Breaking News

ಹಾಸನಾಂಬ ದರ್ಶನೋತ್ಸವಕ್ಕೆ ಇಂದು ತೆರೆ – ಕೆಂಡ ಹಾಯುವಾಗ ಕೊನೆಗೆ ಜಾರಿದ ಸಂಸದ ಶ್ರೇಯಸ್ ಪಟೇಲ್

Spread the love

ಹಾಸನ: ಪ್ರಸಿದ್ಧ ಹಾಸನಾಂಬ ಜಾತ್ರಾ ಮಹೋತ್ಸವದ ಕೊನೆಯ ದಿನವಾದ ಇಂದು ದೇವಸ್ಥಾನದ ಗರ್ಭಗುಡಿ ಬಾಗಿಲು ಮುಚ್ಚುವ ಮುನ್ನ ನಡೆದ ಸಿದ್ದೇಶ್ವರಸ್ವಾಮಿ ಕೆಂಡೋತ್ಸವದಲ್ಲಿ ಹಾಸನ ಸಂಸದ ಶ್ರೇಯಸ್ ಪಟೇಲ್ ಕೆಂಡದ ಮೇಲೆ ನಡೆಯುವಾಗ ಕೊನೆಯಲ್ಲಿ ಆಯತಪ್ಪಿ ಜಾರಿದ ಘಟನೆ ನಡೆದಿದೆ.

ಅದೃಷ್ಟವಶಾತ್, ಅವರ ಗನ್‌ಮೆನ್ ರಂಜನ್ ತಕ್ಷಣವೇ ಅವರನ್ನು ಹಿಡಿದು ಎತ್ತಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ. ಇದೇ ವೇಳೆ ನೂರಾರು ಭಕ್ತರು ಕೆಂಡ ಹಾಯ್ದಿದ್ದು, ಹಾಸನ ಡಿವೈಎಸ್‌ಪಿ ಗಂಗಾಧರಪ್ಪ ಹಾಗೂ ಒಬ್ಬರು ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಕೂಡ ಕೆಂಡ ಹಾಯ್ದು ಭಕ್ತಿ ಸಮರ್ಪಿಸಿದ್ದಾರೆ.

ಕೆಂಡದೊಳಗೆ ಬಿದ್ದ ಭಕ್ತರು
ಕೆಂಡೋತ್ಸವದ ವೇಳೆ ದೇವರನ್ನ ಹೊತ್ತು ಭಕ್ತರು ಕೆಂಡ ಹಾಯುವಾಗ ಅಲ್ಲೇ ಪಕ್ಕದಲ್ಲಿ ನಿಂತಿದ್ದ ವ್ಯಕ್ತಿಯೊಬ್ಬನ ಮೊಬೈಲ್ ಕೆಂಡದೊಳಗೆ ಬಿದ್ದಿದೆ. ತಕ್ಷಣವೇ ಮತ್ತೊಬ್ಬ ಭಕ್ತ ಕೆಂಡದಿಂದ ಮೊಬೈಲ್ ತೆಗೆದುಕೊಟ್ಟಿದ್ದಾನೆ. ಇದೇ ವೇಳೆ ಕೆಂಡದ ಮೇಲಿಂದ ಓಡುವಾಗ ಒಬ್ಬ ವ್ಯಕ್ತಿ ನೇರವಾಗಿ ಕೆಂಡದೊಳಗೆ ಬಿದ್ದಿದ್ದಾನೆ, ಕೂಡಲೇ ಸ್ಥಳದಲ್ಲಿದ್ದವರು ಆತನನ್ನು ಕೆಂಡದ ಕೊಂಡದಿಂದ ಹೊರಕ್ಕೆ ಎಳೆದುಕೊಂಡಿದ್ದಾರೆ. ಮತ್ತೊಂದೆಡೆ ಕೆಂಡ ಹಾಯ್ದು ಮುಗಿಸಿದ ತಕ್ಷಣ ಮಹಿಳೆಯೊಬ್ಬರು ಕೆಂಡದ ಕೊಂಡದ ಬಳಿಯೇ ಸುಸ್ತಾಗಿ ಬಿದ್ದಿದ್ದು, ಸ್ಥಳೀಯರು ತಕ್ಷಣವೇ ಅವರನ್ನು ಮೇಲೆತ್ತಿ ಉಪಚರಿಸಿದ್ದಾರೆ.

25 ಕೋಟಿಗೂ ಅಧಿಕ ಆದಾಯ, ಹೊಸ ಇತಿಹಾಸ
ಹಾಸನಾಂಬ ದೇವಾಲಯದ ಗರ್ಭಗುಡಿ ಬಾಗಿಲು ಮುಚ್ಚಲು ಕ್ಷಣಗಣನೆ ಆರಂಭವಾಗಿದೆ. ಇಂದು ಮುಂಜಾನೆ 6 ಗಂಟೆಯವರೆಗೆ ಭಕ್ತರಿಗೆ ನಿರಂತರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನ 12 ಗಂಟೆಯ ನಂತರ ಶಾಸ್ತ್ರೋಕ್ತವಾಗಿ ಗರ್ಭಗುಡಿಯ ಬಾಗಿಲನ್ನು ಮುಚ್ಚಲಾಗುತ್ತದೆ. ಈ ಬಾರಿಯ ಹಾಸನಾಂಬ ಜಾತ್ರೆ ಹೊಸ ಇತಿಹಾಸ ಬರೆದಿದ್ದು, ಅ. 30 ರಿಂದ ನವೆಂಬರ್ 11 ರ ಬೆಳಗ್ಗಿನವರೆಗೆ ಬರೋಬ್ಬರಿ 30 ಲಕ್ಷಕ್ಕೂ ಅಧಿಕ ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ. ಅಷ್ಟೇ ಅಲ್ಲದೆ, 1000 ರೂ. ಮತ್ತು 300 ರೂ. ವಿಶೇಷ ದರ್ಶನ ಟಿಕೆಟ್ ಹಾಗೂ ಲಾಡು ಮಾರಾಟದಿಂದ ದೇವಸ್ಥಾನಕ್ಕೆ ಬರೋಬ್ಬರಿ 25 ಕೋಟಿ 36 ಲಕ್ಷ ರೂ.ಆದಾಯ ಹರಿದುಬಂದಿದೆ.


Spread the love

About Laxminews 24x7

Check Also

ಮುಂದಿನ ವರ್ಷ 3 ದಿನಗಳ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ: ಡಿಕೆಶಿ ಘೋಷಣೆ

Spread the loveಮೈಸೂರು: ಮುಂದಿನ ವರ್ಷ ಮೂರು ದಿನಗಳ ಮೂರು ದಿನಗಳ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆ ಮಾಡಲಾಗುವುದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ