Breaking News

Laxminews 24x7

ಬೀದರ್‌ನ ವಿವಿಧ ಮಠಗಳಿಗೆ ಸರ್ಕಾರದ ದೇಣಿಗೆ ವಿತರಿಸಿದ ಈಶ್ವರ್‌ ಖಂಡ್ರೆ‌‌

ಬೀದರ್: ಜಿಲ್ಲೆಯ ವಿವಿಧ ಮಠಗಳಿಗೆ ಸರ್ಕಾರದ ದೇಣಿಗೆ ವಿತರಿಸಿದ ಈಶ್ವರ್‌ ಖಂಡ್ರೆ‌‌  ಅವರು ಮಠಮಾನ್ಯಗಳು, ಧಾರ್ಮಿಕ, ಆಧ್ಯಾತ್ಮಿಕ ಪ್ರಸಾರ, ಪ್ರಚಾರದ ಜೊತೆಗೆ ಸಮಾಜದಲ್ಲಿ ಸ್ವಾಸ್ಥ್ಯ ಮೂಡಿಸಲು ಶ್ರಮಿಸುತ್ತಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಮೆಹಕರ್ ವಿಶ್ವಶಾಂತಿ ಟ್ರಸ್ಟ್, ತಡೋಳ, ಹಾರಕೋಡ ಶ್ರೀ ಚನ್ನಬಸವೇಶ್ವರ ಸಂಸ್ಥಾನ, ದೇಗಲಮಾಡಿ ಬಸವಲಿಂಗ ಅವಧೂತ ಆಶ್ರಮ, ಹುಡುಗಿ ಹಿರೇಮಠ ಟ್ರಸ್ಟ್, ಬೆಲ್ದಾಳೆಯ ಶರಣ ತತ್ವ ಪ್ರಸಾರ ಮತ್ತು ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ ಸೇರಿದಂತೆ ಸುಮಾರು 28 ಮಠಗಳಿಗೆ ರಾಜ್ಯ …

Read More »

ಜಲಪಾತದ ಬಳಿ ರೀಲ್ಸ್ ಮಾಡಲು ಹೋಗಿ ಮೂವರು ಸಾವು – ಕ್ಯಾಮೆರಾ ಮುಂದೆಯೇ ಪ್ರಾಣಬಿಟ್ಟ ಯುವತಿಯರು

ಹೈದರಾಬಾದ್: ಜಲಪಾತದ ಬಳಿ ರೀಲ್ಸ್ ಮಾಡಲು ಹೋಗಿದ್ದ ಮೂವರು ಯುವತಿಯರು ಕ್ಯಾಮೆರಾ ಮುಂದೆಯೇ ಮುಳುಗಿ ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಮೃತರನ್ನು 17 ವರ್ಷದ ತ್ರಿಶಾ, 16 ವರ್ಷದ ರತ್ನ ಕುಮಾರಿ ಮತ್ತು 16 ವರ್ಷದ ಪವಿತ್ರಾ 16 ಎಂದು ಗುರುತಿಸಲಾಗಿದೆ. ಅಲ್ಲೂರಿ ಸೀತಾರಾಮ ರಾಜು ಜಿಲ್ಲೆಯ ಮುಲ್ಲುಂಗುಮ್ಮಿ ಜಲಪಾತದಲ್ಲಿ ವಿಡಿಯೋ ಮಾಡಲು ಹೋದ ಮೂವರು ಯುವತಿಯರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇತರ ಇಬ್ಬರು ಹುಡುಗಿಯರು ಸುರಕ್ಷಿತವಾಗಿ ಪಾರಾಗಿದ್ದಾರೆ. ಆರಂಭದಲ್ಲಿ …

Read More »

ಖಾಸಗಿ ಇಂಧನ‌ ಕಂಪನಿಗಳ‌ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ ಆಹಾರ ಸಚಿವ:- ಮುನಿಯಪ್ಪ.

ವಸಂತನಗರ: ಆಹಾರ ಸಚಿವರಾದ ಕೆಹೆಚ್. ಮುನಿಯಪ್ಪ‌ ರವರು ಇಂದು ವಸಂತನಗರದ ಆಹಾರ ಭವನದಲ್ಲಿ ಖಾಸಗಿ ಇಂಧನ ಕಂಪನಿಗಳ ಮುಖ್ಯಸ್ಥರೊಂದಿಗೆ ಸಭೆಯನ್ನು ನಡೆಸಿದರು. ಮಾರುಕಟ್ಟೆಯಲ್ಲಿ ಗ್ರಾಹಕರು ನಿಮಗೆ ಅತ್ಯವಶ್ಯಕ ವಾಗಿದ್ದು ಈ ಕಷ್ಟದ ಸಂದರ್ಭದಲ್ಲಿ ಗ್ರಾಹಕರಿಗಾಗಿ ಧರ ಹೆಚ್ಚಿಸದೆ ಒಂದೆ ದರವನ್ನು ವಿಧಿಸಲು ನಿಮ್ಮ ಮಾಲಿಕರೊಂದಿಗೆ ಚರ್ಚಿಸಿ ಸರ್ಕಾರದ ದರವನ್ನು ಪಾಲಿಸುವಂತೆ ಮನವರಿಕೆ ಮಾಡಲು ಸಲಹೆ ನೀಡಿದರು ಖಾಸಗಿ ಕಂಪನಿಗಳ ಹೆಚ್ಚನ ಧರದಿಂದ ಗ್ರಾಹಕರಲ್ಲಿ ಗೊಂದಲ ಉಂಟಾಗಿದ್ದು ಆದಷ್ಟು ಕಡಿಮೆ ಮಾಡಿದರೆ ಗ್ರಾಹಕರಿಗೆ …

Read More »

ಹಣ ವಸೂಲಿಗಾಗಿ ಸಿದ್ದರಾಮಯ್ಯ ತಮ್ಮ ಮಗನನ್ನು ನೇಮಕ ಮಾಡಿಕೊಂಡಿದ್ದಾರೆ: ಹೆಚ್‌ಡಿಕೆ ವಾಗ್ದಾಳಿ

ಮೈಸೂರು: ಹಣ ವಸೂಲಿಗಾಗಿ ಸಿದ್ದರಾಮಯ್ಯ ತಮ್ಮ ಮಗನನ್ನು ನೇಮಕ ಮಾಡಿಕೊಂಡಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ಕುಟುಂಬ ಸಮೇತರಾಗಿ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ಹೆಚ್.ಡಿ.ಕುಮಾರಸ್ವಾಮಿ ಅವರು ಚಾಮುಂಡಿ ತಾಯಿ ದರ್ಶನ ಪಡೆದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಂ ಮಗನ ವಸೂಲಿ ಹೇಗಿದೆ ಎಂಬುದು ಎಲ್ಲಾ ಅಧಿಕಾರಿಗಳಿಗೆ ಗೊತ್ತಿದೆ. ಸಿದ್ದರಾಮಯ್ಯಗೆ ಕುಟುಂಬ ರಾಜಕಾರಣದ ಬಗ್ಗೆ ಮಾತಾಡುವ ನೈತಿಕತೆಯ ಇಲ್ಲ. ನಾನು ನನ್ನ ಮಗನನ್ನು ವಸೂಲಿಗಾಗಿ ರಾಜಕೀಯಕ್ಕೆ ತಂದಿಲ್ಲ. …

Read More »

ಬಸವೇಶ್ವರ ಪ.ಪೂ ವಾಣಿಜ್ಯ ಮಹಾವಿದ್ಯಾಲಯದ ಫಲಿತಾಂಶ : ಶೇ.88.10%

ಬಾಗಲಕೋಟೆ: 2025-26ನೇ ಸಾಲಿನ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿಯ ಫಲಿತಾಂಶ ಪ್ರಕಟವಾಗಿದ್ದು, ಮಹಾವಿದ್ಯಾಲಯದ ಕುಮಾರ ಮಂಥನ ಮಹಾವೀರ ಪೋರವಾಲ 580 (ಶೇಕಡಾ 96.67%) ಅಂಕಗಳನ್ನು ಪಡೆದು ಮಹಾವಿದ್ಯಾಲಯಕ್ಕೆ ಪ್ರಥಮ ಸ್ಥಾನ ಪಡೆದಿದ್ದು, ಮಹಾವಿದ್ಯಾಲಯದ ಶೇಕಡಾವಾರು ಫಲಿತಾಂಶ 88.10% ಆಗಿದ್ದು, ಒಟ್ಟು 168 ವಿದ್ಯಾರ್ಥಿಗಳಲ್ಲಿ 148 ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದು, 34 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ, 69 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 39 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಮತ್ತು 6 ವಿದ್ಯಾರ್ಥಿಗಳು ತೃತೀಯ …

Read More »

ಬಿವಿವಿಎಸ್ ಸಂಯುಕ್ತ ಪಿಯು ಕಾಲೇಜು ಪಲಿತಾಂಶ 87.22%

ಬಾಗಲಕೋಟೆ: 2025-26ನೇ ಸಾಲಿನ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿಯ ಫಲಿತಾಂಶ ಪ್ರಕಟವಾಗಿದ್ದು, ಬಸವೇಶ್ವರ ಸಂಯುಕ್ತ ಪ.ಪೂ ಮಹಾವಿದ್ಯಾಲಯದ ಕಲಾ ವಿಭಾಗ್ ಐಶ್ವರ್ಯ ಛಲವಾದಿ 573, ವಾಣಿಜ್ಯ ವಿಭಾಗದ ಸೌಮ್ಯ ಸೊನ್ನದ 573 ಅಂಕ, ವಿಜ್ಞಾನ ವಿಭಾಗದ ಸಂಜಯ ಓಘಿ 568 ಅಂಕ ಪಡೆದು ಮಹಾವಿದ್ಯಾಲಯಕ್ಕೆ ಕೀರ್ತಿ ತಂದಿದ್ದಾರೆ. ಸಾಧನೆಗೈದ ವಿದ್ಯಾರ್ಥಿಗಳನ್ನು ಸಂಘದ ಕಾರ್ಯಾಧ್ಯಕ್ಷರಾದ ಡಾ. ವೀರಣ್ಣ ಸಿ ಚರಂತಿಮಠ, ಕಾಲೇಜುಗಳ ಆಡಳಿತ ಮಂಡಳಿ ಕಾರ್ಯಾಧ್ಯಕ್ಷರಾದ ಗುರುಬಸವ ಎಸ್. ಸೂಳಿಭಾವಿ, ಸಂಘದ …

Read More »

ಪಿಯುಸಿ ಫಲಿತಾಂಶ: ರಾಜ್ಯ ಮಟ್ಟದಲ್ಲಿ ಬಿವಿವಿ ಸಂಘಕ್ಕೆ ಮೂರು ರ್ಯಾಂಕ್

ಬಾಗಲಕೋಟೆ: ಪಿಯುಸಿ ಫಲಿತಾಂಶದಲ್ಲಿ ರಾಜ್ಯ ಮಟ್ಟದಲ್ಲಿ ಮೂರು ರ್ಯಾಂಕ್ ಪಡೆಯುವುದರ ಮೂಲಕ ಬಿವಿವಿ ಸಂಘದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಕಲಾ ವಿಜ್ಞಾನ ಮತ್ತು ವಾಣಿಜ್ಯ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ಸಾಕ್ಷಿ ಮಠಪತಿ 600 ಅಂಕಕ್ಕೆ 593 ಅಂಕಗಳನ್ನು ಪಡೆದು ರಾಜ್ಯಕ್ಕೆ ಏಳನೇ ಸ್ಥಾನ, ವೀಣಾ ಹಿರೇಮಠ 589 ಅಂಕಗಳಿಂದ ರಾಜ್ಯಕ್ಕೆ 11ನೇ ಸ್ಥಾನ ಮತ್ತು ಬಸವೇಶ್ವರ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದ ಅನುಷಾ ಅಕ್ಕೇರಿ 589 …

Read More »

1 ಲಕ್ಷ ಲಂಚ ಪಡೆದು ಪರಾರಿಗೆ ಯತ್ನ – ಅಧಿಕಾರಿಯನ್ನು ಚೇಸ್ ಮಾಡಿ ಹಿಡಿದ ʻಲೋಕಾʼ ಪೊಲೀಸರು

ರಾಯಚೂರು: ಜಿಲ್ಲೆಯ ಸಿರವಾರ ಪಟ್ಟಣ ಪಂಚಾಯತಿ  ಮುಖ್ಯಾಧಿಕಾರಿ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ  ಅಧಿಕಾರಿಗಳಿಗೆ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾನೆ. ಈ-ಖಾತೆ ಮಾಡಲು ಅಧಿಕಾರಿ ಸುರೇಶ್ ಶೆಟ್ಟಿ 2 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಅದರಂತೆ 1 ಲಕ್ಷ ರೂ. ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ. ರಾಘವೇಂದ್ರ ರೆಡ್ಡಿ ಎಂಬವರಿಗೆ 2 ಲಕ್ಷ ರೂ. ಬೇಡಿಕೆ ಇಟ್ಟಿದ್ದ ಮುಖ್ಯಾಧಿಕಾರಿ ಅಡ್ವಾನ್ಸ್ ಆಗಿ ಒಂದು ಲಕ್ಷ‌ ರೂ. ತೆಗೆದುಕೊಳ್ಳುವಾಗ …

Read More »

ಕಲಾ ವಿಭಾಗದಲ್ಲಿ 600ಕ್ಕೆ 594

ಬೆಳಗಾವಿ: ಇಲ್ಲಿನ ಕೆಎಲ್ಇ ಸಂಸ್ಥೆಯ ಲಿಂಗರಾಜ ಪದವಿ ಪೂರ್ವ ಕಾಲೇಜಿನ‌ ವಿದ್ಯಾರ್ಥಿನಿ ಸೃಷ್ಠಿ ಚಿದಾನಂದ ಸೊಲೋನಿ ಕಲಾ ವಿಭಾಗದಲ್ಲಿ 600ಕ್ಕೆ 594 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ 3ನೇ ರ್ಯಾಂಕ್ ಬಂದಿದ್ದಾರೆ. ಸೃಷ್ಠಿ ಮೂಲತಃ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲ್ಲೂಕಿನ ಸೈದಾಪುರ ಗ್ರಾಮದವರು. ತಂದೆ ಚಿದಾನಂದ ಸೊಲೋನಿ ರೈತರಾಗಿದ್ದು, ತಾಯಿ ಹೇಮಲತಾ ಗೃಹಿಣಿ ಆಗಿದ್ದಾರೆ. ಬಡ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿರುವ ಸೃಷ್ಠಿ ಇಂದು ಇಡೀ ರಾಜ್ಯವೇ ಹೆಮ್ಮೆ …

Read More »

2nd PUC Result 2026 – 100ಕ್ಕೆ 111 ಅಂಕ ನೀಡಿದ ಪಿಯು ಬೋರ್ಡ್‌!

ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಎಡವಟ್ಟಾಗಿದ್ದು ವಿದ್ಯಾರ್ಥಿಯೊಬ್ಬನಿಗೆ 100ಕ್ಕೆ 111 ಅಂಕವನ್ನು ನೀಡಿ ಪಾಸ್‌ ಮಾಡಲಾಗಿದೆ. ಹಿಂದಿ  ವಿಷಯದಲ್ಲಿ ವಿದ್ಯಾರ್ಥಿಗೆ 100 ಅಂಕಗಳಿಗೆ 111 ಅಂಕ ನೀಡಲಾಗಿದೆ. ಅಂಕಪಟ್ಟಿಯಲ್ಲಿರುವ ನೋಂದಣಿ ಸಂಖ್ಯೆಯನ್ನು ಹಾಕಿ ಫಲಿತಾಂಶವನ್ನು ಪಬ್ಲಿಕ್‌ ಟಿವಿ ಪರಿಶೀಲಿಸಿದ್ದು ಈಗಲೂ ವೆಬ್‌ಸೈಟ್‌ನಲ್ಲಿ 111 ಅಂಕವನ್ನೇ ತೋರಿಸುತ್ತಿದೆ. ಹಿಂದಿ ವಿಷಯದಲ್ಲಿ ಥಿಯರಿಯಲ್ಲಿ ವಿದ್ಯಾರ್ಥಿಗೆ 94 ಅಂಕ ಬಂದಿದ್ದರೆ ಕಾಲೇಜು 17 ಆಂತರಿಕ ಅಂಕಗಳನ್ನು ನೀಡಿದೆ. ಇಲ್ಲಿ 80 ಅಂಕಗಳಿಗೆ 94 ಅಂಕ …

Read More »