Breaking News

ಜೈಲರ್ ಮತ್ತು ಕಾರಾಗೃಹ ವೀಕ್ಷಕರು ಹೊಡೆದಾಡಿಕೊಂಡಿರುವ ಘಟನೆ

Spread the love

ಹಾವೇರಿ : ಜೈಲರ್ ಮತ್ತು ಕಾರಾಗೃಹ ವೀಕ್ಷಕರು ಹೊಡೆದಾಡಿಕೊಂಡಿರುವ ಘಟನೆ ನಗರದ ಸಮೀಪವಿರುವ ಜಿಲ್ಲಾ ಕಾರಾಗೃಹದಲ್ಲಿ ನಡೆದಿದೆ.

ಜಿಲ್ಲಾ ಕಾರಾಗೃಹದ ಜೈಲರ್ ತಿಮ್ಮಣ್ಣ ಮತ್ತು ವೀಕ್ಷಕ ಪುಂಡಲೀಕ ಪವಾರ ನಿನ್ನೆ ಮಧ್ಯಾಹ್ನ ಬಡಿದಾಡಿಕೊಂಡಿದ್ದಾರೆ.  ಹೊಡೆದಾಟದ ವೇಳೆ ಇಬ್ಬರೂ ಗಾಯಗೊಂಡಿದ್ದು, ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ವೈಯಕ್ತಿಕ ಕಾರಣ ಮತ್ತು ಕೆಲಸದ ವಿಚಾರಕ್ಕಾಗಿ ಇಬ್ಬರ ನಡುವೆ ಜಗಳ ನಡೆದಿದೆ ಎನ್ನಲಾಗಿದೆ. ಆರೋಪ ಪ್ರತ್ಯಾರೋಪ ಮಾಡಿಕೊಂಡು ಪರಸ್ಪರ ಇಬ್ಬರು ದೂರು ದಾಖಲಿಸಿದ್ದಾರೆ.

ಘಟನೆ ಕುರಿತಂತೆ ಇಬ್ಬರನ್ನು ಕರೆಯಿಸಿ ಪೊಲೀಸರು ವಿಚಾರಣೆ ಮಾಡಿದ್ದಾರೆ ಎನ್ನಲಾಗಿದೆ. ಹಾವೇರಿ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.


Spread the love

About Laxminews 24x7

Check Also

ಶ್ರೀ ಮಹರ್ಷಿ ವಾಲ್ಮೀಕಿ ಅವರ ಪ್ರತಿಮೆಯನ್ನು ಇಂದು ಲೋಕಾರ್ಪಣೆಗೊಳಿಸಿದ: ಸತೀಶ್ ಜಾರಕಿಹೊಳಿ,

Spread the love ಹಾವೇರಿಯ ಶ್ರೀ ವಾಲ್ಮೀಕಿ ವೃತ್ತದಲ್ಲಿ ನೂತನವಾಗಿ ನಿರ್ಮಿಸಲಾದ ಶ್ರೀ ಮಹರ್ಷಿ ವಾಲ್ಮೀಕಿ ಅವರ ಪ್ರತಿಮೆಯನ್ನು ಇಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ