ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಕಿಗೆ ಬಂದಿದೆ. ಸಾವಿಗೂ ಮುನ್ನ ಬರೆದಿಟ್ಟಿರುವ ಡೆತ್ನೋಟ್ ನಲ್ಲಿ ಮೂವರಿಗೆ ಕ್ಷಮೆ ಕೇಳಿದ್ದಾನೆ.
ಮಿಥುನ್ (21) ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿ. KSRTC ಡಿಪೋ ಮುಂಭಾಗದ ಬಾಡಿಗೆ ರೂಮ್ನಲ್ಲಿ ಈತ ವಾಸವಾಗಿದ್ದ. ಅದೇ ರೂಮ್ನಲ್ಲಿ ನೇಣಿಗೆ ಶರಣಾಗಿದ್ದಾನೆ.
ಚಿಕ್ಕಬಳ್ಳಾಪುರ ನಗರದಲ್ಲಿ ಈ ಘಟನೆ ನಡೆದಿದೆ. ಮಿಥುನ್ ಚಿಂತಾಮಣಿ ಮೂಲದ ಶ್ರೀನಿವಾಸ್ ಮತ್ತು ಕುಸುಮ ದಂಪತಿಯ ಪುತ್ರನಾಗಿದ್ದು, ಖಾಸಗಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಓದುತ್ತಿದ್ದ.
ಆತ್ಮಹತ್ಯೆಗೂ ಮುನ್ನ ಕೊಠಡಿಯಲ್ಲಿ ಡೆತ್ ನೋಟ್ ಬರೆದಿಟ್ಟಿರುವ ಮಿಥುನ್, ‘ನನ್ನ ಸಾವಿಗೆ ನಾನೇ ಕಾರಣ’ ಎಂದು ಉಲ್ಲೇಖಿಸಿದ್ದಾನೆ. ಅಲ್ಲದೇ, ‘ನಾನು ಅಂದುಕೊಂಡಿದ್ದು ಆಗಿಲ್ಲ, ಮುಂದಿನ ಜನ್ಮದಲ್ಲಿ ನಿಮ್ಮ ಮಗನಾಗಿ ಹುಟ್ಟುತ್ತೇನೆ. ಸಾರಿ ಅಪ್ಪ, ಅಮ್ಮ, ಹಾಗೂ ಲವ್ವರ್ ಹೆಸರು ಬರೆದು ಕ್ಷಮೆ ಕೇಳಿದ್ದಾನೆ.
ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಿದ್ಯಾರ್ಥಿಯ ಸಾವಿಗೆ ನಿಖರ ಕಾರಣವೇನು ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
Laxmi News 24×7