ನವದೆಹಲಿ: ಭಾರತದಲ್ಲಿ ಕೊರೊನಾ ಪೀಡಿತರ ಸಂಖ್ಯೆ 62ಕ್ಕೆ ಏರಿಕೆಯಾಗಿದ್ದು, ದಿನದಿಂದ ದಿನಕ್ಕೆ ವೈರಸ್ ಹರಡುವ ಆತಂಕ ಹೆಚ್ಚಾಗ್ತಿದೆ. ಈ ಹಿನ್ನೆಲೆ ಭಾರತ, ಕೆಲವು ವಿದೇಶಿ ಪ್ರಜೆಗಳಿಗೆ ತಾತ್ಕಾಲಿಕವಾಗಿ ದೇಶದೊಳಗೆ ಎಂಟ್ರಿ ನಿಷೇಧಿಸಿದೆ. ಫ್ರಾನ್ಸ್, ಜರ್ಮನಿ ಹಾಗೂ ಸ್ಪೇನ್ ಪ್ರವಾಸಿಗರಿಗೆ ಈವರೆಗೆ ನೀಡಲಾಗಿರುವ ಸಾಮಾನ್ಯ ವೀಸಾ ಹಾಗೂ ಇ-ವೀಸಾವನ್ನ ತಡೆಹಿಡಿಯಲಾಗಿದೆ.ಈವರೆಗೂ ಭಾರತವನ್ನ ಪ್ರವೇಶಿಸದ ಈ ಮೂರು ದೇಶಗಳ ಪ್ರಜೆಗಳಿಗೆ ವೀಸಾವನ್ನ ಕೂಡಲೇ ಸಸ್ಪೆಂಡ್ ಮಾಡಲಾಗಿದೆ ಎಂದು ಸರ್ಕಾರ ತಿಳಿಸಿದೆ. ಇದರ ಜೊತೆಗೆ ಇನ್ನೂ ದೇಶಕ್ಕೆ ಎಂಟ್ರಿಯಾಗದ ಇಟಲಿ, ಇರಾನ್ ಪ್ರಜೆಗಳಿಗೆ 2020, ಮಾರ್ಚ್ 3 ಅಥವಾ ಅದಕ್ಕೂ ಮುನ್ನ ನೀಡಿರೋ ವೀಸಾ, ಇ-ವೀಸಾ ಹಾಗೂ ಜಪಾನ್ ಮತ್ತು ದಕ್ಷಿಣ ಕೊರಿಯಾ ಪ್ರಜೆಗಳಿಗೆ ನೀಡಿರೋ ವೀಸಾ ಆನ್ ಅರೈವಲ್ ಕೂಡ, ಸಸ್ಪೆಂಡ್ ಆಗಿರಲಿದೆ. ಹಾಗೇ ಫೆಬ್ರವರಿ 5 ಅಥವಾ ಅದಕ್ಕೂ ಮುನ್ನ ವೀಸಾ ಪಡೆದಿರೋ ಚೀನಾ ಪ್ರವಾಸಿಗರಿಗೆ ಕೂಡ ನಿರ್ಬಂಧ ಅನ್ವಯಿಸಲಿದೆ.
Check Also
ಬೆಂ.ಗ್ರಾದಲ್ಲಿ ಕಾಂಗ್ರೆಸ್ನಿಂದ ಗ್ಯಾರಂಟಿ ಕಾರ್ಡ್ ಹಂಚಿಕೆ ಆರೋಪ; BJP-JDS ಕಾರ್ಯಕರ್ತರ ಮೇಲೆ ಹಲ್ಲೆ!
Spread the love ರಾಮನಗರ: ಬೆಂಗಳೂರು ಗ್ರಾಮಾಂತರದ (Bengaluru Rural) ರಾಮನಗರದಲ್ಲಿ (Ramanagara) ಕಾಂಗ್ರೆಸ್ ಕಾರ್ಯಕರ್ತರು, ಡಿಸಿಎಂ ಡಿಕೆ ಶಿವಕುಮಾರ್ …