Breaking News

ಬಸವಣ್ಣನವರಿಗೆ ಹೇಳೋರು-ಕೇಳೋರು ಇಲ್ಲ ಎಂಬ ಕೆಲವರ ಅಹಂಗೆ ಪಾಠ ಕಲಿಸಬೇಕು: ಪ್ರತಾಪ್ ಸಿಂಹ

Spread the love

ಮೈಸೂರು: ರವಿ ಹಂಜ್‌  ಅವರ ವಿವಾದಿತ ʻಬಸವ ಮಂಟಪʼ  ಪುಸ್ತಕದ ಕುರಿತು ಮಾಜಿ ಸಂಸದ ಪ್ರತಾಪ್‌ ಸಿಂಹ ಮಾತನಾಡಿದ್ದು, ಬಸವಣ್ಣನವರಿಗೆ ಹೇಳೋರು-ಕೇಳೋರು ಇಲ್ಲ ಎಂಬ ಕೆಲವರ ಅಹಂಗೆ ಪಾಠ ಕಲಿಸಬೇಕು ಎಂದು ಹೇಳಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ಮಹಾತ್ಮರು ಹಾಗೂ ಧಾರ್ಮಿಕ ನಂಬಿಕೆಗಳಿಗೆ ಅವಮಾನ ಮಾಡುವವರ ವಿರುದ್ಧ ಕಠಿಣ ಕಾನೂನು ರೂಪಿಸಬೇಕು ಎಂದು ಆಗ್ರಹಿಸಿದ್ದಾರೆ.

ಲೇಖಕ ರವಿ ಹಂಜ್ ತಮ್ಮ ಕೀಳು ಪ್ರಚಾರಕ್ಕಾಗಿ ಮಹಾತ್ಮರನ್ನು ಕೆಟ್ಟದಾಗಿ ಟೀಕಿಸುವ ಕೆಲಸ ಮಾಡಿದ್ದಾರೆ. 2007ರಲ್ಲೂ ಬಸವಣ್ಣನವರ ಹುಟ್ಟಿನ ಮೂಲವನ್ನು ಪ್ರಶ್ನಿಸಿ ಅವಮಾನಿಸಲಾಗಿತ್ತು. ಬಸವಣ್ಣನವರು ಎಲ್ಲಾ ಜಾತಿಗಳಿಗೂ ಆದರ್ಶವಾಗಿದ್ದಾರೆ. ಅವರ ಕಾರಣದಿಂದಲೇ ಸಾವಿರಾರು ಮಠಗಳು ಹುಟ್ಟಿಕೊಂಡಿದ್ದು, ಈ ಮಠಗಳಿಂದ ಕಲ್ಯಾಣ ಕರ್ನಾಟಕದಲ್ಲಿ ಕನ್ನಡ ಭಾಷೆ ಉಳಿದಿದೆ. ಇಂದು ಸರ್ಕಾರಕ್ಕೂ ಸವಾಲು ಹಾಕುವ ರೀತಿಯಲ್ಲಿ ಮಠಗಳು ಸಾಮಾಜಿಕ ಸೇವೆಯಲ್ಲಿ ತೊಡಗಿವೆ ಎಂದು ಹೇಳಿದರು.

ಮಹಾತ್ಮರ ಬಗ್ಗೆ ಕೀಳಾಗಿ ಮಾತನಾಡುವ ಹಾಗೂ ಬರೆಯುವವರ ವಿರುದ್ಧ ಕಾನೂನಿನ ಕುಣಿಕೆ ಬಿಗಿಯಾಗಬೇಕು. ನಮ್ಮ ದೇವಾನುದೇವತೆಗಳನ್ನು ಅವಮಾನಿಸುವುದು ಕೆಲವರಿಗೆ ಅಭ್ಯಾಸವಾಗಿದೆ. ಮೈಸೂರಿನಲ್ಲಿ ಕೆಲವರು ರಾಕ್ಷಸನನ್ನು ದೈವ ಎಂದು ಬಿಂಬಿಸುವ ಕೆಲಸ ಮಾಡುತ್ತಿದ್ದಾರೆ. ಬೇರೆ ಧರ್ಮಗಳ ಬಗ್ಗೆ ಹೀಗೆ ಮಾತನಾಡಿದರೆ ತೀವ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತವೆ; ಆದರೆ ಹಿಂದೂ ಧರ್ಮಕ್ಕೆ ಹೇಳುವವರು, ಕೇಳುವವರು ಯಾರೂ ಇಲ್ಲ ಎನ್ನುವಂತಾಗಿದೆ. ನಮ್ಮ ಧರ್ಮದಲ್ಲಿನ ಕೆಲ ಅವಿವೇಕಿಗಳೇ ನಮ್ಮ ನಂಬಿಕೆಗಳಿಗೆ ಧಕ್ಕೆ ತರುತ್ತಿದ್ದಾರೆ ಎಂದು ಕಿಡಿಕಾರಿದರು.


Spread the love

About Laxminews 24x7

Check Also

ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ರೌಡಿಶೀಟರ್‌ಗಳಿಗೆ ಶಾಕ್‌ ಶಾಕ್‌ – 100ಕ್ಕೂ ಹೆಚ್ಚು ಮನೆಗಳ ಮೇಲೆ ಪೊಲೀಸರ ದಾಳಿ

Spread the loveಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರೌಡಿ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಪೊಲೀಸರು ಬೃಹತ್ ಕಾರ್ಯಾಚರಣೆ ನಡೆಸಿದ್ದಾರೆ. ಇಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ