Breaking News

ಶಿವಾಜಿನಗರ ನಾಲ್ವರಲ್ಲಿ ಕೊರೋನಾ ಸೋಂಕು; ಬೆಂಗಳೂರಿನ ಬಹುತೇಕ ಕಡೆ ಅಡ್ಡಾಡಿರುವ ಸೋಂಕಿತರು

Spread the love

ಬೆಂಗಳೂರು:  ಹೌಸ್​ ಕೀಪಿಂಗ್​ ಜೊತೆ ವಾಸವಿದ್ದ ಶಿವಾಜಿನಗರ ನಾಲ್ವರು ವ್ಯಾಪಾರಿಗಳಲ್ಲಿ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಕೊರೋನಾ ಸೋಂಕಿತ ಹೌಸ್​ ಕೀಪಿಂಗ್ ವ್ಯಕ್ತಿ ಜತೆ ಒಟ್ಟು  ಏಳು ಜನ ಇದ್ದರು. ಇವರಲ್ಲಿ ನಾಲ್ಕು ಜನರಲ್ಲಿ ಪಾಸಿಟಿವ್ ಕಂಡುಬಂದಿದೆ. 

13 ಜನರಲ್ಲಿ 5 ಮಂದಿಗೂ ಕೊರೋನಾ ಸೋಂಕು ತಗುಲಿದೆ. ಉಳಿದ 9 ಜನರ ಫಲಿತಾಂಶ ನಾಳೆ ಬರಲಿದೆ. ಇದೀಗ ಕೊರೋನಾ ಪಾಸಿಟಿವ್ ವರದಿ ಬಂದ ನಾಲ್ವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

19, 22, 25 ಮತ್ತು 40 ವರ್ಷದ ವ್ಯಕ್ತಿಗಳಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಇವರೆಲ್ಲಾ ಅಸ್ಸಾಂ, ಮಣಿಪುರ ಮೂಲದವರಾಗಿದ್ದಾರೆ. ಇದೀಗ ಇವರಿಂದ ಬೆಂಗಳೂರಿಗೆ ಕಂಟಕ ಎದುರಾದಂತೆ ಆಗಿದೆ. ಸೋಂಕಿತ ವ್ಯಕ್ತಿಗಳು ಬೆಂಗಳೂರಲೆಲ್ಲಾ ಅಡ್ಡಾಡಿರುವುದಾಗಿ ಆರೋಗ್ಯಾಧಿಕಾರಿಗಳು ಖಚಿತ ಪಡಿಸಿದ್ದಾರೆ. ಒಟ್ಟು 7 ಜನರು ಉಚಿತವಾಗಿ ನೀಡಲಾಗುತ್ತಿದ್ದ ಊಟಕ್ಕಾಗಿ ಶಿವಾಜಿನಗರ ಪೂರ್ತಿ ಓಡಾಡಿದ್ದಾರೆ.


Spread the love

About Laxminews 24x7

Check Also

ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಕೊರತೆ – ಕುಡಿಯುವ ನೀರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಸಿಎಂ ಸೂಚನೆ

Spread the loveಬೆಂಗಳೂರು: ರಾಜ್ಯಕ್ಕೆ ಈ ಬಾರಿ ಮುಂಗಾರು ಆತಂಕ ದೊಡ್ಡ ಮಟ್ಟದಲ್ಲಿ ತಟ್ಟಲಿದೆ. ವಾಡಿಕೆಗಿಂತ ಈ ಬಾರಿ ಮಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ