Breaking News

ಗ್ಯಾನೇಂದ್ರ ಬೆನ್ನಲ್ಲೇ ಸಿಐಡಿ ಮತ್ತೊಂದು ಬೇಟೆ – ಸಹಾಯ ಮಾಡಿದ್ದ ಮಧ್ಯವರ್ತಿ ವಶಕ್ಕೆ

Spread the love

ಬೆಂಗಳೂರು: ಕೆಪಿಎಸ್‌ಸಿ ಹಗರಣದಲ್ಲಿ ಐಎಎಸ್‌ ಅಧಿಕಾರಿ ಗ್ಯಾನೇಂದ್ರ ಕುಮಾರ್ ಬಂಧನದ ಬೆನ್ನಲ್ಲೇ ಇದೀಗ ಸಿಐಡಿ ತಂಡ ಮತ್ತೊಂದು ಬೇಟೆಯಾಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯವರ್ತಿಯೊಬ್ಬನನ್ನ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದೆ. ಪ್ರಕರಣದಲ್ಲಿ ಗ್ಯಾನೇಂದ್ರ ಕುಮಾರ್‌ ಅವರಿಗೆ ಸಹಾಯ ಮಾಡಿದ್ದ ಹಿನ್ನೆಲೆ ಮಧ್ಯವರ್ತಿಯನ್ನ ವಶಕ್ಕೆ ಪಡೆಯಲಾಗಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.

ಇನ್ನೂ ಕಳೆದ ರಾತ್ರಿಯಷ್ಟೇ ಕೆಪಿಎಸ್‌ಸಿ ನೇಮಕಾತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಎಸ್‌ ಅಧಿಕಾರಿ ಗ್ಯಾನೇಂದ್ರ ಕುಮಾರ್‌ ಅವರನ್ನು ಬಂಧಿಸಲಾಗಿತ್ತು. ವಿಚಾರಣೆಗೆ ಅಸಹಕಾರ ತೋರಿದ ಹಿನ್ನೆಲೆ ಗ್ಯಾನೇಂದ್ರ ಅವರನ್ನ ಸಿಐಡಿ ಅರೆಸ್ಟ್‌ ಮಾಡಿತ್ತು. ಈ ಬೆನ್ನಲ್ಲೇ ಕಾರ್ಯಾಚರಣೆ ತೀವ್ರಗೊಳಿಸಿದ ಸಿಐಡಿ ತಂಡ ಮಧ್ಯವರ್ತಿಯೊಬ್ಬನನ್ನ ಬಂಧಿಸಿದೆ.

ಇದಕ್ಕೂ ಮುನ್ನ ನಿನ್ನೆ 11 ಗಂಟೆಗಳ ಕಾಲ ಸಿಐಡಿ ಅಧಿಕಾರಿಗಳು ಗ್ಯಾನೇಂದ್ರ ಅವರ ವಿಚಾರಣೆ ನಡೆಸಿದ್ದರು. ಇಂದು ಮಧ್ಯಾಹ್ನ 12 ಗಂಟೆಯಿಂದ ಮತ್ತೆ ವಿಚಾರಣೆ ನಡೆಸಿದ್ದರು.


Spread the love

About Laxminews 24x7

Check Also

ಚಿಕ್ಕಮಗಳೂರಲ್ಲಿ ಆಹಾರ ಇಲಾಖೆ ಅಧಿಕಾರಿಗಳ ದಾಳಿ – 30 ಕೆಜಿ ನಕಲಿ ನಾಟಿ ತುಪ್ಪ ಪತ್ತೆ

Spread the loveಚಿಕ್ಕಮಗಳೂರು: ನಗರದ ಮಾರ್ಕೆಟ್ ರಸ್ತೆಯಲ್ಲಿನ ಮನೆಯೊಂದರ ಮೇಲೆ ಆಹಾರ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿ 30 ಕೆ.ಜಿ.ಗೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ