Breaking News

ರಾತ್ರಿ ಹೊತ್ತಲ್ಲಿ ಎಣ್ಣೆ ಹೊಡೆದು ಟೈಟ್ ಆಗಿ ವೈದ್ಯಾಧಿಕಾರಿಗಳಿಗೆ ಅವಾಚ್ಯ ಶಬ್ದಗಳಿಂದ ಬೈದ ಪಿ ಎಸ್ ಅಯ್ ಅಮೀನ್ ಭಾವಿ

Spread the love

ಬೆಳಗಾವಿ : ನಗರದಲ್ಲಿ ಜನರನ್ನ ರಕ್ಷಣೆ ಮಾಡಬೇಕಾದವರು ತೊಂದರೆ ಕೊಡೊ ರೀತಿ ವರ್ತನೆ ಮಾಡಿದ ಘಟನೆ ಗೋಕಾಕ ನಗರದಲ್ಲಿ ನಡೆದಿದೆ

ನಿನ್ನೆ ರಾತ್ರಿ ಗೋಕಾಕ ನಗರದ ಪೀ ಎಸ್ ಆಯ ಅಮೀನ್ ಭಾವಿ ಜನರನ್ನ ರಕ್ಷಣೆ ಮಾಡುವ ವೈದ್ಯರ ಮೇಲೆ ಅವಾಚ್ಯ ಶಬ್ದಗಳಿಂದ ಬೈದು ಆಸ್ಪತ್ರೆ ಯಲ್ಲಿ ಗಲಾಟೆ ಮಾಡಿದ್ದಾರೆ ಎಂದು ಆಸ್ಪತ್ರೆ ಸಿಬ್ಬಂದಿ ವರ್ಗ ಮನವಿ ಮಾಡಿದೆ.

 

ಹೌದು ರಾತ್ರಿ ಹೊತ್ತಲ್ಲಿ ಕರ್ತವ್ಯ ನಿರತ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿ ವರ್ಗದ ಮೇಲೆ ಇವರು ಅಸಭ್ಯ ವರ್ತನೆ ಮಾಡಿದ್ದಾರೆ ಇದರಿಂದ ಗೋಕಾಕ ನಗರದ ವೈದ್ಯಕೀಯ ಸಿಬ್ಬಂದಿ ಗಳು ರಾತ್ರಿಯ ಸಮಯದಲ್ಲಿ ಕೆಲಸ ಮಾಡಲು ಭಯ ಭೀತ ರಾಗಿ ವರ್ತಿಸು ತ್ತಿದ್ದಾರೆ.
: ಜನರನ್ನ ರಕ್ಷಣೆ ಮಾಡುವ ಇವರು ಈ ರೀತಿ ವರ್ತನೆ ಮಾಡಿದರೆ ಹೇಗೆ ಎಂದು ವೈದ್ಯ ವರ್ಗ ತುಂಬಾ ಆತಂಕಕ್ಕೆ ಒಳಗಾಗಿದ್ದಾರೆ ಇನ್ನು ಆಸ್ಪತ್ರೆ ವರ್ಗ ಅಸಭ್ಯ ವರ್ತನೆ ಮಾಡೋದು ಅಷ್ಟೇ ಅಲ್ಲದೆ ಹಲ್ಲೆ ಕೂಡ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

: ಆಸ್ಪತ್ರೆ ಯಲ್ಲಿ ಕೆಲಸ ಮಾಡೋ ಸಿಬ್ಬಂದಿ ವರ್ಗ ಜನರ ಹಿತರಕ್ಷಣೆ ಗೋಸ್ಕರ ಇರೋದು ಹಾಗೂ ಆರಕ್ಷಕರು ಕೂಡ ಜನರ ರಕ್ಷಣೆಗೆ ಇರೋದು ಇಂಥ ಕೆಲವೊಂದು ಜನರ ಬೇ ಜವಾಬ್ದಾರಿ ತನದಿಂದ ಇಡೀ ಆರಕ್ಷಕ ಇಲಾಖೆ ಗೆ ಕೆಟ್ಟು ಹೆಸರು ತರುವಂಥ ಕೆಲಸ ಮಾಡುತ್ತಾರೆ

 

ಇಂಥ ಜನರ ಮೇಲೆ ಕಠಿಣ ಕ್ರಮ ತೊಗೊಂಡ ಇಂಥವರನ್ನು ಅಮಾನತ್ತು ಗೊಳಿಸಬೇಕು ಎಂಬುದು ಆಸ್ಪತ್ರೆ ಸಿಬ್ಬಂದಿ ಗಳ ಕೋರಿಕೆ ಆಗಿದೆ
 ಇನ್ನು ಗೋಕಾಕ ತಾಲೂಕಿನ ಆಸ್ಪತ್ರೆಯ ವೈದ್ಯರ ತಂಡ ಬೆಳಗಾವಿಗೆ ಬಂದು ಬೆಳಗಾವಿಯ D.H.O. ಆದ ಮುನ್ಯಾಳ ಅವರಿಗೆ ಮನವಿ ಸಲ್ಲಿಸಿದ್ದಾರೆ ಇನ್ನು ಇಂಥವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೂಡ ಆಗ್ರಹಿಸಿದ್ದಾರೆ

: ಈ ಒಂದು ಸಂದರ್ಭದಲ್ಲಿ D H O ಮುಣ್ಯಾಳ , ಡುಮ್ಮ ಗೋಳ, ಗಡಾದ, ಕಿವಾಡ ಸಣ್ಣವರ, ಅಂಟೀ ನ, ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಎಲ್ಲರೂ ಸೇರಿ ಜಿಲ್ಲಾ ಪೋಲಿಸ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ


Spread the love

About Laxminews 24x7

Check Also

ಕುರಿ ಕಾಯುವವನ ಮಗನ ಯುಪಿಎಸ್ಸಿ ಸಾಧನೆ

Spread the loveಬೆಳಗಾವಿ: ತಂದೆ ಕುರಿ ಕಾಯುತ್ತಾರೆ. ತಾಯಿ ಹೊಲದಲ್ಲಿ ಕೆಲಸ ಮಾಡುತ್ತಾರೆ. ಮನೆಯಲ್ಲಿ ಬಡತನ. ಮಗನಿಗೆ ಮಾತ್ರ ಇಡೀ ದೇಶವೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ