Breaking News

ದಿನೇಶ್ ಕಲ್ಲಹಳ್ಳಿ ದೂರು ಹಿಂಪಡೆದ ಕಾರಣ ತಿಳಿದಿಲ್ಲ;: H.D.K.

Spread the love

ಕೋಲಾರ: ದಿನೇಶ್ ಕಲ್ಲಹಳ್ಳಿ ಯಾವ ಕಾರಣಕ್ಕಾಗಿ ದೂರು ಹಿಂಪಡೆದಿದ್ದಾರೆ ಎಂಬ ವಿಚಾರ ತಿಳಿದಿಲ್ಲ ಎಂದು ಕೋಲಾರದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಕರಣದ ಬಗ್ಗೆ ಸರ್ಕಾರಕ್ಕೆ ಜವಾಬ್ದಾರಿ ಇದೆ. ಸರ್ಕಾರವೇ ಈ ಪ್ರಕರಣದಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಬಹುದು. ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಅಸಹ್ಯಕರ ಘಟನೆಗಳು‌ ನಡೆಯುತ್ತಿವೆ. ಸರ್ಕಾರವು ಗೌರವ‌ ಉಳಿಸಿಕೊಳ್ಳುವ‌ ನಿಟ್ಟಿನಲ್ಲಿ ಜನತೆಗೆ ವಿಶ್ವಾಸ ಮೂಡಿಸುವ‌ ಕೆಲಸವನ್ನು ಸರ್ಕಾರ ಮಾಡಬೇಕು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

‘ದೂರು ಹಿಂಪಡೆಯಲು ಯಾರು ಪ್ರೇರಣೆ ಎಂಬುದನ್ನು ತಿಳಿದುಕೊಳ್ಳಬೇಕು. ಸಂತ್ರಸ್ತ ಮಹಿಳೆ ಅನ್ಯಾಯವಾಗಿದೆ ಎಂದು ಏಕೆ ಹೊರಗಡೆ ಬಂದಿಲ್ಲ. ಯಾವ ಕಾರಣಕ್ಕೆ ಈ ಪ್ರಕರಣ ಹೊರ ಬಂದಿದೆ. ಈ ದೂರಿನ ಹಿಂದಿನ ಸತ್ಯಾಂಶವೇನು..ಈ ದೂರಿನ ಹಿಂದಿನ ಸತ್ಯಗಳು ಜನರ ಮುಂದೆ ಬರಬೇಕಿದೆ’ ಎಂದು ಅವರು ಹೇಳಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ