Home / ಜಿಲ್ಲೆ / ಬೆಂಗಳೂರು / ದೃಷ್ಟಿ ಸಮಸ್ಯೆಯುಳ್ಳ ಮೇಘನಾ, ಬಾಲನಟಿ ಕೀರ್ತನಾ ಯುಪಿಎಸ್​ಸಿ ಪರೀಕ್ಷೆ ಪಾಸ್; ಡಾ.ರಾಜ್​ಕುಮಾರ್ ಅಕಾಡೆಮಿಯಿಂದ 19 ಮಂದಿ ತೇರ್ಗಡೆ

ದೃಷ್ಟಿ ಸಮಸ್ಯೆಯುಳ್ಳ ಮೇಘನಾ, ಬಾಲನಟಿ ಕೀರ್ತನಾ ಯುಪಿಎಸ್​ಸಿ ಪರೀಕ್ಷೆ ಪಾಸ್; ಡಾ.ರಾಜ್​ಕುಮಾರ್ ಅಕಾಡೆಮಿಯಿಂದ 19 ಮಂದಿ ತೇರ್ಗಡೆ

Spread the love

ಬೆಂಗಳೂರು; ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ದೇಶದ ಅತ್ಯುನ್ನತ ನಾಗರಿಕ ಸೇವೆಗಳ ನೇಮಕಕ್ಕೆ ನಡೆಸಿದ 2019ನೇ ಸಾಲಿನ ಪರೀಕ್ಷೆಯ ಫಲಿತಾಂಶ ಮಂಗಳವಾರ ಪ್ರಕಟವಾಗಿದೆ. ಈ ಪರೀಕ್ಷೆಯಲ್ಲಿ ಕರ್ನಾಟಕದಿಂದ ಒಟ್ಟು 37 ಮಂದಿ ತೇರ್ಗಡೆಯಾಗಿದ್ದಾರೆ. ವಿಶೇಷ ಅಂದರೆ ಈ 37 ಮಂದಿಯಲ್ಲಿ 19 ಮಂದಿ ಡಾ.ರಾಜ್​ಕುಮಾರ್ ಸಿವಿಲ್ ಸರ್ವಿಸ್ ಅಕಾಡೆಮಿಯಲ್ಲಿ ತರಬೇತಿ

ಇನ್ನು ವಿಶೇಷ ಅಂದರೆ ಇದೇ ಅಕಾಡೆಮಿಯಿಂದ ತೇರ್ಗಡೆಯಾದ ಯುಪಿಎಸ್​ಸಿ ಪರೀಕ್ಷೆಯಲ್ಲಿ 465ನೇ ರ್ಯಾಂಕ್ ಪಡೆದಿರುವ ಮೇಘನಾ ಎಂಬುವವರಿಗೆ ಪೂರ್ಣಪ್ರಮಾಣದಲ್ಲಿ ಕಣ್ಣು ಕಾಣುವುದಿಲ್ಲ. ಮೂಲತಃ ಮೈಸೂರು ಜಿಲ್ಲೆಯ ಪರಿಯಾಪಟ್ಟಣದವರಾದ ಮೇಘನಾ ಅವರು ತಮ್ಮ ಅಂಗವೈಕಲ್ಯ ಸಮಸ್ಯೆಯನ್ನು ಮೆಟ್ಟಿ ನಿಂತು ಯುಪಿಎಸ್​ಸಿ ಪರೀಕ್ಷೆಯಲ್ಲಿ ಈ ಸಾಧನೆ ಮಾಡುವ ಮೂಲಕ ಎಲ್ಲರಿಗೂ ಸ್ಫೂರ್ತಿದಾಯಕವಾಗಿದ್ದಾರೆ.

ದೃಷ್ಟಿ ಸಮಸ್ಯೆಯುಳ್ಳ ಮೇಘನಾ, ಬಾಲನಟಿ ಕೀರ್ತನಾ ಯುಪಿಎಸ್​ಸಿ ಪರೀಕ್ಷೆ ಪಾಸ್; ಡಾ.ರಾಜ್​ಕುಮಾರ್ ಅಕಾಡೆಮಿಯಿಂದ 19 ಮಂದಿ ತೇರ್ಗಡೆ

ಹಾಗೆಯೇ 167ನೇ ರ್ಯಾಂಕ್ ಪಡೆದಿರುವ ಬೆಂಗಳೂರಿನ ಕೀರ್ತನಾ ಎಂಬುವವರು ಶಿವರಾಜ್​ ಕುಮಾರ್ ಹಾಗೂ ಮಾಲಾಶ್ರೀ ಅಭಿನಯದ ಗಂಗಾ ಯಮುನಾ ಸಿನಿಮಾದಲ್ಲಿ ಹಾಗೂ ದೊರೆ ಚಿತ್ರದಲ್ಲೂ ಬಾಲನಟಿಯಾಗಿ ಅಭಿನಯಿಸಿದ್ದಾರೆ. ಇದೀಗ ಇವರು ದೇಶದ ಅತ್ಯುನ್ನತ ನಾಗರಿಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು, ನಾಗರಿಕ ಸೇವೆಗೆ ಸಿದ್ದರಾಗಿದ್ದಾರೆ.

ಡಾ.ರಾಜ್​ಕುಮಾರ್ ಅಕಾಡೆಮಿಯಲ್ಲಿ ತರಬೇತಿ ಪಡೆದು ಯುಪಿಎಸ್​ಸಿ ತೇರ್ಗಡೆಯಾದವರು

  1. ಕೀರ್ತನಾ 167
  2. ಅಭಿಷೇಕ್ 278
  3. ಕೃತಿ 297
  4. ವೆಂಕಟಕೃಷ್ಣ ಎಸ್ 336
  5. ಮಿಥುನ್ ಎಚ್.ಎನ್ 359
  6. ವೆಂಕಟರಮಣ ಕೆ 363
  7. ಕೌಶಿಕ್ ಎಚ್.ಆರ್. 380
  8. ಆನಂದ ಕಲ್ಲಡಗಿ 446
  9. ಮೇಘನಾ 465
  10. ವಿವೇಕ್ ರೆಡ್ಡಿ 485
  11. ವರುಣ್ ಕೆ. ಗೌಡ 528
  12. ಪ್ರಫುಲ್ ದೇಸಾಯಿ 532
  13. ಭರತ್ ಕೆ.ಆರ್. 545
  14. ಹರ್ಶಿಲ್ ಮೀನಾ 548
  15. ಸುಹಾಸ್ ಆರ್ 583
  16. ರಾಮಚಂದ್ರ ಜೆ 605
  17. ಪ್ರಜ್ವಲ್ 636
  18. ಚಂದನ್ ಜಿ.ಎಸ್. 777
  19. ಮಂಜೇಶ್ ಕುಮಾರ್ 800

Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ