Breaking News

ಮಹಿಳೆಯರ ಟಿ-20 ಲೀಗ್ ಆರಂಭ

Spread the love

ಶಾರ್ಜಾ, ನ. 3- ಐಪಿಎಲ್ 13ರ ಲೀಗ್ ಹಂತದ ಪಂದ್ಯಗಳು ಇಂದು ಮುಗಿಯುತ್ತಿದ್ದು ನಾಳೆಯಿಂದ ಮಹಿಳೆಯರ ಟಿ-20 ಲೀಗ್ ಆರಂಭಗೊಳ್ಳಲಿದೆ. ನಾಳೆ ನಡೆಯಲಿರುವ ಮೊದಲ ಪಂದ್ಯದಲ್ಲಿ ಹರ್ಮಿತ್‍ಕೌರ್ ನಾಯಕತ್ವದ ಸ್ನೋವಾ ಹಾಗೂ ಮಿಥಾಲಿರಾಜ್ ಸಾರಥ್ಯದ ವೆಲಾಕೋ ತಂಡಗಳ ವಿರುದ್ಧ ಸೆಣಸಾಟ ನಡೆಯಲಿದೆ.

ನವೆಂಬರ್ 5 ರಂದು ಸ್ಮೃತಿ ಮಂದನಾ ಮುಂದಾಳತ್ವ ವಹಿಸಿರುವ ತೆಬ್‍ಜೇರ್ ಹಾಗೂ ಮಿಥಾಲಿರಾಜ್ ನಾಯಕತ್ವದ ವೆಲಾಕೋ ತಂಡಗಳ ನಡುವೆ ಕದನ ನಡೆಯಲಿದೆ. ನವೆಂಬರ್ 6 ರಂದು ಹರ್ಮಿತ್‍ಕೌರ್ ನಾಯಕತ್ವದ ಸ್ನೋವಾ ಹಾಗೂ ಮಂದನಾಳ ಮುನ್ನಡೆಸುತ್ತಿರುವ ತೆಬ್‍ಜೇರ್ ತಂಡಗಳ ನಡುವೆ ಮಾರಾಮಾರಿ ನಡೆಯಲಿದೆ.

ನವೆಂಬರ್ 9 ರಂದು ವಿಜೇತ ತಂಡಗಳ ನಡುವೆ ಪೈಪೋಟಿ ನಡೆಯಲಿದ್ದು ಮಹಿಳಾ ಟಿ-20 ಲೀಗ್‍ನ ಚಾಂಪಿಯನ್ಸ್ ಯಾರಾಗುತ್ತಾರೆ ಎಂಬ ಕುತೂಹಲಕ್ಕೆ ತೆರೆ ಬೀಳಲಿದೆ.


Spread the love

About Laxminews 24x7

Check Also

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಮೊದಲ ಬಾರಿಗೆ ಫ್ಯಾಷನ್‌ ಶೋ”

Spread the love    ಬೆಂಗಳೂರು: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸೀಸನ್ಸ್‌ ಆಫ್‌ ಸ್ಮೈಲ್‌ನ ಭಾಗವಾಗಿ ಇದೇ ಮೊದಲ ಬಾರಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ