Breaking News

ಹಾಸನಾಂಬೆ ದರ್ಶನಕ್ಕೆ ವಿದ್ಯುಕ್ತ ತೆರೆ – ಗರ್ಭಗುಡಿ ಬಾಗಿಲು ಬಂದ್, ಜಾತ್ರಾ ಮಹೋತ್ಸವ ಸಂಪನ್ನ

Spread the love

ಹಾಸನ: ವರ್ಷಕ್ಕೊಮ್ಮೆ ದರ್ಶನ ಕರುಣಿಸುವ ಹಾಸನಾಂಬಾ ದೇವಿಯ ಗರ್ಭಗುಡಿ ಬಾಗಿಲನ್ನು ಇಂದು (ನ.11) ಮಧ್ಯಾಹ್ನ ಶಾಸ್ತ್ರೋಕ್ತವಾಗಿ ಮುಚ್ಚಲಾಯಿತು. ಈ ಮೂಲಕ 11 ದಿನಗಳ ಹಾಸನಾಂಬೆ ಜಾತ್ರಾ ಮಹೋತ್ಸವಕ್ಕೆ ತೆರೆ ಬಿದ್ದಿದೆ.

ಇಂದು ಮ.12 ಗಂಟೆಯಿಂದ ಮ.1.30 ರವರೆಗೆ ರಾಹುಕಾಲ ಇದ್ದ ಹಿನ್ನೆಲೆ ಈ ಬಾರಿ ತಡವಾಗಿ ಗರ್ಭಗುಡಿ ಬಾಗಿಲನ್ನು ಮುಚ್ಚಲಾಯಿತು. ಬಾಗಿಲು ಮುಚ್ಚುವ ಮುಂಚೆ ಗರ್ಭಗುಡಿಗೆ ತೆರಳಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ.ಶಿವಲಿಂಗೇಗೌಡ, ಸಂಸದ ಶ್ರೇಯಸ್‌ ಪಟೇಲ್, ಶಾಸಕ ಹೆಚ್.ಪಿ.ಸ್ವರೂಪ್‌ಪ್ರಕಾಶ್, ಪತ್ನಿ ಶ್ವೇತಾ, ಡಿಸಿ ಕೆ.ಎಸ್.ಲತಾಕುಮಾರಿ, ಎಸ್ಪಿ ಶುಭನ್ವಿತಾ, ಆಡಳಿತಾಧಿಕಾರಿ ಜಗದೀಶ್ ಗಂಗಣ್ಣನವರ್, ತಹಶೀಲ್ದಾರ್ ಗೀತಾ, ಎಸಿ ಹುಲ್ಲಮನಿ ತಿಮ್ಮಣ್ಣ ಅವರು ಹಾಸನಾಂಬ ದೇವಿ ದರ್ಶನ ಪಡೆದರು.

ದರ್ಶನ ನೀಡಿದ ಬಳಿಕ ಹಾಸನಾಂಬೆಗೆ ಮಾಡಲಾಗಿದ್ದ ಅಲಂಕಾರವನ್ನು ಅರ್ಚಕರು ತೆರವು ಮಾಡಿದ್ದಾರೆ. ನಂತರ ದೇವಿಗೆ ಹಾಕಿದ್ದ ಒಡವೆಗಳನ್ನು ತೆಗೆದು, ದೇವಿಯ ಅಲಂಕಾರ ವಿಸರ್ಜನೆ ಪೂಜೆ ಮಾಡಿದ್ದಾರೆ.ದೇವಿಗೆ ಹಾಕಲಾಗಿದ್ದ ಒಡವೆಗಳನ್ನು ಹೊರತಂದ ನಂತರ ಅರ್ಚಕರ ತಂಡ ದೀಪಕ್ಕೆ ಎಣ್ಣೆ ಹಾಕಿದ ಬಳಿಕ ದೇವಾಲಯದ ಗರ್ಭಗುಡಿ ಬಾಗಿಲಿಗೆ ಶಾಸ್ತ್ರೋಕ್ತವಾಗಿ ಬೀಗ ಹಾಕಿ ಪ್ರಧಾನ ಅರ್ಚಕ ನಾಗರಾಜ್ ಅವರು ಮುದ್ರೆ ಒತ್ತಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ.ಶಿವಲಿಂಗೇಗೌಡ, ಸಂಸದ ಶ್ರೇಯಸ್‌ ಪಟೇಲ್, ಶಾಸಕ ಹೆಚ್.ಪಿ.ಸ್ವರೂಪ್‌ಪ್ರಕಾಶ್, ಡಿಸಿ ಕೆ.ಎಸ್.ಲತಾಕುಮಾರಿ, ಎಸ್ಪಿ ಶುಭನ್ವಿತಾ, ಆಡಳಿತಾಧಿಕಾರಿ ಜಗದೀಶ್ ಗಂಗಣ್ಣನವರ್ ಸಮ್ಮುಖದಲ್ಲಿ ಬಾಗಿಲು ಮುಚ್ಚಲಾಯಿತು.

ಅ.29 ರಿಂದ ನ.11ರವರೆಗೆ ಶ್ರೀ ಹಾಸನಾಂಬ ದೇವಿ ಹಾಗೂ ಶ್ರೀ ಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಯಶಸ್ವಿಯಾಗಿ ನಡೆದಿದೆ. 12 ದಿನಗಳ ಕಾಲ ಸಾರ್ವಜನಿಕರಿಗೆ ಹಾಸನಾಂಬ ದೇವಿ ದರ್ಶನ ಕರುಣಿಸಿದ್ದು, ಈ ಬಾರಿಯ ಜಾತ್ರಾ ಮಹೋತ್ಸವ ಇತಿಹಾಸ ಬರೆದಿದೆ. ಅ.30 ರಿಂದ ನ.11 ರ ಬೆಳಗ್ಗೆ 6 ಗಂಟೆಯವರೆಗೆ 30 ಲಕ್ಷಕ್ಕೂ ಅಧಿಕ ಭಕ್ತರು ದೇವಿ ದರ್ಶನ ಪಡೆದು ಪುನೀತರಾಗಿದ್ದಾರೆ. 1000 ರೂ., 300 ರೂ.ನ ವಿಶೇಷ ದರ್ಶನದ ಟಿಕೆಟ್ ಮಾರಾಟ ಹಾಗೂ ಲಾಡು ಮಾರಾಟದಿಂದ 25.36 ಕೋಟಿ ರೂ. ಆದಾಯ ಸಂಗ್ರಹವಾಗಿದೆ.

ಇನ್ನೂ ಶಾಂತಿಗ್ರಾಮ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್‌ ಚಂದ್ರಶೇಖರ್ ಅವರು, ಯಾವುದೇ ಗೊಂದಲ, ನೂಕು-ನುಗ್ಗಲು ಆಗದೇ ಜಾತ್ರೆ ಯಶಸ್ವಿಯಾಗಿ ನಡೆದರೆ ಎಸ್ಪಿ ಶುಭನ್ವಿತಾ ಅವರಿಂದ ಈಡುಗಾಯಿ ಹಾಕಿಸುವುದಾಗಿ ಹರಕೆ ಕಟ್ಟಿಕೊಂಡಿದ್ದರು. ಅದರಂತೆ ದೇವಾಲಯದ ಎದುರು ಎಸ್ಪಿ ಶುಭನ್ವಿತಾ ಅವರೊಂದಿಗೆ ಡಿವೈಎಸ್‌ಪಿ, ಸಿಪಿಐಗಳು ಹಾಗೂ ಪಿಎಸ್‌ಐಗಳು ಸೇರಿ ಈಡುಗಾಯಿ ಒಡೆದು ಹರಕೆ ತೀರಿಸಿದ್ದಾರೆ. ಇದೇ ವೇಳೆ ಎಸ್ಪಿ ಶುಭನ್ವಿತಾ ಅವರು ಹಾಸನಾಂಬ ದೇವಾಲಯದ ಯಶಸ್ವಿಗೆ ಶ್ರಮಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.

ಮುಂದಿನ ವರ್ಷ ಅ.21 ರಿಂದ ಅ.31ರವರೆಗೆ ಹಾಸನಾಂಬ ದೇವಿ ಜಾತ್ರಾ ಮಹೋತ್ಸವ ನಡೆಯಲಿದೆ.


Spread the love

About Laxminews 24x7

Check Also

ಮುಂದಿನ ವರ್ಷ 3 ದಿನಗಳ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ: ಡಿಕೆಶಿ ಘೋಷಣೆ

Spread the loveಮೈಸೂರು: ಮುಂದಿನ ವರ್ಷ ಮೂರು ದಿನಗಳ ಮೂರು ದಿನಗಳ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆ ಮಾಡಲಾಗುವುದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ