ನವದೆಹಲಿ: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ಮತ್ತು ದೇಶಿಯ ವಿಮಾನಗಳ ಹಾರಾಟವನ್ನು ನಿಷೇಧ ಮಾಡಲಾಗಿತ್ತು. ಇದೀಗ ಏರ್‌ಇಂಡಿಯಾ ತನ್ನ ದೇಶಿಯ ಮತ್ತು ಅಂತರಾಷ್ಟ್ರೀಯ ವಿಮಾನಯಾದ ಟಿಕೆಟ್ ಬುಕ್ಕಿಂಗ್ ನಿಷೇಧವನ್ನು ವಿಸ್ತರಿಸಿದೆ.
ಏಪ್ರಿಲ್ 14ರವರೆಗೂ ಲಾಕ್‍ಡೌನ್ ಇರುವುದರಿಂದ ಏಪ್ರಿಲ್ 30ರವರೆಗೂ ದೇಶಿಯ ಮತ್ತು ಅಂತರಾಷ್ಟ್ರೀಯ ವಿಮಾನಗಳ ಟಿಕೆಟ್ ಬುಕ್ಕಿಂಗ್ ಅನ್ನು ನಿಲ್ಲಿಸಲು ಏರ್ ಇಂಡಿಯಾ ತೀರ್ಮಾನಿಸಿದೆ.
ಏಪ್ರಿಲ್ 14ರ ನಂತರ ದೇಶಿಯ ಮತ್ತು ಅಂತರಾಷ್ಟ್ರೀಯ ವಿಮಾನಗಳ ಟಿಕೆಟ್ ಬುಕ್ಕಿಂಗ್ ಆರಂಭಿಸಲಾಗುವುದು ಎಂದು ಇಂಡಿಗೋ, ಸ್ಪೈಸ್ ಜೆಟ್ ಮತ್ತು ಗೋಏರ್ ಹೇಳಿದೆ. ಮೇ 1ರಿಂದ ಸ್ಪೈಸ್ ಜೆಟ್ ಮತ್ತು ಗೋಏರ್, ಅಂತರಾಷ್ಟ್ರೀಯ ವಿಮಾನಗಳ ಟಿಕೆಟ್‍ಗಳನ್ನು ಮಾರಾಟ ಮಾಡಲಿವೆ.
ಅಂತರಾಷ್ಟ್ರೀಯ ವಿಮಾನಗಳ ಬುಕ್ಕಿಂಗ್ ಗಳನ್ನು ನಿಷೇಧಿಸಲಾಗಿದೆ. ಕೊರೊನಾ ವೈರಸ್ ತಡೆಗಟ್ಟಲು ಮಾಡಲಾಗಿರುವ ಲಾಕ್‍ಡೌನ್ ಮಧ್ಯೆ ದೇಶಿಯ ಮತ್ತು ಅಂತರಾಷ್ಟ್ರೀಯ ಮಾರ್ಗಗಳಲ್ಲಿನ ವಾಣಿಜ್ಯ ವಿಮಾನಗಳ ಹಾರಾಟವನ್ನು ಏಪ್ರಿಲ್ 14ರವರೆಗೆ ಸ್ಥಗಿತಗೊಳಿಸಲಾಗಿದೆ. ಆದರೆ ಇದೀಗ ಏಪ್ರಿಲ್ 30ರವರೆಗೆ ಟಿಕೆಟ್ ಬುಕ್ಕಿಂಗ್ ಅನ್ನು ನಿಷೇಧಿಸಲಾಗಿದೆ ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ.