Breaking News

ಬಳ್ಳಾರಿಯಲ್ಲಿ ಮತ್ತೊಬ್ಬರಿಗೆ ಕೊರೊನಾ – ಸೋಂಕಿತರ ಸಂಖ್ಯೆ 5ಕ್ಕೆ ಏರಿಕೆ

Spread the love

ಬಳ್ಳಾರಿ: ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಇಂದು ಮತ್ತೊಬ್ಬರಿಗೆ ಕೊರೊನಾ ಸೋಂಕು ಧೃಡಪಟ್ಟಿದೆ.

ಈ ಮೊದಲು ಹೊಸಪೇಟೆ ಮೂಲದ ಒಂದೇ ಕುಟುಂಬದ ಮೂವರಲ್ಲಿ ಕೊರೊನಾ ಸೋಂಕು ಧೃಡವಾಗಿತ್ತು. ಇದೇ ಕುಟುಂಬದ ಸದಸ್ಯರಲ್ಲಿ ಒಬ್ಬರು 7 ಜನರ ಜೊತೆ ನೇರ ಸಂಪರ್ಕ ಹೊಂದಿದ್ದರು. ಹೀಗಾಗಿ ಆ ಏಳು ಜನರನ್ನು ಈಗಾಗಲೇ ಐಸೋಲೇಷನ್ ಮಾಡಲಾಗಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

ಇಂದು ಏಳು ಜನರ ರಕ್ತ ಪರೀಕ್ಷೆ ವರದಿ ಬಂದಿದ್ದು, ಏಳರಲ್ಲಿ ಒಬ್ಬರಿಗೆ ಸೋಂಕು ಧೃಡವಾಗಿದೆ. ಅಲ್ಲದೇ ಏಳು ಜನರು 21 ಜನರ ಜೊತೆಯಲ್ಲಿ ಸಂಪರ್ಕ ಹೊಂದಿದ್ದು, ಆ 21 ಜನರನ್ನು ಸಹ ಹೋಮ್ ಕೊರೈಂಟೈನ್ ಮಾಡಲಾಗಿದೆ. ಅವರ ರಕ್ತದ ಮಾದರಿಯನ್ನು ಸಹ ಜಿಲ್ಲಾಡಳಿತ ಪರೀಕ್ಷೆಗೆ ಕಳಿಸಿದ್ದು, ರಕ್ತದ ಪರೀಕ್ಷೆಯ ವರದಿ ಬರಬೇಕಿದೆ.

ಆಘಾತಕಾರಿ ಅಂಶ ಅಂದರೆ ಸೋಂಕಿತ ವ್ಯಕ್ತಿಯ ಹಿರಿಯ ಮಗ ಬಳ್ಳಾರಿಯ ಹೆಸರಾಂತ ಖಾಸಗಿ ಗಣಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಒಂದು ದಿನ ಖಾಸಗಿ ಕಂಪನಿಗೆ ಹೋಗಿ ಕೆಲಸ ಮಾಡಿದ್ದಾನೆ. ಹೀಗಾಗಿ ಖಾಸಗಿ ಕಂಪನಿಯಲ್ಲಿ ಸೊಂಕು ಹರಡಿರುವ ಅನುಮಾನ ಹೆಚ್ಚಾಗಿದೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ