Breaking News

ಬೆರೂತ್ ನಲ್ಲಿ ಭಯಾನಕ ಸ್ಫೋಟ……….

Spread the love

ಬೆರೂತ್: ಲೆಬನಾನ್ ರಾಜಧಾನಿ ಬೆರೂತ್ ನಲ್ಲಿ ಭಯಾನಕ ಸ್ಫೋಟವಾಗಿದ್ದು, ಜನತೆ ಬೆಚ್ಚಿ ಬಿದ್ದಿದ್ದಾರೆ.

ಸ್ಫೋಟಕ್ಕೂ ಮೊದಲು ಶ್ವೇತ ಬಣ್ಣದ ಬಲೂನ್ ರೀತಿಯಲ್ಲಿ ದೊಡ್ಡ ಗುಳ್ಳೆ ಕಾಣಿಸಿಕೊಂಡ ಕ್ಷಣ ಗಳಿಗೆಯಲ್ಲಿ ಸ್ಫೋಟವಾಗಿದೆ. ಸ್ಫೋಟದ ಬಳಿಕ ಬೆರೂತ್ ನಲ್ಲಿ ಹೊಗೆ ಆವರಿಸಿದೆ. ಸ್ಫೋಟಗೊಂಡ ಸ್ಥಳದಲ್ಲಿನ ಬಹುತೇಕ ಮನೆಗಳು ಹಾನಿಗೊಳಗಾಗಿವೆ ಎಂದು ವರದಿಯಾಗಿದ್ದು, ಸ್ಥಳೀಯ ನಿವಾಸಿಗಳು ತಮ್ಮ ಮನೆಯ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.15 ನಿಮಿಷದೊಳಗೆ ಬಂದರು ಮತ್ತು ಬೆರೂತ್ ನಗರದೊಳಗೆ ಸ್ಫೋಟಕ ವಸ್ತು ಸ್ಫೋಟಗೊಂಡಿದೆ. ಎರಡನೇ ಸ್ಫೋಟದ ತೀವ್ರತೆಗೆ ಇಡೀ ಬೆರೂತ್ ನಗರ ಹೊಗೆಮಯವಾಗಿದ್ದು, ಹೆಚ್ಚಿನ ಮನೆಗಳು ಸ್ಫೋಟಕ್ಕೆ ತುತ್ತಾಗಿವೆ. ಎರಡನೇ ಸ್ಫೋಟ ಮಾಜಿ ಪ್ರಧಾನಿ ರಫಿಕ್ ಹರಿರಿ ನಿವಾಸದ ಬಳಿ ಸಂಭವಿಸಿದೆ. ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ


Spread the love

About Laxminews 24x7

Check Also

ಇರಾನ್‌ ಸರ್ವೋಚ್ಛ ನಾಯಕ ಖಮೇನಿ ಹತ್ಯೆ – ಟ್ರಂಪ್‌ ಘೋಷಣೆ ಬೆನ್ನಲ್ಲೇ ಖಚಿತಪಡಿಸಿದ ಇರಾನ್‌

Spread the loveವಾಷಿಂಗ್ಟನ್: ಇರಾನ್ ಸರ್ವೋಚ್ಛ ನಾಯಕ ಅಯಾತೊಲ್ಲ ಅಲಿ ಖಮೇನಿ ಅವರನ್ನ ಹತ್ಯೆ ಮಾಡಲಾಗಿದೆ ಎಂದು ಅಮೆರಿಕ ಅಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ