Breaking News

Laxminews 24x7

ಕೋಲಾರದಲ್ಲಿ ದೇಶದ ಮೊದಲ ಮಿನಿ ಹೆಲಿಕಾಪ್ಟರ್ ತಯಾರಿಕಾ ಘಟಕಕ್ಕೆ ಮೋದಿಯಿಂದ ಚಾಲನೆ

ಕೋಲಾರ: ಚಿನ್ನದ ನಾಡು ಕೋಲಾರ  ಜಿಲ್ಲೆ  ರಾಷ್ಟ್ರ ಮಟ್ಟದಲ್ಲಿ ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗುತ್ತಿದೆ. ಕೋಲಾರ ತಾಲ್ಲೂಕಿನ ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಾಣವಾಗಿರುವ ಟಾಟಾ ಏರ್‌ಬಸ್ ಮಿನಿ ಹೆಲಿಕಾಪ್ಟರ್ ಅಂತಿಮ ಜೋಡಣಾ ಘಟಕಕ್ಕೆ ನಾಳೆ (ಫೆ.17) ಸಂಜೆ 4.20ಕ್ಕೆ ಅಧಿಕೃತ ಚಾಲನೆ ದೊರೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಫ್ರಾನ್ಸ್ ಅಧ್ಯಕ್ಷ ಇಮಾನ್ಯುವಲ್ ಮ್ಯಾಕ್ರಾನ್ ವರ್ಚುವಲ್ ಆಗಿ ಘಟಕ ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು …

Read More »

ಹಂಪಿಯಲ್ಲಿ ಇಸ್ರೇಲ್ ಮಹಿಳೆ ಮೇಲೆ ಅತ್ಯಾಚಾರ, ವಿದೇಶಿಗನ ಕೊಲೆ ಕೇಸ್: ಮೂವರಿಗೆ ಗಲ್ಲು ಶಿಕ್ಷೆ

ಕೊಪ್ಪಳ: ಹಂಪಿ  ಬಳಿ ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ಹಾಗೂ ವಿದೇಶಿ ಪ್ರವಾಸಿಗನ ಕೊಲೆ ಪ್ರಕರಣದ ಅಪರಾಧಿಗಳಿಗೆ ಕೋರ್ಟ್ ಮರಣದಂಡನೆ ವಿಧಿಸಿದೆ. ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಇಸ್ರೇಲ್ ಮಹಿಳೆ ಮೇಲಿನ ಅತ್ಯಾಚಾರ ಮತ್ತು ಅಮೆರಿಕದ ಪ್ರವಾಸಿಗನ ಕೊಲೆ ಪ್ರಕರಣ ಸಂಬಂಧ ಗಂಗಾವತಿ ನ್ಯಾಯಾಲಯವು, ಇದೇ ಫೆಬ್ರವರಿ 6ರಂದು ಮೂವರು ಆರೋಪಿಗಳನ್ನು ದೋಷಿಗಳೆಂದು ತೀರ್ಪು ನೀಡಿತ್ತು. ಇದರ ಬೆನ್ನಲ್ಲೇ ಇಂದು (ಫೆಬ್ರವರಿ 16)ಗಂಗಾವತಿ ಒಂದನೇ ಹೆಚ್ಚುವರಿ ಜಿಲ್ಲಾ ಸತ್ರ ಮತ್ತು ನ್ಯಾಯಾಲಯದ ನ್ಯಾಯಾಧೀಶರಾದ …

Read More »

ಹುಬ್ಬಳ್ಳಿ ನೇಹಾ ಹಿರೇಮಠ ಹತ್ಯೆ ಕೇಸ್​: ಹಂತಕ ಫಯಾಜ್​​ಗೆ ಮತ್ತೆ ಜೈಲೇ ಗತಿ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಅವರ ಪುತ್ರಿ, ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣ ದೇಶಾದ್ಯಂತ ಭಾರೀ ಸಂಚಲನ ಮೂಡಿಸಿತ್ತು. ಸದ್ಯ ಪ್ರಕರಣದ ಆರೋಪಿ ಫಯಾಜ್ ಜಾಮೀನು ಅರ್ಜಿಯನ್ನು 3ನೇ ಬಾರಿಗೆ ಧಾರವಾಡ ಹೈಕೋರ್ಟ್​ ಪೀಠ  ತಿರಸ್ಕರಿಸಿ ಇಂದು ಆದೇಶ ಹೊರಡಿಸಿದೆ. ಆ ಮೂಲಕ ಫಯಾಕ್​​ಗೆ ಮತ್ತೆ ಜೈಲೇ ಗತಿ ಆಗಿದೆ. 2024 ಏಪ್ರಿಲ್ 18ರಂದು ಹುಬ್ಬಳ್ಳಿ ನಗರದ ಬಿವಿಬಿ ಕಾಲೇಜು ಕ್ಯಾಂಪಸ್​ನಲ್ಲಿ‌ ವಿದ್ಯಾರ್ಥಿನಿ ನೇಹಾ ಹಿರೇಮಠ …

Read More »

ಕಾರ್ಮೋಡ ಕವಿದಿತು, ಅಂತರಂಗದ ಪಕ್ಷಿ ಹಾರಿತು, ಕೆರೆ ಕಟ್ಟೆ ತುಂಬಿ ಹರಿದಾವು ಪರಾಕ್ – ಮುಳ್ಳುಗದ್ದುಗೆ ಮೇಲೆ ಕುಣಿದು ಕಾರ್ಣಿಕ!

ದಾವಣಗೆರೆ: ಶಿವರಾತ್ರಿ ಪ್ರಯುಕ್ತ ಚನ್ನಗಿರಿ  ತಾಲೂಕಿನ ಕೆಂಗಾಪುರ ಗ್ರಾಮದ ಉತ್ಸವದಲ್ಲಿ ರಾಮಲಿಂಗೇಶ್ವರ ಸ್ವಾಮೀಜಿ ಮುಳ್ಳುಗದ್ದುಗೆ  ಏರಿ ಕಾರ್ಣಿಕ ನುಡಿದಿದ್ದಾರೆ. ಮುಳ್ಳುಗದ್ದುಗೆ ಏರಿ ಕುಣಿದ ನಂತರ, ಕಾರ್ಮೋಡ ಕವಿದಿತು, ಅಂತರಂಗದ ಪಕ್ಷಿ ಹಾರಿತು, ಕೆರೆ ಕಟ್ಟೆಗಳು ತುಂಬಿ ಹರಿದಾವು ಪರಾಕ್ ಎಂದು ಸ್ವಾಮೀಜಿ ಕಾರ್ಣಿಕ ನುಡಿದಿದ್ದಾರೆ. ಈ ಬಾರಿ ಉತ್ತಮ ಮಳೆಯಾಗಿ ಕೆರೆ ತೊರೆಗಳು ತುಂಬಿ ತುಳಕಲಿವೆ. ಉತ್ತಮ ಬೆಳೆ ಬರಲಿದೆ. ಜನರಿಗೆ ಪ್ರಯಾಣದಲ್ಲಿ ಸಾಕಷ್ಟು ದುರಂತ ನಡೆದು, ಸಾವು ನೋವು …

Read More »

ರಾಜಸ್ಥಾನದ ಕೆಮಿಕಲ್ ಫ್ಯಾಕ್ಟರಿಯಲ್ಲಿ ಸ್ಫೋಟ – 7 ಮಂದಿ ಸಾವು, ಹಲವರು ಸಿಲುಕಿರುವ ಶಂಕೆ

ಜೈಪುರ: ಇಲ್ಲಿನ ಭಿವಾಡಿಯಲ್ಲಿರುವ  ಕೆಮಿಕಲ್ ಫ್ಯಾಕ್ಟರಿಯಲ್ಲಿ  ಸಂಭವಿಸಿದ ಭಾರೀ ಬೆಂಕಿ ಅವಘಡದಿಂದಾಗಿ 7 ಕಾರ್ಮಿಕರು ಸಜೀವ ದಹನಗೊಂಡಿದ್ದು, ಇನ್ನೂ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಇಂದು ಬೆಳಿಗ್ಗೆ 9:30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ಈ ವೇಳೆ ಕಾರ್ಖಾನೆಯಲ್ಲಿ 20ರಿಂದ 25 ಜನ ಕಾರ್ಮಿಕರಿದ್ದರು. ಏಕಾಏಕಿ ಹೊತ್ತಿಕೊಂಡ ಬೆಂಕಿ ಕೆಲವೇ ನಿಮಿಷಗಳಲ್ಲಿ ಕಾರ್ಖಾನೆಯ ತುಂಬೆಲ್ಲಾ ಆವರಿಸಿಕೊಂಡಿದ್ದು, ಕೆಲವು ಕಾರ್ಮಿಕರು ಹೊರಗೆ ಓಡಿಬಂದು ಪ್ರಾಣವನ್ನು ಉಳಿಸಿಕೊಂಡಿದ್ದಾರೆ ಎಂದು ಸುದ್ದಿ ಮಾಧ್ಯಮವೊಂದು ವರದಿ ಮಾಡಿದೆ. …

Read More »

ಬಾಗೇಪಲ್ಲಿ `ಕೈ’ ಶಾಸಕ ಸುಬ್ಬಾರೆಡ್ಡಿ ಶಾಸಕ ಸ್ಥಾನ ಅಸಿಂಧು: ಹೈಕೋರ್ಟ್‌ ಆದೇಶ

ಬೆಂಗಳೂರು: ಬಾಗೇಪಲ್ಲಿಯ  ಕಾಂಗ್ರೆಸ್‌  ವಿಜಯಿ ಅಭ್ಯರ್ಥಿ ಸುಬ್ಬಾರೆಡ್ಡಿಯವರ ಶಾಸಕ ಸ್ಥಾನ ಅಸಿಂಧುಗೊಳಿಸಿ ಹೈಕೋರ್ಟ್‌  ಮಹತ್ವದ ಆದೇಶ ಪ್ರಕಟಿಸಿದೆ. ನಾಮಪತ್ರ ಸಲ್ಲಿಕೆ ವೇಳೆ ಸಂಪೂರ್ಣ ಆಸ್ತಿ ಘೋಷಣೆ ಮಾಡಿಲ್ಲ, ಕ್ರಿಮಿನಲ್ ಕೇಸ್‌ಗಳ ಮಾಹಿತಿಯನ್ನು ಮರೆಮಾಚಿದ್ದಾರೆ ಎಂದು ಬಿಜೆಪಿ ಪರಾಜಿತ ಅಭ್ಯರ್ಥಿ ಮುನಿರಾಜು ಅವರು 2023 ಜೂನ್ 24ರಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ವೇಳೆ ಆಸ್ತಿ ಮಾಹಿತಿಯನ್ನು ಉಲ್ಲಂಘನೆ ಮಾಡಿದ್ದು ದೃಢಪಟ್ಟ ಹಿನ್ನೆಲೆಯಲ್ಲಿ ಸುಬ್ಬಾರೆಡ್ಡಿ ಶಾಸಕ ಸ್ಥಾನವನ್ನು ಹೈಕೋರ್ಟ್‌ ಅಸಿಂಧುಗೊಳಿಸಿದೆ. ಒಂದು …

Read More »

ಎಲ್ಲಾ ಧರ್ಮದವರೂ ದೇಶದಲ್ಲಿರುವಾಗ ವಂದೇ ಮಾತರಂ ರಾಷ್ಟ್ರಗೀತೆ ಆಗಲು ಸಾಧ್ಯವಿಲ್ಲ: ಬಿ.ಕೆ ಹರಿಪ್ರಸಾದ್‌

ಬೆಂಗಳೂರು: ಎಲ್ಲಾ ಧರ್ಮದವರೂ ದೇಶದಲ್ಲಿರುವಾಗ ವಂದೇ ಮಾತರಂ ರಾಷ್ಟ್ರಗೀತೆ  ಆಗಲು ಸಾಧ್ಯವಿಲ್ಲ ಎಂದು ಎಂಎಲ್‌ಸಿ ಬಿ.ಕೆ ಹರಿಪ್ರಸಾದ್‌  ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ವಂದೇ ಮಾತರಂ ಹೇಳಿ ರಾಷ್ಟ್ರಗೀತೆಯನ್ನು ಡೀ ಪ್ರಮೋಟ್ ಮಾಡಲು ಕೇಂದ್ರ ಸರ್ಕಾರ ಪ್ರಯತ್ನ ಮಾಡುತ್ತಿದೆ. ಆರ್‌ಎಸ್‌ಎಸ್‌ನ ಗೋಳವಲ್ಕರ್ ರಾಷ್ಟ್ರಗೀತೆಯ ಬಗ್ಗೆಯೇ ಅಪಸ್ವರ ಎತ್ತಿದ್ದರು. ಒಂದೇ ಒಂದು ದಿನವೂ ರಾಷ್ಟ್ರ ಗೀತೆಯನ್ನು ಅವರ ಸಂಘದಲ್ಲಿ ಹಾಡಿದವರಲ್ಲ. ಅದೇ ಕಾರಣಕ್ಕೆ …

Read More »

ಶಿವನ ಆರಾಧನೆಯಲ್ಲಿ ರಾಮದುರ್ಗ ಜನತೆ

ಶಿವನ ಕೈಲಾಸವೇ ಧರೆಗಿಳಿದ ಅನುಭವ ಎಲ್ಲಿ ನೋಡಿದರಲ್ಲಿ ಕೈಲಾಸನಾಥನ ನಾಮ ಸ್ಮರಣೆ ಭಕ್ತಿಯ ಭಾವಪರವಶದಲ್ಲಿ ಮುಳಗಿದ ಶಿವನ ಆರಾಧಕರು ಅಪಾರ ಸಂಖ್ಯೆಯ ಭಕ್ತಾದಿಗಳು ಶಿವನ ದರ್ಶನ ಪಡೆದುಕೊಂಡರು. ಈ ಭಕ್ತಿಯ ಜಾತ್ರೆ ನಡೆದಿದ್ದು ರಾಮದುರ್ಗ ಪಟ್ಟಣದ ಮುಳ್ಳೂರು ಗುಡ್ಡದ ರಾಮೇಶ್ವರಂ ನಲ್ಲಿರುವ ಅಶೋಕವನದ ಶಿವನಮೂರ್ತಿಯಲ್ಲಿ. ಪ್ರತಿ ವರ್ಷದಂತೆ ಮಹಾಶಿವರಾತ್ರಿಯ ಅಂಗವಾಗಿ ಬಹಳ ವಿಜೃಂಭಣೆಯಿಂದ ಶಿವನ ಪೂಜಾ ಕೈಂಕರ್ಯಗಳು ನಡೆಯುವುದರ ಮೂಲಕ ಪರಮೇಶ್ವರನ ಆರಾಧನೆಯನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಶಿವ ಪ್ರತಿಷ್ಠಾನದ …

Read More »

ಗೋಕಾಕ  ಕೋರ್ಟ್ ಆವರಣದಲ್ಲಿ” ಕೋರ್ಟ್ ಕ್ಯಾಂಟಿನ್” ಉದ್ಘಾಟಿಸಿದ ಸಚಿವ ಸತೀಶ್ ಜಾರಕಿಹೊಳಿ

ಈ ಸಂದರ್ಭದಲ್ಲಿ ಮಾನ್ಯ ಪ್ರಧಾನ ಹಿರಿಯ ದಿವಾನಿ ನ್ಯಾಯಾಧೀಶರಾದ ಶ್ರೀ ಉಮೇಶ ಆತನೂರೆ, ಮಾನ್ಯ ಹೆಚ್ಚುವರಿ ಹಿರಿಯ ದಿವಾನಿ ನ್ಯಾಯಾಧೀಶರಾದ ಶ್ರೀ ಮಾಹಾದೇವ ಕಾನಟ್ಟಿ, ಮಾನ್ಯ ಪ್ರಧಾನ ದಿವಾನಿ ಹಾಗೂ ಜೆಎಂಎಫ್ ಸಿ ನ್ಯಾಯಾಧೀಶರಾದ ಶ್ರೀಮತಿ ಚೈತ್ರಾ ಕುಲಕರ್ಣಿ ಹಾಗೂ ಗೋಕಾಕ ವಕೀಲರ ಸಂಘದ ಅಧ್ಯಕ್ಷರಾದ ಸುಭಾಷ್ ಪಾಟೀಲ್ , ಉಪಾಧ್ಯಕ್ಷರಾದ ವಿಠ್ಠಲ ಜಾಗನೂರ, ಬಸವರಾಜ ದಂಡಿನ, ಪ್ರಧಾನ ಕಾರ್ಯದರ್ಶಿ ವಿಠ್ಠಲ ಮೆಳವಂಕಿ, ಜಂಟಿ ಕಾರ್ಯದರ್ಶಿ ಸಿದ್ದಲಿಂಗ ವಡೇರಹಟ್ಟಿ, ಅಪ್ಪಣ್ಣಾ …

Read More »

ಕ್ಷೇತ್ರದ ಅಭಿವೃದ್ಧಿಗೆ ಸದಾ ಬದ್ಧ: ಸಚಿವ ಸತೀಶ್‌ ಜಾರಕಿಹೊಳಿ

ಯಮಕಮರಡಿ: ಕ್ಷೇತ್ರದ ಜನರ ಆಶೀರ್ವಾದದಿಂದ 15 ವರ್ಷಗಳ ಕಾಲ ಕ್ಷೇತ್ರದ ಅಭಿವೃದ್ಧಿಗಾಗಿ ನಿರಂತರ ಶ್ರಮಿಸಲಾಗುತ್ತಿದೆ. ಮುಂದಿನ ದಿನಗಳ ಶ್ರೀಗಳ, ಜನರ ಸಹಕಾರದಿಂದ ಹೆಚ್ವಿನ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು. ಯಮಕಮರಡಿ ಕ್ಷೇತ್ರದ ಕಡೋಲಿಯಲ್ಲಿ‌ ಶ್ರೀ ದುರದುಂಡೀಶ್ವರ ಮಠದಲ್ಲಿ ಮಹಾಶಿವರಾತ್ರಿ ನಿಮಿತ್ತವಾಗಿ ಆಯೋಜಿಸಲಾದ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ, 1 ಕೋಟಿ 10 ಲಕ್ಷ ರೂ. ವೆಚ್ಚದಲ್ಲಿ ಮಠದ ಜೀರ್ಣೋದ್ಧಾರ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿ …

Read More »