Breaking News

ಕೊಲೆ ಆರೋಪಿ ಪವಿತ್ರಾಗೌಡ ಜೈಲಲ್ಲಿ ಬೇರೆ ಸೆಲ್‌ಗೆ ಶಿಫ್ಟ್‌

Spread the love

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಆರೋಪಿ ಪವಿತ್ರಾಗೌಡ ರನ್ನ ಬ್ಯಾರಕ್ ಶಿಫ್ಟ್ ಮಾಡಲಾಗಿದೆ.

ಇಬ್ಬರ ಬ್ಯಾರಕ್‌ನಲ್ಲಿದ್ದ ಆರೋಪಿಯನ್ನ 16 ಕೈದಿಗಳಿರುವ ಬ್ಯಾರಕ್‌ಗೆ ಶಿಫ್ಟ್ ಮಾಡಲಾಗಿದೆ. ಮೂಲಕ ಪವಿತ್ರಗೌಡಗೆ ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳು ಶಾಕ್ ನೀಡಿದ್ದಾರೆ.

ರೇಣುಕಾಸ್ವಾಮಿ ಕೊಲೆ ಕೇಸ್  ಕೋರ್ಟ್‌ನಲ್ಲಿದೆ. ಟ್ರಯಲ್ ನಡೆಯುವಾಗ ಎಲ್ಲಾ ಆರೋಪಿಗಳು ವಿಸಿ ಮೂಲಕ ನ್ಯಾಯಾಧೀಶರ ಮುಂದೆ ಹಾಜರಾಗಬೇಕು. ಕಳೆದ ಮೂರು ದಿನಗಳ ಹಿಂದೆ ಎಲ್ಲಾ ಆರೋಪಿಗಳು ಹಾಜರಾದ ಬಳಿಕ ತಡವಾಗಿ ಪವಿತ್ರಾಗೌಡ ಹಾಜರಾಗಿ ನ್ಯಾಯಾಧೀಶರ ಕೆಂಗಣ್ಣಿಗೆ ಗುರಿಯಾಗಿದ್ದರು.

ಅಷ್ಟೇ ಅಲ್ಲದೇ ಪವಿತ್ರಾಗೌಡ ವಿಸಿಯಲ್ಲಿ ಹಾಜರಾಗಿದ್ದಾಗ ಕಿವಿಯಲ್ಲಿ ಏರ್‌ಬಡ್ಸ್ ಬಳಕೆ ಮಾಡಿದ್ದರು. ನ್ಯಾಯಾಧೀಶರು ಮಹಿಳಾ ಬ್ಯಾರಕ್‌ನಲ್ಲಿ ಏರ್‌ಬಡ್ಸ್ ಬಳಕೆ ಮಾಡುವುದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಏರ್‌ಬಡ್ಸ್ ಬಳಕೆ ಮಾಡಿರುವ ಬಗ್ಗೆ ಜೈಲು ಅಧಿಕಾರಿಗಳಿಂದ ನ್ಯಾಯಾಧೀಶರು ಸ್ಪಷ್ಟನೆ ಕೇಳಿದ್ದರು. ಈ ಎಲ್ಲಾ ಕಾರಣಗಳಿಂದ ಪವಿತ್ರಾಗೌಡ ಬ್ಯಾರಕ್‌ನ ಶಿಫ್ಟ್ ಮಾಡಲಾಗಿದೆ.


Spread the love

About Laxminews 24x7

Check Also

ಹೆಂಡತಿಯ ಹತ್ಯೆಗೈದ BSF ಯೋಧ – ಮಹಡಿಯಿಂದ ಬಿದ್ದು ಸಾವು ಎಂದು ಬಿಂಬಿಸಲು ಯತ್ನ

Spread the loveಚಂಡೀಗಢ: ರಜೆ ಮೇಲೆ ಮನೆಗೆ ಬಂದಿದ್ದ ಗಡಿ ಭದ್ರತಾ ಪಡೆ ಯೋಧನೊಬ್ಬ ತನ್ನ ಪತ್ನಿಯನ್ನು ಹತ್ಯೆ ಮಾಡಿ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ