ಬೆಂಗಳೂರು: ತನ್ನದೇ ಕುಟುಂಬದ ಏಳು ಜನರನ್ನು ಬರ್ಬರವಾಗಿ ಕೊಂದಿದ್ದ ಆರೋಪಿ ಇಂದುಶೇಖರ್ ನನ್ನ ಮನಸ್ಸಿಗೆ ಈಗ ನೆಮ್ಮದಿಯಾಗಿದೆ ಎನ್ನುತ್ತಿದ್ದಾನಂತೆ.
ತಪ್ಪೇ ಮಾಡದ ಏಳು ಜನರನ್ನು ಅಷ್ಟು ಕ್ರೂರವಾಗಿ ಕೊಂದರು ಸೈಕೋ ಶೇಖರ್ಗೆ ಯಾವುದೇ ಪಶ್ಚಾತ್ತಾಪ ಇಲ್ಲವಂತೆ. ಬದಲಾಗಿ ನನ್ನ ಮನಸ್ಸಿಗೆ ಈಗ ನೆಮ್ಮದಿಯಾಗಿದೆ ಎನ್ನುತ್ತಿದ್ದಾನಂತೆ.
ಮತ್ತೊಂದು ಕಡೆ ಶನಿವಾರ (ನ.14) ಏಳು ಕೊಲೆಗಳು ನಡೆದಿದ್ದ ಮನೆಯಲ್ಲಿ ಮಹಜರು ನಡೆಸಲಾಗಿದೆ. ಕ್ರೈಮ್ ಸೀನ್ಗಳನ್ನು ರೀ ಕ್ರಿಯೆಟ್ ಮಾಡಿ, ಪತ್ನಿ, ಅತ್ತೆ, ಬಾಮೈದುನ ಸೇರಿದಂತೆ ಏಳು ಮಂದಿಯ ಹತ್ಯೆ ಹೇಗೆ ನಡೆದಿದೆ ಅನ್ನೋದರ ಬಗ್ಗೆ ಆರೋಪಿಯಿಂದಲೇ ವಿವರಣೆ ಪಡೆದಿದ್ದಾರೆ. ಯಾರನ್ನೂ ಹೇಗೆ ಕೊಲೆ ಮಾಡಲಾಯಿತು ಅನ್ನೋದರ ಮಾಹಿತಿ ಕಲೆಹಾಕಲಾಯಿತು. ಇದೇ ವೇಳೆ ಕೊಲೆಯಾದ ಮನೆಯಲ್ಲಿ ರಕ್ತದ ಮಾದರಿಯನ್ನು ಪೊಲೀಸರು ಸಂಗ್ರಹಿಸಿದ್ದಾರೆ ಎನ್ನಲಾಗಿದೆ.
ಈ ಮೂಲಕ ಆ ಮನೆಯಲ್ಲಿ ಆರೋಪಿ ಹೇಳಿದ ರೀತಿಯಲ್ಲೇ ಕೊಲೆ ಮಾಡಲಾಗಿದೆಯಾ? ಅಥವಾ ಬೇರೆ ಎಲ್ಲಾದರೂ ಕೊಲೆ ಮಾಡಿ ಎಸೆಯಲಾಗಿದೆಯೇ ಅನ್ನೋದನ್ನು ಪತ್ತೆ ಹಚ್ಚಲು ಪೊಲೀಸರು ಮುಂದಾಗಿದ್ದಾರೆ. ಮೃಗೀಯ ವರ್ತನೆಯ ಆರೋಪಿಯ ಅಪರಾಧ ಸಾಬೀತುಪಡಿಸೋ ನಿಟ್ಟಿನಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.
Laxmi News 24×7