Breaking News

ಸಾರ್ವಜನಿಕರು ಮದ್ಯವರ್ತಿಗಳಿಗೆ ಬಲಿಯಾಗಬೇಡಿ: ತಹಸಿಲ್ದಾರ ಮಂಜುಳಾ ನಾಯಿಕ

Spread the love

ಹುಕ್ಕೇರಿ : ಸಾರ್ವಜನಿಕರು ಮದ್ಯವರ್ತಿಗಳಿಗೆ ಬಲಿಯಾಗಬೇಡಿ – ತಹಸಿಲ್ದಾರ ಮಂಜುಳಾ ನಾಯಿಕ
ಸಾರ್ವಜನಿಕರು ಸರ್ಕಾರಿ ಕೇಲಸದಲ್ಲಿ ಮದ್ಯವರ್ತಿಗಳಿಂದ ದೂರ ಇರಬೇಕು ಎಂದು ಹುಕ್ಕೇರಿ ತಹಸಿಲ್ದಾರ
ಶ್ರೀಮತಿ ಮಂಜುಳಾ ನಾಯಿಕ ಹೇಳಿದರು.
ಅವರು ಇಂದು ಮಾದ್ಯಮಗಳೊಂದಿಗೆ ಮಾತನಾಡುತ್ತಾ ಇತ್ತೀಚಿಗೆ ಕೇಲ ಮದ್ಯವರ್ತಿಗಳು ಆಕ್ರಮ ಸಾಗುವಳಿ ಜಮಿನು ಸಕ್ರಮ ಮಾಡುವದಾಗಿ ಹಣದ ಬೇಡಿಕೆ ಹಾಗೂ ಇನ್ನಿತರ ಆಮಿಷಿ ನೀಡಿ ಜನರಿಗೆ ಮೋಸ ಮಾಡುವದು ಕಂಡು ಬಂದಿದೆ .
ಸಾರ್ವಜನಿಕರಿಂದ ಈಗಾಗಲೇ ಆಕ್ರಮ ಆಸ್ತಿಗಳ ಮಾಹಿತಿ ಪಡೆದು ಮೇಲಾಧೀಕಾರಿಗಳಿಗೆ ಕಳುಹಿಸಲಾಗಿದೆ ಅವುಗಳ ಬಗ್ಗೆ ಸರ್ಕಾರದಿಂದ ಮರು ಪರಿಶೀಲನೆಗಾಗಿ ಆದೇಶ ಬಂದರೆ ಸಾರ್ವಜನಿಕರಿಗೆ ಮತ್ತೆ ಅವಕಾಶ ಕಲ್ಪಿಸಲಾಗುವದು ಕಾರಣ ಸಾರ್ವಜನಿಕರು ಮದ್ಯವರ್ತಿಗಳ ಮೋಸಕ್ಕೆ ಬಲಿಯಾಗಬಾರದು, ತಮ್ಮ ಯಾವುದೇ ಮಾಹಿತಿಗಾಗಿ ನೇರವಾಗಿ ಕಂದಾಯ ಅಧಿಕಾರಿಗಳಿಗೆ ಸಂಪರ್ಕ ಮಾಡಬೇಕು ಎಂದು ಸಾರ್ವಜನಿಕರಿಗೆ ಮನವಿ ಮಾಡಿದರು.
ಇತ್ತಿಚಿಗೆ ಕೇಲ ಮರಿ ಪುಡಾರಿಗಳು ರೈತರಿಗೆ, ಸಾರ್ವಜನಿಕರಿಗೆ ಆಕ್ರಮ ಸಾಗುವಳಿ ಗಳ ಜಮಿನು ಸಕ್ರಮ ಮಾಡುವದಾಗಿ ನಂಬಿಸಿ ಹಣದ ಬೇಡಿಕೆ ಇಡುವದು ಹುಕ್ಕೇರಿ ತಾಲೂಕಿನಲ್ಲಿ ಕಂಡು ಬಂದ ಹಿನ್ನಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೋಳಿ ಮತ್ತು ಶಾಸಕ ನಿಖಿಲ್ ಕತ್ತಿ ತಿವ್ರವಾಗಿ ಅಸಮಾಧಾನ ಗೊಂಡ ಹಿನ್ನೆಲೆಯಲ್ಲಿ ತಾಲೂಕಾ ದಂಡಾಧೀಕಾರಿಗಳು ಸಾರ್ವಜನಿಕರಿಗೆ ಮಾಹಿತಿ ನಿಡಿದ್ದಾರೆ.

Spread the love

About Laxminews 24x7

Check Also

ಎಲ್ಲ ಧರ್ಮಕ್ಕಿಂತ ಮಾನವ ಧರ್ಮವೇ ಮೇಲು: ಸಿಎಂ

Spread the loveಮೈಸೂರು: ದಯೆಯೇ ಧರ್ಮದ ಮೂಲವಯ್ಯ, ದಯೆಯಿಲ್ಲದ ಧರ್ಮ ಯಾವುದಯ್ಯ ಎಂದು ಬಸವಣ್ಣನವರು ಧರ್ಮದ ಕುರಿತು ವ್ಯಾಖ್ಯಾನ ಮಾಡಿದ್ದಾರೆ. ಎಲ್ಲ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ