Breaking News

ಆಸ್ಕರ್ ವಿಜೇತನ ಸಿನಿಮಾದಲ್ಲಿ ನಟಿಸುವುದಿಲ್ಲವೆಂದ ಆಲಿಯಾ ಭಟ್

Spread the love

ನಟಿ ಆಲಿಯಾ ಭಟ್ ಪಾತ್ರಗಳನ್ನು ಅಳೆದು ತೂಗಿ ಆರಿಸಿಕೊಳ್ಳುತ್ತಾರೆ. ಬಾಲಿವುಡ್‌ಗೆ ಕಾಲಿಟ್ಟ ಹೊಸದರಲ್ಲೇ ಕಳ್ಳನನ್ನು ಪ್ರೀತಿಸುವ ಚಂಚಲೆ ಹುಡುಗಿಯ ಭಿನ್ನ ಪಾತ್ರದಲ್ಲಿ ನಟಿಸಿದ್ದ ಆ ನಂತರವು ಹಲವು ಸವಾಲಿನ ಪಾತ್ರಗಳನ್ನು ನಿರ್ವಹಿಸಿ ಸೈ ಎನಿಸಿಕೊಂಡಿದ್ದಾರೆ.

ರಾಜಿ, ಉಡ್ತಾ ಪಂಜಾಬ್, ಅಗ್ಲಿ, ಹೈವೇ, ಡಿಯರ್ ಜಿಂದಗಿ, ಗಲ್ಲಿ ಬಾಯ್ ಈಗ ನಟಿಸುತ್ತಿರುವ ಗಂಗೂಬಾಯಿ ಕಾತಿಯಾವಾಡಿ ಇನ್ನೂ ಕೆಲವು ಸಿನಿಮಾಗಳಲ್ಲಿ ನೆನಪುಳಿಯುವ ಅಭಿನಯ ನೀಡಿದ್ದಾರೆ ಆಲಿಯಾ. ಆದರೆ ಈಗ ಏಕೋ ಒಂದು ಒಳ್ಳೆಯ ಅವಕಾಶವನ್ನು ಬೇಡವೆಂದಿದ್ದಾರಂತೆ ಈ ನಟಿ.

ಆಸ್ಕರ್ ವಿಜೇತ ತಂತ್ರಜ್ಞ ರೆಸೂಲ್ ಪೂಕಟ್ಟಿ ತಮ್ಮ ಸಿನಿಮಾ ‘ಫಿಹಾರ್ವಾ’ ದಲ್ಲಿ ನಟಿಸುವಂತೆ ಆಲಿಯಾರನ್ನು ಕೇಳಿದ್ದರು. ಆದರೆ ಅವಕಾಶ ನಿರಾಕರಿಸಿದ್ದಾರೆ ಆಲಿಯಾ ಭಟ್.

ರೆಸೂಲ್ ಪೂಕಟ್ಟಿ ಅವರೇ ಸಿನಿಮಾ ನಿರ್ದೇಶಿಸುವಂತಿದ್ದರೆ ನಟಿಸುತ್ತಿದ್ದರಂತೆ ಆಲಿಯಾ. ಅಷ್ಟೇ ಅಲ್ಲದೆ, ಆಲಿಯಾ ಗೆ ಡೇಟ್ಸ್ ಹೊಂದಾಣಿಕೆ ದೊಡ್ಡ ಸಮಸ್ಯೆಯಾಗಿ ಪರಿಗಣಿಸಿದೆಯಂತೆ. ಈಗಾಗಲೇ ಮೂರು ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ ಆಲಿಯಾ ಭಟ್. ಹಾಗಾಗಿ ‘ಪಿಹಾರ್ವಾ’ ಸಿನಿಮಾಕ್ಕೆ ಡೇಟ್ಸ್ ಹೊಂದಿಸಿಕೊಳ್ಳುವುದು ಆಲಿಯಾ ಗೆ ಕಷ್ಟವಾಗುತ್ತಿದೆಯಂತೆ.

ಈ ಬಗ್ಗೆ ರಸೂಲ್ ಪೂಕಟ್ಟಿ ಸಹ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ‘ನಾನು ಲಾಕ್‌ಡೌನ್ ನಲ್ಲಿ ಬರೆದಿದ್ದ ‘ಪಿಹಾರ್ವಾ’ ಕತೆ ಬರೆದಿದ್ದೆ ಸಿನಿಮಾದಲ್ಲಿ ನಟಿಸುವಂತೆ ಕೇಳಿದ್ದೆ. ಆದರೆ ಆಕೆ ಎರಡು ವರ್ಷ ಬ್ಯುಸಿಯಂತೆ. ನನಗೆ ಅಷ್ಟು ವರ್ಷ ಕಾಯಲು ಸಮಯವಿಲ್ಲ, ಹಾಗಾಗಿ ಬೇರೆ ನಟಿಯನ್ನು ಹುಡುಕುತ್ತಿದ್ದೇವೆ’ ಎಂದಿದ್ದಾರೆ ರಸೂಲ್ ಪೂಕಟ್ಟಿ.

ಆಲಿಯಾ ಪ್ರಸ್ತುತ ಬ್ರಹ್ಮಾಸ್ತ್ರ, ಆರ್‌ಆರ್‌ಆರ್‌, ಗಂಗೂಬಾಯಿ ಕಾಂತಿಯಾವಾಡೆ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.


Spread the love

About Laxminews 24x7

Check Also

ಹೈಕೋರ್ಟ್‌ನ ಎಸ್‌ಐಟಿ ಆದೇಶ ಪ್ರಶ್ನಿಸಿ ಸುಪ್ರೀಂನಲ್ಲಿ ಮೇಲ್ಮನವಿ ಸಲ್ಲಿಸಲು ಮುಂದಾದ ಸರ್ಕಾರ

Spread the loveಬೆಂಗಳೂರು: ಕೆಪಿಎಸ್‌ಸಿ (KPSC) ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ  ರಚಿಸಿ ಧಾರವಾಡ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ