ಮಂಗಳೂರು: ನಗರದ ಹೊರವಲಯದ ಸುರತ್ಕಲ್ ನ ಟೋಲ್ ಸಿಬ್ಬಂದಿ ಮೇಲೆ ಏಳು ಮಂದಿ ಕಾರು ಸವಾರರು ಹಲ್ಲೆ ನಡೆಸಿದ್ದಾರೆ. ಭಟ್ಕಳ ನೋಂದಣಿ ನಂಬರ್ ಕಾರು ಸುರತ್ಕಲ್ ಟೋಲ್ ನಲ್ಲಿ ಹಣ ಪಾವತಿಸಲು ನಿರಾಕರಿಸಿದ್ದರು. ಈ ವೇಳೆ ಟೋಲ್ ಸಿಬ್ಬಂದಿ ಹಣ ಪಾವತಿಸಲು ತಿಳಿಸಿದ್ದಾರೆ. ಹಣ ಪಾವತಿ ಮಾಡೋದಿಲ್ಲ ಎಂದು ತಗಾದೆ ತೆಗೆದು ಟೋಲ್ ಸಿಬ್ಬಂದಿಗೆ ಏಳು ಮಂದಿ ಸೇರಿ ಹಿಗ್ಗಾಮುಗ್ಗ ಥಳಿಸಿದ್ದಾರೆ. ಹಲ್ಲೆಯಿಂದಾಗಿ ಟೋಲ್ ಸಿಬ್ಬಂದಿಯ ಕೈ ಮುರಿತಕ್ಕೊಳಗಾಗಿದ್ದು, ಬಳಿಕ …
Read More »ಮತ್ತೊಮ್ಮೆ ಮಾನವೀಯತೆ ಮೆರೆದ ಕಿಚ್ಚ ಸುದೀಪ್
ಮೈಸೂರು: ನೆರೆ ಪರಿಹಾರ, ಶಾಲಾ ಶುಲ್ಕ, ಮದುವೆ ಹೀಗೆ ಒಂದಲ್ಲ ಒಂದು ರೀತಿಯಲ್ಲಿ ತಮ್ಮ ಅಭಿಮಾನಿಗಳ ಕೈ ಹಿಡಿದಿರುವ ಸ್ಯಾಂಡಲ್‍ವುಡ್ ನಟ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಇದೀಗ ಮತ್ತೊಮ್ಮೆ ಮಾನವೀಯತೆ ಮೆರೆದಿದ್ದಾರೆ. ಹೌದು. ಸುದೀಪ್ ಅವರು ಇಂದು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ನಾಡ ದೇವಿಯ ದರ್ಶನ ಪಡೆದಿದ್ದಾರೆ. ಇದಕ್ಕೂ ಮೊದಲು ದಾರಿ ಮಧ್ಯೆ ತಮ್ಮ ಅಭಿಮಾನಿಯೊಬ್ಬರನ್ನು ಭೇಟಿ ಮಾಡಿ ಸಹಾಯ ಮಾಡುವ ಮೂಲಕ ಆತನ ಕೈಹಿಡಿದಿದ್ದಾರೆ.ಅಪಘಾತದಲ್ಲಿ …
Read More »ಹಿಟ್ಟಿನ ಗಿರಣಿಯ ಯಂತ್ರದೊಳಗೆ ಸಿಲುಕಿ ಬಾಲಕ ಸಾವನ್ನಪ್ಪಿರುವ ಭಯಾನಕ ಘಟನೆ
ಜೈಪುರ: ಹಿಟ್ಟಿನ ಗಿರಣಿಯ ಯಂತ್ರದೊಳಗೆ ಸಿಲುಕಿ ಬಾಲಕ ಸಾವನ್ನಪ್ಪಿರುವ ಭಯಾನಕ ಘಟನೆ ಜೈಪುರದ ನಾಹರಗಢ ರಸ್ತೆಯ ಖಂಡೇಲಾವಾಲ ಫ್ಲೋರ್ ಮಿಲ್ ನಲ್ಲಿ ನಡೆದಿದೆ. 16 ವರ್ಷದ ಅಮಿತ್ ಸಾವನ್ನಪ್ಪಿದ ಬಾಲಕ. ಅಮಿತ್ ಗಿರಣಿಯಲ್ಲಿ ಗೋಧಿಯನ್ನ ಯಂತ್ರಕ್ಕೆ ಹಾಕಿ ಹಿಟ್ಟು ಮಾಡುವ ಕೆಲಸ ಮಾಡುತ್ತಿದ್ದನು. ಈ ವೇಳೆ ಮೇಲಿನಿಂದ ಗೋಧಿ ಚೀಲ ಎಳೆಯುವಾಗ ಆಯತಪ್ಪಿ ಗಿರಣಿಯ ಯಂತ್ರದ ಮಧ್ಯೆ ಬಿದ್ದಿದ್ದಾನೆ. ಕೆಲವೇ ಕ್ಷಣಗಳಲ್ಲಿ ಅಮಿತ್ ದೇಹ ತುಂಡು ತುಂಡಾಗಿದೆ. ಅಮಿತ್ ದೇಹಕ್ಕೆ …
Read More »ಸ್ಯಾಂಡಲ್‍ವುಡ್ ನಟ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಚಾಮುಂಡಿ ಬೆಟ್ಟಕ್ಕೆ ಭೇಟಿ
ಮೈಸೂರು: ಸ್ಯಾಂಡಲ್‍ವುಡ್ ನಟ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದಾರೆ. ಫ್ಯಾಂಟಮ್ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಸುದೀಪ್ ಅವರು ಇಂದು ನಿರ್ದೇಶಕ ಅನೂಪ್ ಭಂಡಾರಿ ಜೊತೆ ಆಗಮಿಸಿ ನಾಡದೇವಿಯ ದರ್ಶನ ಪಡೆದರು. ತಮ್ಮ ನೆಚ್ಚಿನ ನಟ ಬರುತ್ತಿದ್ದಂತೆಯೇ ಅಭಿಮಾನಿಗಳು ಸುದೀಪ್ ಜೊತೆ ಫೋಟೋ ತೆಗೆದುಕೊಳ್ಳಲು ಮುಗಿಬಿದ್ದರು. ಅಭಿಮಾನಿಗಳ ನೂಕುನುಗ್ಗಲು ಗಮನಿಸಿದ ನಟ, ಓರ್ವನಿಗೆ ಸಂಯಮದಿಂದ ವರ್ತಿಸುವಂತೆ ಕಿವಿಮಾತು ಹೇಳಿದರು. ದೇವಸ್ಥಾನದಲ್ಲಿ ನಿಶ್ಯಬ್ದ ಕಾಪಾಡುವಂತೆ ಬಾಯಿ …
Read More »ಇಲ್ಲೊಬ್ಬಳು ಮಹಿಳೆ ತನ್ನ ಆಪ್ತ ಸ್ನೇಹಿತನ ತಂದೆಯನ್ನು ವಿವಾಹವಾಗುವ ಮೂಲಕ ಅಚ್ಚರಿ ಮೂಡಿಸಿದ್ದಾಳೆ.
ಪ್ರೀತಿ ಕುರುಡು ಎಂಬ ಮಾತಿದೆ. ಎಷ್ಟೇ ಪ್ರಾಯದವರು ಕೂಡ ಪ್ರೀತಿ ಎಂಬ ಬಲೆಗೆ ಬೀಳುತ್ತಾರೆ. ಅದರಂತೆ ಇಲ್ಲೊಬ್ಬಳು ಮಹಿಳೆ ತನ್ನ ಆಪ್ತ ಸ್ನೇಹಿತನ ತಂದೆಯನ್ನು ವಿವಾಹವಾಗುವ ಮೂಲಕ ಅಚ್ಚರಿ ಮೂಡಿಸಿದ್ದಾಳೆ. 41 ವರ್ಷದ ಬೆಕಿ ಪ್ರೈಸ್ ಎಂಬಾಕೆ 64 ವರ್ಷದ ಬ್ಲೂ ಪ್ರೈಸ್ರನ್ನು ವಿವಾಹವಾಗಿದ್ದಾಳೆ. ಕ್ಯಾಥರಿನ್ ಲೊಟ್ ಅವರ ಸ್ನೇಹಿತೆಯಾಗಿದ್ದ ಬೆಕಿ ಪ್ರೈಸ್ ಆಕೆಯ ತಂದೆಯನ್ನೇ ವಿವಾಹವಾಗಿದ್ದಾಳೆ. ಪ್ರಾರಂಭದಲ್ಲಿ ಇವರಿಬ್ಬರು ಡೇಟಿಂಗ್ ನಡೆಸುತ್ತಾರೆ. ನಂತರ ಈ ಜೋಡಿಯ ನಡುವೆ ಪ್ರೀತಿ …
Read More »ಕರ್ನಾಟಕದ ಖ್ಯಾತ ಹೃದಯ ಶಸ್ತ್ರಚಿಕಿತ್ಸೆ ತಜ್ಞ ಡಾ. ದೇವಿ ಶೆಟ್ಟಿ ಅವರು ಬಿಸಿಸಿಐ ಅಧ್ಯಕ್ಷ ಹಾಗೂ ಟೀಮ್ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ತಂಡ
: ಕೋಲ್ಕತ: ಕರ್ನಾಟಕದ ಖ್ಯಾತ ಹೃದಯ ಶಸ್ತ್ರಚಿಕಿತ್ಸೆ ತಜ್ಞ ಡಾ. ದೇವಿ ಶೆಟ್ಟಿ ಅವರು ಬಿಸಿಸಿಐ ಅಧ್ಯಕ್ಷ ಹಾಗೂ ಟೀಮ್ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ತಂಡವನ್ನು ಸೋಮವಾರ ಕೂಡಿಕೊಂಡಿದ್ದಾರೆ. ಲಘು ಹೃದಯಾಘಾತದ ಬಳಿಕ ಈಗಾಗಲೆ ಆಯಂಜಿಯೋಪ್ಲಾಸ್ಟಿಗೆ ಒಳಗಾಗಿರುವ 48 ವರ್ಷದ ಗಂಗೂಲಿ ಅವರಿಗೆ ನೀಡಬೇಕಾಗಿರುವ ಮುಂದಿನ ಚಿಕಿತ್ಸೆಯ ಬಗ್ಗೆ ಅವರು ವೈದ್ಯರ ತಂಡದೊಂದಿಗೆ ಚರ್ಚಿಸಿದ್ದಾರೆ. ಗಂಗೂಲಿ ಅವರ ಹೃದಯ ಚಿಕಿತ್ಸೆಗಾಗಿ ಒಟ್ಟು …
Read More »ಆಕ್ರೋಶಗೊಂಡ ಸಿದ್ದರಾಮಯ್ಯ, ಆಯ್ತು ನೀ ನಡಿ ಎಂದು ಮೈಕ್ ಮುಂದೆ ನಿಂತಿದ್ದ ಜಾಬಣ್ಣವರ ಅವರನ್ನು ನೂಕಿ, ವೇದಿಕೆಯಿಂದ ಕೆಳಗೆ ಕಳುಹಿಸಿದರು.
ಬಾಗಲಕೋಟೆ : ಪ್ರಸ್ತುತ ಗ್ರಾ.ಪಂ. ಚುನಾವಣೆಯಲ್ಲಿ ಗೆದ್ದ ತಮ್ಮ ಪಕ್ಷದ ಬೆಂಬಲಿತ ನೂತನ ಸದಸ್ಯರ ಸನ್ಮಾನ ಕಾರ್ಯಕ್ರಮದ ವೇಳೆ ನೂತನ ಸದಸ್ಯರೊಬ್ಬರು ತಮ್ಮೂರಿನ ಸಮಸ್ಯೆ ಹೇಳಿಕೊಳ್ಳುವ ವೇಳೆ, ಬಾದಾಮಿಯ ಶಾಸಕರೂ ಆಗಿರುವ ವಿಧಾನಸಭೆಯವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ನೂತನ ಸದಸ್ಯನನ್ನು ವೇದಿಕೆಯಿಂದ ನೂಕಿ ಕೆಳಗೆ ಕಳುಹಿಸಿದ ಪ್ರಸಂಗ ಬಾದಾಮಿ ಪಟ್ಟಣದಲ್ಲಿ ಸೋಮವಾರ ನಡೆಯಿತು. ಬಾದಾಮಿಯ ಶಾಸಕರ ಗೃಹ ಕಚೇರಿ ಆವರಣದಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರಿಗೆ ಅಭಿನಂದನೆ ಕಾರ್ಯಕ್ರಮವನ್ನು ಸಿದ್ದರಾಮಯ್ಯ …
Read More »ಏನಪ್ಪಾ, ಮೊದಲೇ ಬಂದು ಚೇರ್ ರಿಸರ್ವ್ ಮಾಡ್ಕೊಂಡಿದ್ದೀಯಾ ಎಂದು ಯತ್ನಾಳ್ಗೆ ಕಿಚಾಯಿಸಿದರು ಬೊಮ್ಮಾಯಿ
ಬೆಂಗಳೂರು: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಇಂದು ಬಿಜೆಪಿ ಶಾಸಕರ ಜೊತೆ ಸಭೆ ಆಯೋಜಿಸಿದ್ದರು. ಸಭೆಯಲ್ಲಿ ಮುಂಬೈ ಕರ್ನಾಟಕ, ಕಲ್ಯಾಣ ಕರ್ನಾಟಕ ಮತ್ತು ಮಧ್ಯ ಕರ್ನಾಟಕ ಭಾಗದ ಶಾಸಕರ ಜೊತೆ ಸಿಎಂ ಬಿ.ಎಸ್. ಯಡಿಯೂರಪ್ಪ ಚರ್ಚೆ ನಡೆಸಿದರು. ಬೆಳಗಾವಿ, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಹುಬ್ಬಳ್ಳಿ-ಧಾರವಾಡ ಜಿಲ್ಲೆಗಳ 35 ಶಾಸಕರ ಜೊತೆ ನಗರದ ಖಾಸಗಿ ಹೋಟೆಲ್ನಲ್ಲಿ ಸಭೆ ನಡೆಸಿದರು. ತಮ್ಮ ಕ್ಷೇತ್ರಗಳಲ್ಲಿ ಶಾಸಕರು ಎದುರಿಸುತ್ತಿರುವ ಸಮಸ್ಯೆ ಹಾಗೂ ಅನುದಾನದ ಬಗ್ಗೆ …
Read More »ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆಯನ್ನು ಆದರ್ಶವಾಗಿಟ್ಟುಕೊಂಡು ಹೆಣ್ಣು ಮಕ್ಕಳಿಗೆ ಶಿಕ್ಷಣ ಸೌಲಭ್ಯಲಕ್ಷ್ಮಿ ಹೆಬ್ಬಾಳಕರ್ ನೀಡುವ ದಿಸೆಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಆದ್ಯತೆ:
ಬೆಳಗಾವಿ – ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆಯನ್ನು ಆದರ್ಶವಾಗಿಟ್ಟುಕೊಂಡು ಹೆಣ್ಣು ಮಕ್ಕಳಿಗೆ ಶಿಕ್ಷಣ ಸೌಲಭ್ಯ ನೀಡುವ ದಿಸೆಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಆದ್ಯತೆ ನೀಡಲಾಗುತ್ತಿದೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಹೇಳಿದ್ದಾರೆ. ಕ್ಷೇತ್ರದ ಪಂತ ಬಾಳೇಕುಂದ್ರಿ ಗ್ರಾಮದ ಶ್ರೀ ಮಾರುತಿ ನಗರದಲ್ಲಿ ಸಮಾಜ ಸುಧಾರಕಿ ಹಾಗೂ ಅಕ್ಷರದವ್ವ ಖ್ಯಾತಿಯ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನದ ಅಂಗವಾಗಿ ಅವರ ಭಾವಚಿತ್ರಕ್ಕೆ ಗೌರವ ನಮನವನ್ನು ಸಲ್ಲಿಸಿ, ನೂತನವಾಗಿ ನಿರ್ಮಾಣಗೊಂಡ ಸಿಸಿ ರಸ್ತೆಯನ್ನು ಸ್ಥಳೀಯ ನಿವಾಸಿಗಳ ಸಮ್ಮುಖದಲ್ಲಿ …
Read More »ನಿಯತಿ ಕೋ ಆಪರೇಟಿವ್ ಸೊಸೈಟಿ ಸೋಮವಾರ ವಿಧ್ಯುಕ್ತವಾಗಿ ಉದ್ಘಾಟನೆಯಾಯಿತು.
ಬೆಳಗಾವಿ – ನಿಯತಿ ಕೋ ಆಪರೇಟಿವ್ ಸೊಸೈಟಿ ಸೋಮವಾರ ವಿಧ್ಯುಕ್ತವಾಗಿ ಉದ್ಘಾಟನೆಯಾಯಿತು. ಪಂಚಾಕ್ಷರಿ ಚೊಣ್ಣದ್ ಮುಖ್ಯ ಅತಿಥಿಗಳಾಗಿ, ಪ್ರದೀಪ್ ಅಷ್ಟೇಕರ್ ಗೌರವಾನ್ವಿತ ಅತಿಥಿಗಳಾಗಿ ಆಗಮಿಸಿದ್ದರು. ಸಹಕಾರಿ ಸಂಸ್ಥೆಯೊಂದನ್ನು ನಡೆಸಬೇಕಾದರೆ ನಿರ್ವಹಿಸಬೇಕಾದ ಜವಾಬ್ದಾರಿ ಕುರಿತು ಅತಿಥಿಗಳು ತಿಳಿಸಿದರು. ಸಂಸ್ಥೆ ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು. ಸೊಸೈಟಿಯ ಮುಖ್ಯ ಪ್ರಮೋಟರ್ ಡಾ.ಸೋನಾಲಿ ಸರ್ನೋಬತ್, ಸೊಸೈಟಿ ಆರಂಭಿಸಿರುವ ಉದ್ದೇಶ ಮತ್ತು ಯೋಜನೆಗಳ ಮಾಹಿತಿ ನೀಡಿದರು. ಚೇರಮನ್ ರೋಹನ್ ಜುವಳಿ, ವೈಸ್ ಚೇರಮನ್ ಡಾ.ಸಮೀರ್ …
Read More »
Laxmi News 24×7