Breaking News
Home / ಜಿಲ್ಲೆ / ಶವ ಸಂಸ್ಕಾರಕ್ಕೆ ಹೊದವರೂ ಮಣ್ಣಾದರು – ” ಹಸುಗೂಸಿಗೆ ಮಾತೃತ್ವ ” ಮೆರದ ಶಿಕ್ಷಕಿ ವಸಂತಮ್ಮಳಿಗೆ ಪ್ರಶಂಸೆಯ ಸುರಿಮಳೆ

ಶವ ಸಂಸ್ಕಾರಕ್ಕೆ ಹೊದವರೂ ಮಣ್ಣಾದರು – ” ಹಸುಗೂಸಿಗೆ ಮಾತೃತ್ವ ” ಮೆರದ ಶಿಕ್ಷಕಿ ವಸಂತಮ್ಮಳಿಗೆ ಪ್ರಶಂಸೆಯ ಸುರಿಮಳೆ

Spread the love

ಶವ ಸಂಸ್ಕಾರಕ್ಕೆ ಹೊದವರೂ ಮಣ್ಣಾದರು

ಹಸುಗೂಸಿಗೆ ಮಾತೃತ್ವ ” ಮೆರದ ಶಿಕ್ಷಕಿ ವಸಂತಮ್ಮ

ತಂದೆಯ ಅಂತ್ಯ ಸಂಸ್ಕಾರಕ್ಕೆ ಹೊರಟವರು ಮಾರ್ಗಮಧ್ಯದಲ್ಲಿ ಸಂಭವಿಸಿದ ಅಪಘಾತದಲ್ಲಿ ದುರಂತ ಸಾವಿಗೀಡಾಗಿರುವ ಹೃದಯವಿದ್ರಾವಕ ಘಟನೆ

 

ಶವ ಸಂಸ್ಕಾರಕ್ಕೆ ಹೊದವರೂ ಮಣ್ಣಾದರು – ” ಹಸುಗೂಸಿಗೆ ಮಾತೃತ್ವ ” ಮೆರದ ಶಿಕ್ಷಕಿ ವಸಂತಮ್ಮಳಿಗೆ ಪ್ರಶಂಸೆಯ ಸುರಿಮಳೆ
ತಂದೆಯ ಅಂತ್ಯ ಸಂಸ್ಕಾರಕ್ಕೆ ಹೊರಟವರು ಮಾರ್ಗಮಧ್ಯದಲ್ಲಿ ಸಂಭವಿಸಿದ ಅಪಘಾತದಲ್ಲಿ ದುರಂತ ಸಾವಿಗೀಡಾಗಿರುವ ಹೃದಯವಿದ್ರಾವಕ ಘಟನೆ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ ಸೋಮವಾರ ಜರುಗಿದೆ

.ತಾಲೂಕಿನ ವಿರುಪಾಪುರ ಗ್ರಾಮದ ಬಳಿ ರಾಷ್ಟ್ರೀಯ ಹೆದ್ಧಾರಿ50ರಲ್ಲಿ ಚಲಿಸುತ್ತಿದ್ದ ಕಾರಿಗೆ ಅತೀವೇಗವಾಗಿ ಎದುರಿಗೆ ಬಂದ ಟಿಪ್ಪರ್ ಲಾರಿಯೊಂದು ಮುಖಾ ಮುಖಿ ಡಿಕ್ಕಿ  ಪರಿಣಾಮ ಕಾರು ಸಂಪೂಣ೯ ಜಖಮ್ ಗೊಂಡಿದ್ದು.ಪರಿಣಾಮ ಕಾರಲ್ಲಿದ್ದ ದಂಪತಿ ಗಳೊಂದಿಗೆ ಚಾಲಕನು ಸೇರಿ ಮೂವರು ಸ್ಥಳದಲ್ಲೇ ಮೃತ ಪಟ್ಟಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಇಳಕಲ್ ಮೂಲದವರಾದ ವಸಂತಕುಮಾರ್ ರವರು ಕೊಡಗು ಜಿಲ್ಲೆಯ ಕೊಂಡಂಗೇರಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು,ಇಳಕಲ್ ನಲ್ಲಿ ತನ್ನ ತಂದೆಯ ಶವಸಂಸ್ಕಾರಕ್ಕೆ ತೆರಳುವಾಗ ಮಾರ್ಗಮಧ್ಯದಲ್ಲಿ ಈ ದುರ್ಘಟನೆ ನಡೆದಿದೆ. ವಸಂತ ಕುಮಾರ (37) ಮತ್ತು ಅವರ ಪತ್ನಿ ವಿನುತ (30) ಹಾಗೂ ಕಾರು ಚಾಲಕ ಮೃತಪಟ್ಟಿದ್ದಾರೆ. ಅದೃಷ್ಟವಶಾತ್ ಅಪಘಾತದಲ್ಲಿ ಬದುಕುಳಿದಿರುವ ಅವರ ಮಗಳು ರುತ್ವಿಕಾ (2) ಈಗ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.


ಮಾತೃತ್ವ ಮೆರೆದ ಶಿಕ್ಷಕಿ ಮೋಕ್ಷಾವತಿ- ಈ ಸಮಯದಲ್ಲಿಯೇ ಕೂಡ್ಲಿಗಿ ಪಟ್ಟಣದ ಅಂಬೇಡ್ಕರ್ ಸರ್ಕಾರಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಲು ಕ್ಯಾಸನಕೆರೆ ಗ್ರಾಮ ದಿಂದ ಹೊರಟಿದ್ದ ಶಿಕ್ಷಕಿಯರಾದ ವಸಂತಮ್ಮ ಮತ್ತು ಮೋಕ್ಷಾವತಿ ಇವರಿಬ್ಬರೂ ಘಟನಾ ಸ್ಥಳದಲ್ಲಿ ಒಂದು ಕ್ಷಣ ಪರಿಸ್ಥಿತಿ ಅವಲೋಕಿಸುವಾಗ್ಗೆ. ಅಪಘಾತಕ್ಕೀಡಾಗಿದ್ದ ಕಾರಿನಿಂದ ಮಗು ಅಳಿವಿನ ಧ್ವನಿ ಕೇಳಿಸಿದ್ದು.ಪರಿಶೀಲಿಸಲಾಗಿ ಅಪಘಾತದಲ್ಲಿ ಹೆತ್ತ ತಂದೆ,ತಾಯಿಯನ್ನು ಕಳೆದುಕೊಂಡು ರೋಧಿಸುತ್ತಿದ್ದ ರುತ್ವಿಕಾ ಹೆಸರಿನ ಮಗುವನ್ನು ವಸಂತಮ್ಮ ತಮ್ಮ ಸಹಪಾಟಿ ಮೋಕ್ಷಾವತಿಯ ಜೊತೆಗೂಡಿ ಆಸ್ಪತ್ರಗೆ ಕರೆತಂದು. ಶೂಶೃಷೆ ಕೊಡಿಸಿದ್ದಾರೆ.ಮಗು ಅಳುವನ್ನು ನಿಲ್ಲಿಸದೇ ಇದ್ದಾಗ ವಸಂತಮ್ಮ ಮಗುವಿಗೆ ತಮ್ಮೆದೆಯಹಾಲುಣಿಸೋ ಮೂಲಕ ಅವರು ಮಾತೃತ್ವದ ಜೊತೆಗೆ ಮಾನವೀಯತೆ.ಭ್ರಾತೃತ್ವ ಮೆರೆದಿದ್ದಾರೆ.

ಮೊಬೈಲ್ ಬಿಡಿ ನೆರವು ನೀಡಿ- ಯಾವುದೇ ಅಪಘಾತವಾದ ಸಂದಭ೯ಗಳಲ್ಲಿ ನೆರದವರು ತಮ್ಮ ಮೊಬೈಲ್ ಗಳಲ್ಲಿ ವೀಡಿಯೋ ಮಾಡೋದರಲ್ಲಿ ತಲ್ಲೀನರಾಗಿರುತ್ತಾರೆ. ಈಮೂಲಕ ಮಾನವೀಯ ಮೌಲ್ಯಗಳನ್ನು ಮರೆತು ಅಮಾನವೀಯರೀತಿಯಲ್ಲಿ ಅಸಹ್ಯವಾಗಿ ವತಿ೯ಸುವುದು ಸಾಮನ್ಯವಾಗಿದೆ.ಆದರೆ ಶಿಕ್ಷಕಿ ವಸಂತಮ್ಮ ಮಾತ್ರ ಸಮಯಪ್ರಜ್ಞೆಯನ್ನು ಮೆರಯೋ ಮೂಲಕ ಮಗುವಿಗೆ ತನ್ನ ಎದೆಯಾಲನ್ನು ಉಣಿಸುವ ಮೂಲಕ ಸಂತೈಸಿದ್ದಾರೆ.

ಈ ಮೂಲಕ ಇಡೀ ನಾಗರೀಕ ಸಮಾಜಕ್ಕೆ ಮಾದರಿ ಶಿಕ್ಷಕಿ ಮಾತ್ರವಲ್ಲ ಮಾದರಿಮಾತೆಯಾಗಿದ್ದಾರೆ. ಯಾರೇ ಆಗಿರಲಿ ಅಪಘಾತವಾದಗ ಅಥವಾ ಅವಘಡಗಳು ಯಾವುದೇ ತುತು೯ಸ್ಥಿತಿ ಸಂಭವಿಸಿದಾಗ ಮೊದಲಿಗೆ ನೆರವಿಗೆ ಮುಂದಾಗಬೇಕಿದೆ. ಮೊಬೈಲ್ ಗಳಲ್ಲಿ ವೀಡಿಯೋ ಅಥವಾ ಫೋಟೋ ತೆಗೆಯುವ ಗೀಳು ಬಿಡಬೇಕು.ಕೂಡಲೇ ನೊಂದವರಿಗೆ ಅಗತ್ಯ ನೆರವು ನೀಡಬೇಕು.ಅದು ಪ್ರತಿಯೊಬ್ಬರ ಆಧ್ಯಕಥ೯ವ್ಯವಾಗಿದೆ ಎಂದು ಶಿಕ್ಷಕಿ ವಸಂತಮ್ಮ ಸಾವ೯ಜನಿಕರಲ್ಲಿ ಕರೆನೀಡಿದ್ದಾರೆ.

ಈ ಸಂದಭ೯ದಲ್ಲಿ ತಾವೂ ಕೂಡ ಅದರಂತೆ ನಡೆದುಕೊಂಡಿರುವುದಾಗಿ ತಿಳಿಸಿದ್ದಾರೆ.ವಸಂತಮ್ಮಳ ಮಾನವೀಯ ಸ್ಪಂಧನೆಯ ನಡೆಗೆ ಸಾವ೯ಜನಿಕವಲದಿಂದ ಭಾರೀ ಪ್ರಶಂಸೆಗಳ ಸುರಿಮಳೆಯೇ ಸುರಿದಿದೆ


Spread the love

About Laxminews 24x7

Check Also

ಎಷ್ಟು ದೊಡ್ಡ ರಾಜ್ಯ ಕಟ್ಟಿದ್ರಿ ಅನ್ನೋದು ಮುಖ್ಯ ಅಲ್ಲ, ಯಾವ ಥರ ರಾಜನಾಗಿ ಬಾಳಿದ್ರಿ ಅನ್ನೋದು ಮುಖ್ಯ: ಕಿಚ್ಚ

Spread the love ಸ್ಯಾಂಡಲ್‌ವುಡ್‌ನಲ್ಲಿ ಸದ್ಯ ಕಾಂಟ್ರವರ್ಸಿಗಳೇ ಮೇಳೈಸುತ್ತಿವೆ. ಚಂದನ್‌ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರ ವಿಚ್ಛೇದನ ಸುದ್ದಿಯಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ