Breaking News

ಇಡೀ ಕುಟುಂಬವೇ ವೈದ್ಯರು: ಆದರೂ ಉಳಿಯಲಿಲ್ಲ ಚಿನ್ನದ ಪದಕ ವಿಜೇತೆ ಯುವ ವೈದ್ಯೆಯ ಜೀವ

Spread the love

 ಇಡೀ ಕುಟುಂಬವೇ ವೈದ್ಯಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರೂ, ಹೃದಯಾಘಾತಕ್ಕೆ ತುತ್ತಾದ ಯುವ ವೈದ್ಯೆಯ ಜೀವ ಉಳಿಸಿಕೊಳ್ಳಲು ಸಾಧ್ಯವಾಗದ ದುರಂತ ಘಟನೆ ನಡೆದಿದೆ.

ಖ್ಯಾತ ನರರೋಗ ತಜ್ಞೆ ಡಾ. ಲಾವಣ್ಯ  ಹಠಾತ್ ಹೃದಯಾಘಾತದಿಂದ ಮೃತಪಟ್ಟಿದ್ದು, ವೈದ್ಯಕೀಯ ಲೋಕದಲ್ಲಿ ತೀವ್ರ ಆಘಾತ ಮೂಡಿಸಿದೆ. ಡಾ. ಲಾವಣ್ಯ ವೈದ್ಯಕೀಯ ಶಿಕ್ಷಣದಲ್ಲಿ ಚಿನ್ನದ ಪದಕ ಪಡೆದು ಸಾಧನೆ ಮಾಡಿದ್ದ ಪ್ರತಿಭಾವಂತ ವೈದ್ಯೆ. ಆಂದ್ರಪ್ರದೇಶದ ನೆಲ್ಲೂರಿನ ಎನ್‌ಎಲ್ ಆಸ್ಪತ್ರೆಯಲ್ಲಿ ನರವಿಜ್ಞಾನಿಯಾಗಿ ಸೇವೆ ಸಲ್ಲಿಸುತ್ತಿದ್ದ ಈಕೆ ಇತರರ ಜೀವ ಉಳಿಸುವ ವೃತ್ತಿಯಲ್ಲಿದ್ದರೂ ತನ್ನದೇ ಜೀವ ಉಳಿಸಿಕೊಳ್ಳಲು ಸಾಧ್ಯವಾಗದೆ ವಿಧಿಯಾಟಕ್ಕೆ ಬಲಿಯಾಗಿದ್ದಾರೆ.

ಮೃತ ಲಾವಣ್ಯ ಪತಿ ಹಾಗೂ ತಂದೆ ಸೇರಿದಂತೆ ಕುಟುಂಬದ ಬಹುತೇಕ ಸದಸ್ಯರು ವೈದ್ಯಕೀಯ ಹಿನ್ನೆಲೆ ಹೊಂದಿದ್ದಾರೆ. ಆದರೆ, ಇಷ್ಟೊಂದು ವೈದ್ಯಕೀಯ ಅನುಭವವಿರುವ ಕುಟುಂಬದಲ್ಲಿದ್ದರೂ ಲಾವಣ್ಯ ಅವರ ಜೀವ ಉಳಿಸಲು ಸಾಧ್ಯವಾಗದಿರುವುದು ಕುಟುಂಬಸ್ಥರು ಹಾಗೂ ಆಪ್ತರಲ್ಲಿ ದುಃಖದ ಛಾಯೆ ಮೂಡಿಸಿದೆ.

ಡಾ. ಲಾವಣ್ಯ ಕಳೆದ ಕೆಲ ಸಮಯದಿಂದ ‘ಮೈಸ್ತೇನಿಯಾ ಗ್ರ್ಯಾವಿಸ್’  ಎಂಬ ನರಸ್ನಾಯುಗಳಿಗೆ ಸಂಬಂಧಿಸಿದ ಆಟೋಇಮ್ಯೂನ್ ಕಾಯಿಲೆಯಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ವಿದೇಶದಲ್ಲಿಯೂ ಚಿಕಿತ್ಸೆ ಪಡೆದು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

ದೈಹಿಕ ನೋವು ಮತ್ತು ಅನಾರೋಗ್ಯದ ನಡುವೆಯೂ ಧೈರ್ಯದಿಂದ ಹೋರಾಡಿದ್ದ ಅವರು ಇತ್ತೀಚೆಗೆ ಚೇತರಿಸಿಕೊಂಡು ಸಹಜ ಜೀವನಕ್ಕೆ ಮರಳಿದ್ದರು. ಆದರೆ, ಅನಿರೀಕ್ಷಿತವಾಗಿ ಸಂಭವಿಸಿದ ಹೃದಯಾಘಾತ ಅವರ ಬದುಕಿಗೆ ತೆರೆ ಎಳೆದಿದೆ.

ಡಾ. ಲಾವಣ್ಯ ಅವರ ನಿಧನಕ್ಕೆ ಅವರ ಶಿಕ್ಷಕರಾಗಿದ್ದ ರೋಹಿತ್ ಕಾರನಟಿ ಅವರು ಸಾಮಾಜಿಕ ಜಾಲತಾಣದಲ್ಲಿ ಭಾವುಕವಾಗಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡುವ ಮೂಲಕ ಸಮಾಜಕ್ಕೆ ಸೇವೆ ಸಲ್ಲಿಸುವ ಕನಸು ಹೊಂದಿದ್ದ ಪ್ರತಿಭಾವಂತ ವಿದ್ಯಾರ್ಥಿನಿಯನ್ನು ಕಳೆದುಕೊಂಡಿರುವುದು ಅಪಾರ ನೋವು ತಂದಿದೆ ಎಂದು ಸ್ಮರಿಸಿದ್ದಾರೆ.

ಸಾಧನೆಯ ಹಾದಿಯಲ್ಲಿ ಮುನ್ನಡೆಯುತ್ತಿದ್ದ ಯುವ ವೈದ್ಯೆಯ ಅಕಾಲಿಕ ನಿಧನಕ್ಕೆ ವೈದ್ಯಕೀಯ ವಲಯ, ಕುಟುಂಬಸ್ಥರು ಹಾಗೂ ಸ್ಥಳೀಯರು ಕಂಬನಿ ಮಿಡಿದಿದ್ದಾರೆ.


Spread the love

About Laxminews 24x7

Check Also

ಮುಂದಿನ ವರ್ಷ 3 ದಿನಗಳ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ: ಡಿಕೆಶಿ ಘೋಷಣೆ

Spread the loveಮೈಸೂರು: ಮುಂದಿನ ವರ್ಷ ಮೂರು ದಿನಗಳ ಮೂರು ದಿನಗಳ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆ ಮಾಡಲಾಗುವುದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ