ್ಣರನ್ನು ಹಾಡಿ ಹೊಗಳಿದ್ದಾರೆ. ರೈಲ್ವೆ ಅಂಡರ್‌ಪಾಸ್ ಕಾಮಗಾರಿ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ ರೈಲ್ವೆಯ ಇನ್ನಾವುದೇ ಕಾಮಗಾರಿಗಳು ಬಾಕಿ ಉಳಿದಿಲ್ಲ. ಇದೆಲ್ಲಾ ಕ್ರೆಡಿಟ್ ರೈಲ್ವೆ ಸಚಿವ ಸೋಮಣ್ಣ ಅವರಿಗೆ ಸೇರಬೇಕು. ಬಹುಶಃ ಒಬ್ಬ ಲೋಕಸಭಾ ಪ್ರತಿನಿಧಿ ಇಷ್ಟೆಲ್ಲ ಕೆಲಸ ಮಾಡಬಹುದಾ ಅನ್ನೋದನ್ನ ವಿ ಸೋಮಣ್ಣ ತೋರಿಸಿಕೊಟ್ಟಿದ್ದಾರೆ. …
Read More »ಸಚಿವ ಸ್ಥಾನಕ್ಕಾಗಿ ನಾನು ದೆಹಲಿಗೆ ಹೋಗಲ್ಲ: ಯು.ಟಿ ಖಾದರ್
ಚಿಕ್ಕಬಳ್ಳಾಪುರ: ನನಗೆ ಸಚಿವ ಸ್ಥಾನ ಕೊಡುವುದು ಬಿಡುವುದು ಪಕ್ಷಕ್ಕೆ ಬಿಟ್ಟ ವಿಚಾರ ನಾನು ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸಲು ದೆಹಲಿಗೆ ಹೋಗುತ್ತಿಲ್ಲ. ನನ್ನ ಕ್ಷೇತ್ರದಲ್ಲಿನ ಜನರ ಸಮಸ್ಯೆಗಳನ್ನು ಆಲಿಸಿ ಪರಿಹರಿಸಲು ಮಂಗಳೂರಿಗೆ ತೆರಳುತ್ತಿದ್ದೇನೆ ಎಂದು ಸ್ಪೀಕರ್ ಯು.ಟಿ ಖಾದರ್ ಹೇಳಿದರು. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನಗೆ ಸಚಿವ ಸ್ಥಾನ ಕೊಡೋದು ಬಿಡೋದು ಪಕ್ಷಕ್ಕೆ ಬಿಟ್ಟ ವಿಚಾರ. ಹಿಂದೆ ಕೊಟ್ಟಾಗ ಒಳ್ಳೆಯ ಕೆಲಸ ಮಾಡಿದ್ದೇನೆ. ನಾನು ಶಾಸಕನಾಗಿ …
Read More »ಕಾಂಗ್ರೆಸ್‌ನಲ್ಲಿ ಡ್ರೈವರ್ ಬದಲಾಗಿದ್ದಾರೆ, ಬಸ್, ಎಂಜಿನ್ ಕೆಟ್ಟು ಹೋಗಿದೆ: ಅಶೋಕ್ ವ್ಯಂಗ್ಯ
ಬೆಂಗಳೂರು: ಕಾಂಗ್ರೆಸ್‌ನಲ್ಲಿ ಡ್ರೈವರ್ ಬದಲಾಗಿದ್ದಾರೆ ಅಷ್ಟೇ, ಬಸ್, ಎಂಜಿನ್ ಕೆಟ್ಟು ಹೋಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಡಿದ ಅವರು, ಈ ಸರ್ಕಾರದಲ್ಲಿ ಡ್ರೈವರ್ ಮಾತ್ರ ಬದಲಾವಣೆ ಆಗಿದ್ದಾರೆ. ಬಸ್ ಮತ್ತು ಎಂಜಿನಿ ಕೆಟ್ಟು ಹೋಗಿದೆ. ಡ್ರೈವರ್ ಬದಲಾದರೇನು? ಕೆಟ್ಟು ಹೋಗಿರೋ ಬಸ್ ಓಡಲು ಸಾಧ್ಯವೇ? ಇದು ಕೆಟ್ಟು ಹೋಗಿರೋ ಗಾಡಿ. ಸಿದ್ದರಾಮಯ್ಯ ಅವರು ಕೆಟ್ಟು ಹೋಗಿರೋ ಗಾಡಿ ಡಿಕೆಶಿಗೆ ಕೊಟ್ಟಿದ್ದಾರೆ. ಸಾಲ ಮಾಡಿ ಡಿಸೇಲ್ …
Read More »ಜಮೀರ್ ಅವರನ್ನು ನಂಬಿದ್ದೆ ಆದ್ರೆ ಈ ರೀತಿ ಮಾಡ್ತಾರೆ ಅಂತ ಗೊತ್ತಿರಲಿಲ್ಲ: ಸಮರ್ಥ್ ಶಾಮನೂರು ಬೇಸರ
ದಾವಣಗೆರೆ: ಜಮೀರ್ ಹಾಗೂ ಕೆಎಂಡಿಸಿ ನಿರ್ದೇಶಕ ಸಿರಾಜ್ ಮೊಹಮ್ಮದ್ ಅವರದ್ದು ಎನ್ನಲಾದ ಆಡಿಯೋ ವಿಚಾರವಾಗಿ ಸಮರ್ಥ ಶಾಮನೂರು ಬೇಸರ ಹೊರಹಾಕಿದ್ದಾರೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯ ವೇಳೆ ಸಚಿವ ಜಮೀರ್ ಅಹಮ್ಮದ್ ಹಾಗೂ ಕೆಎಂಡಿಸಿ ನಿರ್ದೇಶಕ ಸಿರಾಜ್ ಮೊಹಮ್ಮದ್ ಸೇರಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಷಡ್ಯಂತ್ರ ನಡೆಸಿದ್ದರು ಎನ್ನಲಾದ ಆಡಿಯೋ ಬಗ್ಗೆ ಪ್ರತಿಕ್ರಿಯಿಸಿದರು. ಜಮೀರ್ ಅವರನ್ನು ನಂಬಿದ್ದೆ ಆದರೆ ಈ ರೀತಿ ಮಾಡ್ತಾರೆ ಅಂತ ಗೊತ್ತಿರಲಿಲ್ಲ ಎಂದು ಬೇಸರ ಹೊರಹಾಕಿದ್ದಾರೆ. …
Read More »ಅಮೆರಿಕದಲ್ಲಿ ಗ್ರೀನ್‌ಕಾರ್ಡ್ ಅರ್ಜಿ ಸಲ್ಲಿಕೆಗೆ ಹೊಸ ಆದೇಶ
ವಾಷಿಂಗ್ಟನ್: ಅಮೆರಿಕದಲ್ಲಿ ಗ್ರೀನ್‌ಕಾರ್ಡ್ ಸಂಚಲನ ಸೃಷ್ಟಿಸಿದೆ. ಖಾಯಂ ನಿವಾಸಿ ಪ್ರಮಾಣಪತ್ರ (ಗ್ರೀನ್‌ಕಾರ್ಡ್) ಪಡೆಯಲು ಅರ್ಜಿ ಸಲ್ಲಿಸುವವರು ತಮ್ಮ ಮಾತೃದೇಶಗಳಿಗೆ ಹಿಂತಿರುಗಿ ಅಲ್ಲಿಂದಲೇ ಅಮೆರಿಕ ಕಾನ್ಸುಲೆಟ್ ಕಚೇರಿ ಮೂಲಕ ಅರ್ಜಿ ಸಲ್ಲಿಸಬೇಕು ಅಂತ ಅಮೆರಿಕ ಪೌರತ್ವ ಮತ್ತು ವಲಸೆ ವಿಭಾಗವು ಆದೇಶ ಹೊರಡಿಸಿದೆ. ಇದರಿಂದಾಗಿ, ತಾತ್ಕಾಲಿಕ ವೀಸಾದಲ್ಲಿ ಇರುವವರು, ಅಕ್ರಮವಾಗಿ ವಾಸಿಸುತ್ತಿರುವವರು, ಗಂಡ/ಹೆAಡತಿ ಅಥವಾ ಮಕ್ಕಳ ಪ್ರಾಯೋಜಕತ್ವ ಮೂಲಕ ಕಾನೂನುಬದ್ಧ ವಲಸಿಗ ಸ್ಥಾನ ಪಡೆಯಲು ಪ್ರಯತ್ನಿಸುತ್ತಿರುವವರು ಈ ನಿಯಮದ ಅನ್ವಯ ದೇಶ ತೊರೆಯಬೇಕಿದೆ. …
Read More »
Laxmi News 24×7