Breaking News

ಟೀಸರ್ ಲೀಕ್ ಮಾಡಿದ ಪುಣ್ಯಾತ್ಮನಿಗೆ ದೇವರ ಒಳ್ಳೆಯದು ಮಾಡಲಿ- ಯಶ್ click for teaser

Spread the love

ನಿಗದಿ ಪಡಿಸಿದಂತೆ ಕೆಜಿಎಫ್ ಚಾಪ್ಟರ್ 2 ಟೀಸರ್ ಜನವರಿ 8 ರಂದು ಬೆಳಗ್ಗೆ 10.08 ನಿಮಿಷಕ್ಕೆ ಬಿಡುಗಡೆಯಾಗಬೇಕಿತ್ತು. ಆದರೆ, ಜನವರಿ 7ರ ರಾತ್ರಿ ಟೀಸರ್ ಲೀಕ್ ಆಗಿದೆ. ಯಾರೋ ಅನಾಮಿಕರು ಟೀಸರ್ ಹ್ಯಾಕ್ ಮಾಡಿದ್ದಾರೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.

ಅಧಿಕೃತವಾಗಿ ಟೀಸರ್ ರಿಲೀಸ್ ಆಗುವುದಕ್ಕೆ ಮುಂಚೆಯೇ ಲೀಕ್ ಆದ ಪರಿಣಾಮ ಚಿತ್ರತಂಡವೂ ತಡ ಮಾಡದೇ ಜನವರಿ 7 ರ ರಾತ್ರಿ 9.29 ನಿಮಿಷಕ್ಕೆ ಟೀಸರ್ ಬಿಡುಗಡೆ ಮಾಡಿದೆ.

ಕೆಜಿಎಫ್ 2 ಟೀಸರ್ ಬಿಡುಗಡೆ: ರಾಕಿ ಭಾಯ್ ಗತ್ತಿಗೆ ಯಾರಿಲ್ಲ ಸಾಟಿ

ಇದಕ್ಕೂ ಮುಂಚೆ ನಟ ಯಶ್ ಅವರು ಕೆಜಿಎಫ್ ಟೀಸರ್ ಲೀಕ್ ಮಾಡಿದವರ ಬಗ್ಗೆ ಮಾತನಾಡಿದರು. ”ಕೆಜಿಎಫ್ ಟೀಸರ್ ಜನವರಿ 8ಕ್ಕೆ ಬೆಳಗ್ಗೆ 10.08ಕ್ಕೆ ರಿಲೀಸ್ ಆಗಬೇಕಿತ್ತು. ಯಾರೂ ಪುಣ್ಯಾತ್ಮರು ಮಹಾನುಭಾವರು ಟೀಸರ್ ಲೀಕ್ ಮಾಡಿದ್ದಾರೆ. ಅವರಿಗೆ ಏನು ಸಂತೋಷ ಸಿಗುತ್ತೋ ಗೊತ್ತಿಲ್ಲ, ದೇವರು ಅವರಿಗೆ ಒಳ್ಳೆಯದು ಮಾಡಲಿ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಅಭಿಮಾನಿಗಳನ್ನು ಕುರಿತು ಮಾತನಾಡಿದ ರಾಕಿ ಭಾಯ್ ”ಬರ್ತಡೇ ದಿನ ಟೀಸರ್ ಬರುತ್ತೆ ಅಂತ ಕಾಯ್ತಿದ್ರಿ, ಆದರೆ ಒಂದು ದಿನ ಮುಂಚೆಯೇ ಬಂದಿದೆ. ನೋಡಿ, ಇದು ಬರಿ ಟೀಸರ್ ಮಾತ್ರ, ಸಿನಿಮಾ ಬಾಕಿ ಇದೆ” ಎಂದಿದ್ದಾರೆ.

ಅಂತಿಮವಾಗಿ ಕೆಜಿಎಫ್ ಚಾಪ್ಟರ್ 2 ಟೀಸರ್ ಹೊಂಬಾಳೆ ಫಿಲಂಸ್ ಯ್ಯೂಟ್ಯೂಬ್ ವಾಹಿನಿಯಲ್ಲಿ ಬಿಡುಗಡೆಯಾಗಿದೆ. ಟೀಸರ್ ನೋಡಿ ಮೆಚ್ಚಿಕೊಂಡು ಅಭಿಮಾನಿಗಳು ಬಹಳ ಥ್ರಿಲ್ ಆಗಿದ್ದಾರೆ. ಸಾಮಾನ್ಯ ಪ್ರೇಕ್ಷಕರು ಮಾತ್ರವಲ್ಲ, ಸೆಲೆಬ್ರಿಟಿಗಳ ಸಹ ಟೀಸರ್ ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


Spread the love

About Laxminews 24x7

Check Also

ಸೆಕೆಂಡ್ ವಿಷನ್ ಕರ್ನಾಟಕ 2026 /3 ದಿನಗಳ ಬೃಹತ ಸಾರ್ವಜನಿಕ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದ ಸಂಸದ ಜಗದೀಶ್ ಶೆಟ್ಟರು

Spread the love‘ಸೆಕೆಂಡ್ ಪಿವಿಷನ್ ಕರ್ನಾಟಕ 2026 ‘ಮೂರು ದಿನಗಳ ಕಾಲ ಸಾರ್ವಜನಿಕ ಜಾಗೃತಿ ಅಭಿಯಾನ ವನ್ನು ಜೂನ್ 23 …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ