ಹುಬ್ಬಳ್ಳಿ: ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರು ಮತ್ತೂಂದು ಸುತ್ತಿನ ಒತ್ತಡ ತಂತ್ರಕ್ಕೆ ಮುಂದಾಗಿದ್ದಾರೆಯೇ? ಅವರ ಚಲನವಲನ ಗಮನಿಸಿದರೆ ಅಂತಹ ಅನುಮಾನ ಮೂಡುತ್ತದೆ. ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಪತನ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅಂದಿನ ಇಡೀ ವಿದ್ಯಮಾನ ತಮ್ಮ ಸುತ್ತಲೇ ಸುತ್ತುವಂತೆ ಮಾಡಿಕೊಂಡಿದ್ದ ರಮೇಶ ಜಾರಕಿಹೊಳಿ, ಪ್ರಕರಣವೊಂದರಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರದಲ್ಲಿ ಕೆಲ ದಿನಗಳವರೆಗೆ ಮೌನವಾಗಿದ್ದರು. ಬಳಿಕ ಒಂದಿಷ್ಟು ಚಟುವಟಿಕೆಗಳಿಗೆ ಮುಂದಾಗಿದ್ದರು. ಸಚಿವ …
Read More »ಬಿಜೆಪಿ ಭಿನ್ನಮತ ನಿಲ್ಲುವ ಲಕ್ಷಣ ಕಾಣುತ್ತಿಲ್ಲ
ಬೆಂಗಳೂರು,ಆ.9- ಮಳೆ ನಿಂತರೂ ಮರದ ಹನಿ ನಿಲ್ಲಲಿಲ್ಲ ಎಂಬಂತೆ ಸಂಪುಟ ವಿಸ್ತರಣೆಯಾಗಿ ಖಾತೆಗಳು ಹಂಚಿಕೆಯಾಗಿದ್ದರೂ ಆಡಳಿತಾರೂಢ ಬಿಜೆಪಿಯಲ್ಲಿ ಭಿನ್ನಮತ ನಿಲ್ಲುವ ಲಕ್ಷಣಗಳು ಕಾಣಿಸುತ್ತಿಲ್ಲ. ನಿರೀಕ್ಷಿತ ಖಾತೆ ಸಿಗದಿರುವುದು ಒಂದು ಕಡೆಯಾದರೆ ಮತ್ತೊಂದು ಕಡೆ ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿರುವ ಶಾಸಕರನ್ನು ಸಂಬಾಳಿಸುವುದೇ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ತಲೆ ನೋವಾಗಿ ಪರಿಣಮಿಸಿದೆ. ಅಸಮಾಧಾನಗೊಂಡಿರುವ ಸಚಿವರಾದ ಆನಂದ್ ಸಿಂಗ್, ಎಂಟಿಬಿ ನಾಗರಾಜ್, ವಿ.ಸೋಮಣ್ಣ, ಶ್ರೀರಾಮುಲು ಮತ್ತಿತರರು ಎಲ್ಲವೂ ಸರಿ ಹೋಗಿದೆ ಎಂದು …
Read More »ಜಮೀರ್ ಮೇಲೆ ಇಡಿ ದಾಳಿ ಮಾಡಿಸಿದ್ಯಾರು? ಮತ್ಯಾಕೇ?
ಐಎಂಎ ವಂಚನೆ ಪ್ರಕರಣದಲ್ಲಿ ಹೆಸರು ಕೇಳಿ ಬಂದ ಕೂಡಲೇ ಮಾಜಿ ಸಚಿವ ಮತ್ತು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಜಮೀರ್ ಅಹ್ಮದ್ ಅವರಿಗೆ ಸೇರಿದ್ದ ಬೆಂಗಳೂರಿನ ಕಂಟೋನ್ಮೆಂಟ್ ರೈಲು ನಿಲ್ದಾಣ ಬಳಿಯಿರುವ ನಿವಾಸ, ಸದಾಶಿವ ನಗರದ ಫ್ಲಾಟ್ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದ್ದ ಇಡಿ ಅಧಿಕಾರಿಗಳು ಸತತ 24 ಗಂಟೆಗಳ ಪರಿಶೀಲನೆ ನಡೆಸಿ ಮಹತ್ವದ ಮಾಹಿತಿ ಕಲೆ ಹಾಕಿದ್ದರು. …
Read More »ಮರಾಠಿ ಭಾಷೆಗೆ ಶಾಸ್ತ್ರೀಯ ಸ್ಥಾನ ಪರಿಗಣನೆಯ ಹಂತದಲ್ಲಿದೆ: ಸಂಸ್ಕೃತಿ ಖಾತೆ ಸಚಿವ
ನವದೆಹಲಿ: ಮರಾಠಿ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡುವ ಪ್ರಸ್ತಾವ ಪರಿಗಣನೆಯಲ್ಲಿದೆ ಎಂದು ಸಂಸ್ಕೃತಿ ಖಾತೆ ರಾಜ್ಯ ಸಚಿವ ಅರ್ಜುನ್ ರಾಮ್‌ಮೇಘ್ವಾಲ್ ಲೋಕಸಭೆಗೆ ತಿಳಿಸಿದರು. ಲೋಕಸಭೆಯಲ್ಲಿ ಸೋಮವಾರ ಬಿಜೆಪಿ ಸಂಸದ ಗೋಪಾಲ್ ಶೆಟ್ಟಿಯವರ ಪೂರಕ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮರಾಠಿ ಭಾಷೆಗೆ ಶಾಸ್ತ್ರೀಯ ಸ್ಥಾನ ನೀಡುವ ಕುರಿತು ಚರ್ಚಿಸಲು 8 ಸದಸ್ಯರ ಸಮಿತಿಯನ್ನು ರಚಿಸಲಾಗಿದೆ ಎಂದು ಅವರು ತಿಳಿಸಿದರು. ‘ಇಲ್ಲಿಯವರೆಗೆ ತಮಿಳು, ತೆಲುಗು, ಸಂಸ್ಕೃತ, ಕನ್ನಡ, ಮಲಯಾಳ ಮತ್ತು ಒಡಿಯಾ ಭಾಷೆಗಳಿಗೆ …
Read More »ಕಾಂಗ್ರೆಸ್‌ನಿಂದ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ
ಶಿವಮೊಗ್ಗ: ಟೋಕಿಯೋ ಒಲಿಂಪಿಕ್‌ನ ಜಾವಲಿನ್ ಥ್ರೋನಲ್ಲಿ ನೀರಜ್ ಚೋಪ್ರಾ ಅವರು ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟ ಹಿನ್ನೆಲೆಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಪದಾಧಿಕಾರಿಗಳು ಭಾನುವಾರ ಶಿವಪ್ಪ ನಾಯಕ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಶೂಟರ್ ಅಭಿನವ್ ಬಿಂದ್ರಾ ನಂತರ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟ ಹಿರಿಮೆಗೆ ನೀರಜ್ ಚೋಪ್ರಾ ಭಾಜನರಾಗಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. 140 ಕೋಟಿ ಭಾರತೀಯರ ಹಿರಿಮೆ ಎತ್ತಿಹಿಡಿದ ಸಾಧನೆ ಮಾಡಿದ್ದಾರೆ ಎಂದು ಸಂತಸ …
Read More »ದೇವರ ದಯೆಯಿಂದ ಕೋವಿಡ್ ಮೂರನೇ ಅಲೆ ಬರಬಾರದು: ಸಿಎಂ ಬಸವರಾಜ ಬೊಮ್ಮಾಯಿ
ಮೈಸೂರು: ಕೋವಿಡ್ ಮೂರನೇ ಅಲೆ ದೇವರ ದಯೆಯಿಂದ ಬರಬಾರದು. ಬಂದರೆ ಏನೆಲ್ಲ ಕ್ರಮ ಕೈಗೊಳ್ಳಬೇಕು ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಕೋವಿಡ್ ಕುರಿತ ಅಧಿಕಾರಿಗಳ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲಾ ಸಚಿವರು, ಶಾಸಕರು, ಅಧಿಕಾರಿಗಳ ಸಭೆ ಮಾಡಿದ್ದೇನೆ. ಮೈಸೂರು ಜಿಲ್ಲೆ ಸ್ಥಿತಿಗತಿ, ಮೂರನೇ ಹಂತದ ಮುಂಜಾಗ್ರತೆ ಬಗ್ಗೆ ಪರಿಶೀಲನೆ ಮಾಡಿ ಸಭೆ ಮಾಡಿದ್ದೇನೆ. ಮೈಸೂರಿನ ಪಾಸಿಟಿವಿಟಿ ರೇಟ್ 1.19 ಇದೆ. ಕಳೆದ ಒಂದು ವಾರದಿಂದ …
Read More »ಎಸ್‌ಎಸ್‌ಎಲ್ ಸಿ ಫಲಿತಾಂಶ ಪ್ರಕಟ: ಶೇಕಡಾ 99.9 ವಿದ್ಯಾರ್ಥಿಗಳು ಪಾಸ್, ಓರ್ವ ಮಾತ್ರ ಫೇಲ್
ಬೆಂಗಳೂರು: ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್ ಸಿ ಫಲಿತಾಂಶ ಪ್ರಕಟವಾಗಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಫಲಿತಾಂಶ ಬಿಡುಗಡೆ ಮಾಡಿದರು. ಜುಲೈ 19 ಮತ್ತು 22ರಂದು ನಡೆದಿದ್ದ ಎಸ್ ಎಸ್‌ಎಲ್ ಸಿ ಪರೀಕ್ಷೆಯಲ್ಲಿ ಹಾಜರಾಗಿದ್ದ 8,71,443 ವಿದ್ಯಾರ್ಥಿಗಳಲ್ಲಿ ಒಂದು ವಿದ್ಯಾರ್ಥಿ ಹೊರತುಪಡಿಸಿ ಉಳಿದೆಲ್ಲರೂ ತೇರ್ಗಡೆಯಾಗಿದ್ದಾರೆ. ಆತ ತನ್ನ ಬದಲು ಬೇರೆಯವರಿಂದ ಪರೀಕ್ಷೆ ಬರೆಸಿದ್ದ. ಹೀಗಾಗಿ ಆತನನ್ನು ಅನುತ್ತೀರ್ಣ ಮಾಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು. ಕೋವಿಡ್ ಕಾರಣದಿಂದ …
Read More »ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರೆ ತಪ್ಪೇನು? ಅವರನ್ನು ತಳ್ಳಲು ಆಗುತ್ತಾ? ಬಿ.ಸಿ.ಪಾಟೀಲ್
ಬೆಂಗಳೂರು: ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರೆ ತಪ್ಪೇನು? ಅವರು ಖುಷಿಯಿಂದ ಬಂದರೆ ನಾವೇನು ತಳ್ಳುವುದಕ್ಕೆ ಆಗುತ್ತಾ ಎಂದು ಸಚಿವ ಬಿ.ಸಿ ಪಾಟೀಲ್ ಸಂಭ್ರಮಾಚರಣೆಯನ್ನು ಸಮರ್ಥಿಸಿಕೊಂಡರು. ಸಚಿವರು ಸಂಭ್ರಮದಲ್ಲಿ ತೊಡಗಿದ್ದಾರೆಂಬ ಹೆಚ್‌ಡಿಕೆ ಆಕ್ರೋಶ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕೋವಿಡ್ ಹೆಚ್ಚಳ ಆತಂಕದ ಕಾರಣ ಸರ್ಕಾರ ವೀಕೆಂಡ್, ನೈಟ್ ಕರ್ಪೂ ಮಾಡಿದೆ. ಗುಂಪು ಸೇರಬೇಡಿ, ಮಾಸ್ಕ್ ಧರಿಸಿ ಎಂದು ಹೇಳುತ್ತಿದ್ದೇವೆ. ಆದರೂ ಜನ ಗುಂಪು ಸೇರುತ್ತಾರೆ. ನಾವೇನು ಮಾಡಲು ಸಾಧ್ಯ ಎಂದರು. ಬಿಜೆಪಿಯಲ್ಲಿ …
Read More »ರೈಲ್ವೆ ಇಲಾಖೆ ಹೊಸ ನಿಯಮ: ಟಿಕೆಟ್ ಬುಕ್ ಮಾಡುವಾಗ ಈ ಕೋಡ್ ಬಗ್ಗೆ ಇರಲಿ ಗಮನ
ರೈಲು ಪ್ರಯಾಣಿಕರಿಗೆ ಮಹತ್ವದ ಸುದ್ದಿಯೊಂದಿದೆ. ರೈಲು ಟಿಕೆಟ್ ಕಾಯ್ದಿರಿಸುವಾಗ ಕೆಲವು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕಾಗುತ್ತದೆ. ಭಾರತೀಯ ರೈಲ್ವೆ ಟಿಕೆಟ್ ಬುಕಿಂಗ್ ಕೋಡ್ ಮತ್ತು ಕೋಚ್ ಕೋಡ್ ನಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ರೈಲ್ವೆ ಇಲಾಖೆ, ರೈಲುಗಳಲ್ಲಿ ಹೊಸ ರೀತಿಯ ಕೋಚ್ ಪರಿಚಯಿಸಿದೆ. ಈ ಕೋಡ್ ಮೂಲಕ, ಪ್ರಯಾಣಿಕರು ಟಿಕೆಟ್ ಕಾಯ್ದಿರಿಸುವಾಗ, ಆದ್ಯತೆಯ ಆಸನವನ್ನು ಆಯ್ಕೆ ಮಾಡಬಹುದು. ದೇಶದ ಹಲವು ಮಾರ್ಗಗಳಲ್ಲಿ ರೈಲ್ವೆ ಇಲಾಖೆ ವಿಸ್ಟಾಡೋಮ್ ಕೋಚ್‌ಗಳನ್ನು ಆರಂಭಿಸಿದೆ. …
Read More »7.5 ಲಕ್ಷ ಮಂದಿಗೆ 2ನೇ ಡೋಸ್ ಬಾಕಿ
ಬೆಂಗಳೂರು: ರಾಜ್ಯದಲ್ಲಿ ಏಳೂವರೆ ಲಕ್ಷ ಜನರ ಕೊವ್ಯಾಕ್ಸಿನ್ ಲಸಿಕೆಯ ಎರಡನೇ ಡೋಸ್ ಬಾಕಿ ಉಳಿದಿದ್ದು, ಸಿಗದೆ ಪರದಾಡುತ್ತಿದ್ದಾರೆ. ಆಗಸ್ಟ್‌ನಲ್ಲಿಯೂ ಇದು ಎಲ್ಲರಿಗೆ ಸಿಗುವುದು ಕಷ್ಟ! ಮಾಸಾಂತ್ಯದೊಳಗೆ ಹೆಚ್ಚುಕಡಿಮೆ 15 ಲಕ್ಷ ಜನರಿಗೆ ಎರಡನೇ ಡೋಸ್ ನೀಡಬೇಕಿದೆ. ಆದರೆ 6.5 ಲಕ್ಷ ಡೋಸ್ ಮಾತ್ರ ಲಭ್ಯವಾಗಲಿದೆ. ಕೊವ್ಯಾಕ್ಸಿನ್‌ನ ಮೊದಲ ಡೋಸ್ ಪಡೆದು 4ರಿಂದ 6 ವಾರಗಳೊಳಗೆ 2ನೇ ಡೋಸ್ ಪಡೆಯಬೇಕು. ಸದ್ಯ ಮೊದಲ ಡೋಸ್ ಪಡೆದು 5 ವಾರ ಆದವರು 7.52 …
Read More »
Laxmi News 24×7