Breaking News

ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಮಾನಸಿಕ ಒತ್ತಡ ಕಡಿಮೆ ಮಾಡಲು ಆಗ್ರಹಿಸಿ ತಾಪಂ ಇಒಗೆ ಮನವಿ

Spread the love

ರಾಮದುರ್ಗ: ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವ ಹಿಸುತ್ತಿರುವ ಅಭಿವೃದ್ಧಿ ಅಧಿಕಾರಿಗಳ ಮಾನಸಿಕ ಒತ್ತಡ, ಹಲ್ಲೆ ಪ್ರಕರಣಗಳಿಂದ  ನಡೆಯುತ್ತಿರುವ ಸರಣಿ ಅಸಹಜ ಸಾವುಗಳ ತಡೆಗೆ ವಿಶೇಷ ಕಾನೂನು ರೂಪಿಸಬೇಕು ಎಂದು ರಾಮದುರ್ಗ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ತಾಪಂ ಇಒ ಮಾಲತೇಶ ದಾಸಪ್ಪನವರಗೆ ಮನವಿ ಸಲ್ಲಿಸಿದರು.
ಇತ್ತಿಚೆಗೆ ಗದಗ ಜಿಲ್ಲೆ ರೋಣ ತಾಲೂಕಿನ ಅಸೂಟಿ ಹಾಗೂ ಕೊತಬಾಳ ಗ್ರಾಪಂ ಅಭಿವೃದ್ಧಿ ಅಧಿಕಾರಿ ಮಕ್ತುಂಹುಸೇನ್ ಕರಡಿಗುಡ್ಡ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಲ್ಲಿಯವರೆಗೆ ಸುಮಾರು 180 ಪಿಡಿಒಗಳ ಅಸಹಜ ಸಾವಿನ ಪ್ರಕರಣ ನಡೆದರೂ, ಸರ್ಕಾರ ಅಭಿವೃದ್ಧಿ ಅಧಿಕಾರಿಗಳ ಮೇಲಿನ ಒತ್ತಡ ಕಡಿಮೆ ಮಾಡಿ ಸೇವೆಗೆ ರಕ್ಷಣೆ ಒದಗಿಸುತ್ತಿಲ್ಲ. ಗ್ರಾಪಂನಲ್ಲಿ ಕಾರ್ಯನಿರ್ವಹಿಸಲು ಸಿಬ್ಬಂದಿ ನೇಮಕಕ್ಕೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ಅಸಹಜ ಸಾವು ಪ್ರಕರಣಗಳ ವಿಶೇಷ ತನಿಖೆ, ರಕ್ಷಣಾ ಕಾನೂನು  ಜಾರಿ ಮಾಡುವ ಜತೆಗೆ  ಸಹಾಯ ನಿಧಿ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು. 14 ವರ್ಷಗಳಿಂದ ಬಾಕಿ ಉಳಿದಿರುವ ಬಡ್ತಿ ಪ್ರಕರಣ ಪರಿಗಣಿಸಿ, ಅವುಗಳ ತ್ವರಿತ ಇತ್ಯರ್ಥಕ್ಕೆ ಕ್ರಮ ವಹಿಸಬೇಕು ಹಾಗೂ ಪಿಡಿಒಗಳು ಎದುರಿಸುತ್ತಿರುವ ಸವಾಲುಗಳಿಗೆ ಪರಿಹಾರ ಒದಗಿಸಬೇಕೆಂದು
ಮನವಿ ಮೂಲಕ ಪಿಡಿಒಗಳು ಒತ್ತಾಯಿಸಿ ದ್ದಾರೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಬಿ. ಗ್ರೂಪ್ ಹುದ್ದೆ ಉನ್ನತೀಕರಣ ಸಂಘದ ತಾಲೂಕಾಧ್ಯಕ್ಷ ಬಲರಾಮ ಲಮಾಣಿ, ಜಗದೀಶ ದೇಸಾಯಿ, ಈರನಗೌಡ ಪಾಟೀಲ, ಕೃಷ್ಣಾ ಹುದ್ದಾರ, ಖ್ವಾಜಾಹುಸೇನ್ ಶಡ್ಲಗೇರಿ, ಮಂಜುನಾಥ ರಾಠೋಡ, ಸಿದ್ದಪ್ಪ ಮಾಯನ್ನವರ ಇತರರಿದ್ದರು.

Spread the love

About Laxminews 24x7

Check Also

ವಿದ್ಯುತ್ ತಂತಿ ಸ್ಪರ್ಶಿಸಿ ಇಂಗಳಿ ಗ್ರಾಮದ ಬಾಲಕಿ ಸಾವು

Spread the loveಚಿಕ್ಕೋಡಿ : ವಿದ್ಯುತ್ ತಂತಿ ಸ್ಪರ್ಶಿಸಿ ತಾಲೂಕಿನ ಇಂಗಳಿ ಗ್ರಾಮದ ಸಾನ್ವಿ ಕಾಂಬಳೆ(೯) ಬಾಲಕಿ ಮೃತಪಟ್ಟಿರುವ ಘಟನೆ ಮಂಗಳವಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ