ಚಿಕ್ಕಮಗಳೂರು: ಮೊದಲ ಸಂಪುಟ ಸಭೆಯಲ್ಲಿ ಸಿಎಂ ಡಿ.ಕೆ ಶಿವಕುಮಾರ್ ಸಿಕ್ಸರ್ ಹೊಡೆದ್ರು ಎಂದು ಬಿಂಬಿಸಲಾಗಿತ್ತು. ಈಗ ಹಿಟ್ ವಿಕೆಟ್ ಆಗಿದೆ ಎಂದು ಎಂಎಲ್‌ಸಿ ಸಿ.ಟಿ ರವಿ ವ್ಯಂಗ್ಯವಾಡಿದ್ದಾರೆ. ನಗರದ ಬಸವನಹಳ್ಳಿಯಲ್ಲಿರೋ ತಮ್ಮ ನಿವಾಸದಲ್ಲಿ ಅವರು ಮಾತನಾಡಿದರು. ಈ ವೇಳೆ ಡಿ.ಕೆ.ಶಿವಕುಮಾರ್ ಸಂಪುಟದ ಮೊದಲ ವಿಕೆಟ್ ಪತನವಾಗಿದೆ. ಸಂಪುಟ ದರ್ಜೆಯ ಸಚಿವ, ಹಿರಿಯ ಕಾಂಗ್ರೆಸ್ಸಿಗ ರಾಮಲಿಂಗಾರೆಡ್ಡಿ ರಾಜೀನಾಮೆ ನೀಡಿರೋದು ಆಂತರಿಕವಾಗಿ ಎಲ್ಲವೂ ಸರಿ ಇಲ್ಲ ಅನ್ನೋದನ್ನ ಸ್ಪಷ್ಟಪಡಿಸಿದೆ. ಇದು ಭವಿಷ್ಯದ ಬೆಳವಣಿಗೆಗಳನ್ನ …
Read More »ರಾಮಲಿಂಗಾರೆಡ್ಡಿ ನನ್ನ ಆಪ್ತ ಸ್ನೇಹಿತರು, ಮಾತಾಡಿ ಸಮಸ್ಯೆ ಬಗೆಹರಿಸಿಕೊಳ್ಳುತ್ತೇವೆ: ಡಿಕೆಶಿ
ಬೆಂಗಳೂರು: ರಾಮಲಿಂಗಾರೆಡ್ಡಿಯವರುನಮ್ಮ ಪಕ್ಷದ ಹಿರಿಯ ನಾಯಕರು. ನನ್ನ ಆಪ್ತ ಸ್ನೇಹಿತರು. ಅವರ ಅಸಮಾಧಾನವನ್ನು ಮಾತಾಡಿ ಬಗೆಹರಿಸಿಕೊಳ್ಳುತ್ತೇವೆ ಎಂದು ಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ, ರಾಮಲಿಂಗಾರೆಡ್ಡಿಯವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ವಿಚಾರವಾಗಿ, ಅವರು ನನ್ನ ಸಹೋದ್ಯೋಗಿ. ಪಕ್ಷದ ಹಿರಿಯ ನಾಯಕರು. ಅವರಿಗೆ ಹಳ್ಳಿಗಳಲ್ಲಿ ಕೆಲಸ ಮಾಡಲು ಆಗಲ್ಲ ಎಂದಿದ್ದಾರೆ. ಬೇರೆ ಖಾತೆ ನೀಡಬೇಕಂಬ ಆಪೇಕ್ಷೆ ಅವರಿಗಿದೆ. ಈ ಬಗ್ಗೆ ಅವರ …
Read More »ಅಸಮಾಧಾನಗೊಂಡಿದ್ದೇನೆ, ಕೊಟ್ಟ ಮಾತು ತಪ್ಪಿದ್ದಕ್ಕೆ ಮಂತ್ರಿ ಸ್ಥಾನಕ್ಕೆ ರಾಜೀನಾಮೆ – ಡಿಕೆಶಿಗೆ ರಾಮಲಿಂಗಾರೆಡ್ಡಿ ಶಾಕ್
ಬೆಂಗಳೂರು: ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅಧಿಕಾರ ವಹಿಸಿಕೊಂಡ ಕೇವಲ ಎರಡೇ ದಿನಕ್ಕೆ ಸರ್ಕಾರಕ್ಕೆ ಬಂಡಾಯದ ಬಿಸಿ ತಟ್ಟಿದೆ. ತಮಗೆ ಇಷ್ಟವಿಲ್ಲದ ಜಲಸಂಪನ್ಮೂಲ ಖಾತೆ ಹಂಚಿಕೆ ಮಾಡಿರುವುದಕ್ಕೆ ತೀವ್ರ ಆಕ್ರೋಶ ಹೊರಹಾಕಿರುವ ಹಿರಿಯ ನಾಯಕ ರಾಮಲಿಂಗಾರೆಡ್ಡಿ ಅವರು ಕೋರಮಂಗಲದ ತಮ್ಮ ಕಚೇರಿಯಲ್ಲಿ ಕಾರ್ಯಕರ್ತರ ಮುಂದುಗಡೆ ಸಚಿವ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ಘೋಷಿಸಿದ್ದಾರೆ. ಯಾರ ಮನವೊಲಿಕೆಗೂ ಬಗ್ಗದ ರೆಡ್ಡಿ, “ನನ್ನ ನಿರ್ಧಾರ ಅಚಲ, ಯಾರನ್ನೂ ಭೇಟಿಯಾಗುವ ಪ್ರಶ್ನೆಯೇ ಇಲ್ಲ” ಎಂದು ಹಠ ಹಿಡಿದಿರುವುದು ಡಿಕೆಶಿ …
Read More »ಖಾತೆ ಹಂಚಿಕೆಯಾದ ಒಂದೇ ಗಂಟೆಯಲ್ಲಿ ಖಾದರ್ ಸರ್ಪ್ರೈಸ್ ವಿಸಿಟ್ – ಆಸ್ಪತ್ರೆ ಸಿಬ್ಬಂದಿ ಮೇಲೆ ಗರಂ
ಬೆಂಗಳೂರು: ಖಾತೆ ಹಂಚಿಕೆಯಾದ ಒಂದೇ ಗಂಟೆಯಲ್ಲಿ ಆರೋಗ್ಯ ಸಚಿವ ಯು.ಟಿ ಖಾದರ್ ಜಯನಗರದ ಆಸ್ಪತ್ರೆಗೆ ಸರ್ಪ್ರೈಸ್ ವಿಸಿಟ್ ನೀಡಿದ್ದಾರೆ. ಆಸ್ಪತ್ರೆಯ ಸ್ವಚ್ಛತೆ, ರೋಗಿಗಳಿಗೆ ಚಿಕಿತ್ಸೆ ಸರಿಯಾಗಿ ಸಿಗುತ್ತಿದೆಯೇ ಎಂದು ಪರಿಶೀಲನೆ ನಡೆಸಿದ್ದಾರೆ. ರಾತ್ರಿ ಪಾಳಯದಲ್ಲಿ ಸಿಬ್ಬಂದಿ ಕೊರತೆ ಇರುವುದು ಈ ವೇಳೆ ಗಮನಕ್ಕೆ ಬಂದಿದೆ. ಇನ್ನೂ ಇರುವ ಸಿಬ್ಬಂದಿ ಪೈಕಿ ಕೆಲವರು ಕೆಲಸಕ್ಕೆ ಗೈರಾಗಿದ್ದರು. ಇದರಿಂದ ಸಿಬ್ಬಂದಿ ಮೇಲೆ ಸಚಿವರು ಗರಂ ಆಗಿದ್ದಾರೆ. ಈ ಬಗ್ಗೆ ಮಾಧ್ಯಮಗಳ ಜೊತೆ ಮಾತಾಡಿದ …
Read More »ವಿವಿ ಸಹಾಯಕ ಪ್ರಾಧ್ಯಾಪಕಿಯ ನಿಗೂಢ ಹತ್ಯೆ
ನವದೆಹಲಿ: ದೆಹಲಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿಯೊಬ್ಬರ ನಿಗೂಢ ಹತ್ಯೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಶಿವಾಜಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿದ್ದ ದೇವಸ್ಮಿತಾ ಪೌಲ್ ಕೊಲೆಯಾದ ದುರ್ದೈವಿ. ಇವರು ಪೂರ್ವ ದೆಹಲಿಯ ವಸುಂಧರಾ ಎನ್‌ಕ್ಲೇವ್‌ನ ಸತ್ಯಂ ಅಪಾರ್ಟ್ಮೆಂಟ್‌ನಲ್ಲಿ ಒಂಟಿಯಾಗಿ ಜೀವನ ನಡೆಸುತ್ತಿದ್ದರು. ಇವರ ಪತಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ ಎನ್ನಲಾಗಿದೆ. ಗುರುವಾರ ಮಧ್ಯಾಹ್ನ 2:25 ರ ಸುಮಾರಿಗೆ ದೇವಸ್ಮಿತಾ ಪೌಲ್ ಸಹೋದರಿ ದೇವಾರತಿ ನ್ಯೂ ಅಶೋಕ್ ನಗರ ಪೊಲೀಸ್ ಠಾಣೆಗೆ ಕರೆ ಮಾಡಿ ಘಟನೆಯ …
Read More »ಅಣ್ಣಾಮಲೈ ರಾಜೀನಾಮೆ ಅಂಗೀಕಾರ – 6 ವರ್ಷಗಳ ಬಿಜೆಪಿ ಸಂಬಂಧ ಕೊನೆಗೊಳಿಸಿದ ಮಾಜಿ ಐಪಿಎಸ್
ನವದೆಹಲಿ: ತಮಿಳುನಾಡು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಬಿಜೆಪಿಗೆ ಗುಡ್‌ಬೈ ಹೇಳಿದ್ದಾರೆ. ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರ ರಾಜೀನಾಮೆ ಪತ್ರವನ್ನು ಅಂಗೀಕರಿಸಿದ್ದಾರೆ. ಈ ಮೂಲಕ ಬಿಜೆಪಿಯೊಂದಿಗಿನ ತಮ್ಮ 6 ವರ್ಷಗಳ ಸುದೀರ್ಘ ಸಂಬಂಧವನ್ನು ಕೊನೆಗೊಳಿಸಿದ್ದಾರೆ. ಜೂನ್ 2 ರಂದು ಅಣ್ಣಾಮಲೈ ನಿತಿನ್ ನಬಿನ್ ಅವರನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಸಿದ್ದರು. ರಾಜೀನಾಮೆ ಸಲ್ಲಿಕೆಯಾದ ಬಳಿಕ ಅವರು ಬೆಜೆಪಿಯಲ್ಲೇ ಇರುತ್ತಾರೆ. ರಾಜ್ಯಸಭೆಗೆ ಹೋಗುತ್ತಾರೆ ಎಂಬ …
Read More »ಆಹಾರ ಸಾಕು, ಬೇರೆ ಖಾತೆ ಬೇಕು – ರಾಮಲಿಂಗಾರೆಡ್ಡಿ ಆಯ್ತು, ಈಗ ಮುನಿಯಪ್ಪ ಸರದಿ
ಬೆಂಗಳೂರು: ಹಿರಿಯ ಸಚಿವ ರಾಮಲಿಂಗಾರೆಡ್ಡಿ ಅವರ ಹಠಾತ್ ರಾಜೀನಾಮೆ ಬೆನ್ನಲ್ಲೇ, ಮತ್ತೊಬ್ಬ ಹಿರಿಯ ನಾಯಕ ಹಾಗೂ ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಅವರು ಬಹಿರಂಗವಾಗಿಯೇ ಅಸಮಾಧಾನದ ಬಾಂಬ್ ಸಿಡಿಸಿದ್ದಾರೆ. ದೇವನಹಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, “ಖಾತೆ ಹಂಚಿಕೆಯಲ್ಲಿ ಸೀನಿಯಾರಿಟಿ ಕಾಯ್ದುಕೊಂಡಿಲ್ಲ, ಈ ತಾರತಮ್ಯ ಹೀಗೆಯೇ ಮುಂದುವರಿದರೆ 2028ರ ಚುನಾವಣೆಯಲ್ಲಿ ಪಕ್ಷಕ್ಕೆ ಭಾರಿ ಕಷ್ಟವಾಗಲಿದೆ” ಎಂದು ಸ್ಫೋಟಕ ಎಚ್ಚರಿಕೆ ನೀಡಿದ್ದಾರೆ. ಕಳೆದ ಮೂರು ವರ್ಷಗಳಿಂದ ಆಹಾರ ಇಲಾಖೆಯನ್ನು ನಿಭಾಯಿಸಿರುವ ತಮಗೆ ಮತ್ತೆ …
Read More »ಭಾರತಕ್ಕೆ Su-57 ಸ್ಟೆಲ್ತ್ ಫೈಟರ್ ಜೆಟ್ ಆಫರ್ ನೀಡಿದ ಪುಟಿನ್
ನವದೆಹಲಿ: ಭಾರತೀಯ ವಾಯುಪಡೆಗೆ (IAF) ‘ತೇಜಸ್’ ಲಘು ಯುದ್ಧ ವಿಮಾನಗಳ ಸೇರ್ಪಡೆಯ ಯಶಸ್ಸಿನ ನಂತರ, ಕೇಂದ್ರ ಸರ್ಕಾರ ಸಾವಿರ ಕೋಟಿ ವೆಚ್ಚದಲ್ಲಿ 5ನೇ ತಲೆಮಾರಿನ ಯುದ್ಧ ವಿಮಾನಗಳನ್ನ ದೇಶೀಯವಾಗಿ ನಿರ್ಮಿಸುವ ಕಾರ್ಯಕ್ಕೆ ಮುಂದಾಗಿದೆ. ಈ ಹೊತ್ತಿನಲ್ಲೇ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತಕ್ಕೆ ಬಿಗ್ ಆಫರ್‌ವೊಂದನ್ನ ನೀಡಿದ್ದಾರೆ. ಸುಖೋಯ್ Su-57 5ನೇ ತಲೆಮಾರಿನ ಸ್ಟೆಲ್ತ್ ಯುದ್ಧವಿಮಾನಕ್ಕೆ ಸಂಬಂಧಿಸಿದಂತೆ ಭರ್ಜರಿ ಆಫರ್‌ವೊಂದನ್ನ ನೀಡಿದ್ದಾರೆ. ಒಂದು ದಿನದ ಹಿಂದೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಪುಟಿನ್, …
Read More »ಯಾವ್ ಟ್ರಬಲ್ ಶೂಟರ್ ರೀ – ಸಿಎಂ ಡಿಕೆಶಿಗೆ ಕೆ.ಎನ್ ರಾಜಣ್ಣ ಕೌಂಟರ್
ತುಮಕೂರು: ಯಾವ್ ಟ್ರಬಲ್ ಶೂಟರ್ ರೀ… ನೀವೇ ಟ್ರಬಲ್ ಶೂಟರ್ ಮಾಡಿರೋದು. ಹಾಗಿದ್ದ ಮೇಲೆ ಅಸ್ಸಾಂಗೆ ಹೋಗಿ ಯಾಕೆ ಟ್ರಬಲ್ ಶೂಟರ್ ಆಗಲಿಲ್ಲ ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರು ಡಿ.ಕೆ.ಶಿವಕುಮಾರ್ ವಿರುದ್ಧ ವ್ಯಂಗ್ಯವಾಡಿದರು. ಸಚಿವ ಸ್ಥಾನಕ್ಕೆ ರಾಮಲಿಂಗಾ ರೆಡ್ಡಿ ರಾಜೀನಾಮೆ ನೀಡುವ ವಿಚಾರ ಹಾಗೂ ಖಾತೆ ಹಂಚಿಕೆ ಕುರಿತು ಕೆ.ಎನ್. ರಾಜಣ್ಣ ಅವರು ಪ್ರತಿಕ್ರಿಯಿಸಿದರು. ಮಧುಗಿರಿಯಲ್ಲಿ ಮಾತನಾಡಿದ ಅವರು, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ರಾಮಲಿಂಗಾ ರೆಡ್ಡಿ …
Read More »ರಾಜ್ಯಸಭಾ ಚುನಾವಣೆ – ನಾಮಪತ್ರ ಸಲ್ಲಿಸಿದ ಖರ್ಗೆ
ಬೆಂಗಳೂರು: ರಾಜ್ಯಸಭಾ ಚುನಾವಣೆಗೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಇಂದು ಅಧಿಕೃತವಾಗಿ ತಮ್ಮ ನಾಮಪತ್ರವನ್ನು ಸಲ್ಲಿಸಿದ್ದಾರೆ. ವಿಧಾನಸೌಧದಲ್ಲಿರುವ ಚುನಾವಣಾ ಅಧಿಕಾರಿಯ ಕಚೇರಿಗೆ ತೆರಳಿದ ಅವರು, ಮುಂಬರುವ ರಾಜ್ಯಸಭಾ ಚುನಾವಣೆಯ ಅಭ್ಯರ್ಥಿಯಾಗಿ ತಮ್ಮ ನಾಮಪತ್ರ ದಾಖಲೆಗಳನ್ನು ಹಸ್ತಾಂತರಿಸಿದರು. ಮಲ್ಲಿಕಾರ್ಜುನ ಖರ್ಗೆ ಅವರು ನಾಮಪತ್ರ ಸಲ್ಲಿಸುವ ವೇಳೆ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ, ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಉಪಸ್ಥಿತರಿದ್ದರು. …
Read More »
Laxmi News 24×7