Breaking News

ಬೆಳಗಾವಿ ಉತ್ತರದಲ್ಲಿ ಅಭಿವೃದ್ಧಿ ಪರ್ವ: ₹2.55 ಕೋಟಿ ವೆಚ್ಚದ ರಸ್ತೆ, ಒಳಚರಂಡಿ ಕಾಮಗಾರಿಗೆ ಶಾಸಕ ಆಸಿಫ್ ಸೇಠ್ ಚಾಲನೆ

Spread the love

ಬೆಳಗಾವಿ ಉತ್ತರ ಕ್ಷೇತ್ರದ ವ್ಯಾಪ್ತಿಯಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಶಾಸಕ ಆಸಿಫ್ (ರಾಜು) ಸೇಠ್ ವಿಶೇಷ ಒತ್ತು ನೀಡಿದ್ದಾರೆ. ಅಸದ್ ಖಾನ್ ಸೊಸೈಟಿಯಲ್ಲಿ ಬರೋಬ್ಬರಿ ₹2.55 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅವರು ಚಾಲನೆ ನೀಡಿದರು.

ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಆಸಿಫ್ (ರಾಜು) ಸೇಠ್ ಅವರು ಯುವ ಮುಖಂಡ ಅಮಾನ್ ಸೇಠ್ ಅವರೊಂದಿಗೆ ಅಸದ್ ಖಾನ್ ಸೊಸೈಟಿಗೆ ಭೇಟಿ ನೀಡಿ, ₹2.55 ಕೋಟಿ ವೆಚ್ಚದ ರಸ್ತೆ ಹಾಗೂ ಒಳಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಅಧಿಕೃತವಾಗಿ ಚಾಲನೆ ನೀಡಿದರು. ರಸ್ತೆ ಸಂಪರ್ಕ ಸುಧಾರಣೆ ಹಾಗೂ ಒಳಚರಂಡಿ ವ್ಯವಸ್ಥೆಯನ್ನು ಬಲಪಡಿಸುವ ಮೂಲಕ ಸೊಸೈಟಿಯ ನಿವಾಸಿಗಳಿಗೆ ಉತ್ತಮ ಮೂಲಸೌಕರ್ಯ ಕಲ್ಪಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಇದೇ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳು ತಮ್ಮ ಬಡಾವಣೆಯಲ್ಲಿರುವ ವಿವಿಧ ನಾಗರಿಕ ಸಮಸ್ಯೆಗಳು ಮತ್ತು ಅಗತ್ಯ ಕಾರ್ಯಗಳ ಕುರಿತು ಶಾಸಕರ ಗಮನ ಸೆಳೆದರು. ನಾಗರಿಕರೊಂದಿಗೆ ನೇರವಾಗಿ ಸಂವಾದ ನಡೆಸಿ ಅವರ ಅಹವಾಲುಗಳನ್ನು ಆಲಿಸಿದ ಆಸಿಫ್ ಸೇಠ್, ಪ್ರದೇಶದ ಅಗತ್ಯತೆ ಮತ್ತು ಆದ್ಯತೆಗಳಿಗೆ ಅನುಗುಣವಾಗಿ ಉಳಿದ ಎಲ್ಲಾ ಅಭಿವೃದ್ಧಿ ಕಾಮಗಾರಿಗಳನ್ನು ಹಂತ ಹಂತವಾಗಿ ಕೈಗೆತ್ತಿಕೊಂಡು ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು.


Spread the love

About Laxminews 24x7

Check Also

KPSC ನೇಮಕಾತಿ ಹಗರಣ; ಶಿವಶಂಕರಪ್ಪ ಸಾಹುಕಾರ್‌, ಗೀತಾ ಜೈಲಿಗೆ

Spread the love ಬೆಂಗಳೂರು: ಕೆಪಿಎಸ್‌ಸಿ ನೇಮಕಾತಿ ಹಗರಣದಲ್ಲಿ ಪ್ರಮುಖ ಆರೋಪಿಗಳಾದ ಶಿವಶಂಕರಪ್ಪ ಸಾಹುಕಾರ್‌, ಗೀತಾ ಜೈಲುಪಾಲಾಗಿದ್ದಾರೆ. ಎಸ್‌ಐಟಿ ಅಧಿಕಾರಿಗಳಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ