Breaking News

ಮಹರ್ಷಿ ವಾಲ್ಮೀಕಿ ನಮ್ಮ ಜೀವನಕ್ಕೆ ದಾರಿದೀಪ: ಎನ್. ಬಿ.ಪಾಟೀಲ

Spread the love

ಮಹಾಲಿಂಗಪುರ: ರಾಮಾಯಣ ಮಹಾಕಾವ್ಯದ ಮೂಲಕ ಸತ್ಯ, ಧರ್ಮ, ತ್ಯಾಗ, ಕರ್ತವ್ಯ ಮತ್ತು ಮಾನವೀಯ ಮೌಲ್ಯಗಳ ಮಹತ್ವವನ್ನು ಜಗತ್ತಿಗೆ ಸಾರಿದ ಮಹಾನ್ ಋಷಿ ವಾಲ್ಮೀಕಿ. ಅವರ ಜೀವನವು ಪರಿವರ್ತನೆ, ಪರಿಶ್ರಮ ಮತ್ತು ಜ್ಞಾನದ ಶಕ್ತಿಗೆ ಅತ್ಯುತ್ತಮ ಉದಾಹರಣೆಯಾಗಿದೆ. ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ನಮ್ಮ ವಿದ್ಯಾರ್ಥಿಗಳ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ನಾವೆಲ್ಲರೂ ಕೈಜೋಡಿಸೋಣ ಎಂದು ಪ್ರಾಚಾರ್ಯರಾದ ಎನ್. ಬಿ. ಪಾಟೀಲ ತಿಳಿಸಿದರು.

ಕೆ.ಎಲ್.ಇ ಸಂಸ್ಥೆಯ ಎಸ್.ಸಿ.ಪಿ ಕಲಾ, ವಿಜ್ಞಾನ ಮತ್ತು ಡಿ.ಡಿ.ಎಸ್ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ವೇಳೆ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಹ ಸಂಯೋಜಕರಾದ ಎಸ್.ಎಸ್.ಮುಗಳ್ಯಾಳ, ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥ ಎಸ್.ಎ.ಪಾಟೀಲ, ಎನ್.ಎಸ್.ಎಸ್ ಘಟಕದ ಕಾರ್ಯಕ್ರಮ ಅಧಿಕಾರಿ ಪಿ.ಎಂ.ಗೌಳಿ ಮತ್ತು ಕಾಲೇಜಿನ ಎಲ್ಲ ಉಪನ್ಯಾಸಕರು ಇದ್ದರು.

ಫೋಟೋ: ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.


Spread the love

About Laxminews 24x7

Check Also

ಮಹರ್ಷಿ ವಾಲ್ಮೀಕಿ ನಮ್ಮ ಜೀವನಕ್ಕೆ ದಾರಿದೀಪ: ಎನ್. ಬಿ.ಪಾಟೀಲ

Spread the loveಮಹಾಲಿಂಗಪುರ: ರಾಮಾಯಣ ಮಹಾಕಾವ್ಯದ ಮೂಲಕ ಸತ್ಯ, ಧರ್ಮ, ತ್ಯಾಗ, ಕರ್ತವ್ಯ ಮತ್ತು ಮಾನವೀಯ ಮೌಲ್ಯಗಳ ಮಹತ್ವವನ್ನು ಜಗತ್ತಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ