Breaking News

ಆಭರಣ ಪ್ರಿಯರಿಗೆ ಗುಡ್‌ನ್ಯೂಸ್ – ಚಿನ್ನ, ಬೆಳ್ಳಿ ದರದಲ್ಲಿ ಭಾರೀ ಇಳಿಕೆ

Spread the love

ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿ  ಹಬ್ಬಕ್ಕೆ ಕೆಲವೇ ದಿನಗಳು ಬಾಕಿಯಿರುವಾಗಲೇ, ಆಭರಣ ಪ್ರಿಯರಿಗೆ ಜಾಕ್‌ಪಾಟ್ ಹೊಡೆದಿದೆ. ಇತ್ತೀಚೆಗೆ ಗಗನಕ್ಕೇರಿದ್ದ ಚಿನ್ನ  ಮತ್ತು ಬೆಳ್ಳಿ ದರಗಳಲ್ಲಿ ಕಳೆದೊಂದು ತಿಂಗಳಿನಿಂದ ದಿಢೀರ್ ಇಳಿಕೆಯಾಗಿದೆ.

ಹಬ್ಬದ ಸಮಯದಲ್ಲಿ ಹಾಗೂ ಮದುವೆ ಸೀಜನ್‌ನಲ್ಲಿ ಚಿನ್ನ ಕೊಳ್ಳುವವರಿಗೆ ಇದು ಸೂಕ್ತ ಕಾಲವಾಗಿದ್ದು, ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಭಾರಿ ಕುಸಿತ ಕಂಡಿದೆ. ಈ ವರ್ಷದಲ್ಲಿ ರೆರ್ಕಾಡ್ ಬರೆದಿದ್ದ ಚಿನ್ನ ಕಳೆದೊಂದು ತಿಂಗಳಿನಿಂದ ದಿಢೀರ್ ಕುಸಿದಿದೆ. ಅದರಲ್ಲೂ ಬೆಳ್ಳಿ ಬೆಲೆ ಮಹಾಕುಸಿತವಾಗಿದೆ. ಗ್ರಾಹಕರಿಗೆ ಇದು ನಿಜವಾಗಿಯೂ ಹಬ್ಬದ ಉಡುಗೊರೆಯಾಗಿದೆ.

ಕಳೆದ ಒಂದು ತಿಂಗಳಲ್ಲಿ 10 ಗ್ರಾಂ ಬಂಗಾರದ ಬೆಲೆಯಲ್ಲಿ 10 ರಿಂದ 15 ಸಾವಿರ ರೂಪಾಯಿ ಕಡಿಮೆಯಾಗಿದೆ. ಹಾಗೆಯೇ ಒಂದು ಕೆ.ಜಿ ಬೆಳ್ಳಿಗೆ 2,37,000 ರೂ. ಇದ್ದ ಬೆಳ್ಳಿ 2 ಲಕ್ಷ ರೂಪಾಯಿಯಾಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಅಮೆರಿಕದ ಸರ್ಕಾರಿ ಬಾಂಡ್‌ಗಳ ಬಡ್ಡಿದರ ಏರಿಕೆಯಾಗಬಹುದು. ಈ ಮುನ್ಸೂಚನೆಯಿಂದ ಇನ್ವೆಸ್ಟ್‌ಮೆಂಟ್ ದೃಷ್ಟಿಯಿಂದ ಕೂಡಿಟ್ಟ ಚಿನ್ನವನ್ನು ಈಗ ಆಫ್ ಲೋಡ್ ಮಾಡುತ್ತಿದ್ದಾರೆ. ಜೊತೆಗೆ ನ್ಯಾನೋ ಟೆಕ್ನಾಲಜಿಯಿಂದ ಬೆಳ್ಳಿಯ ಬಳಕೆ ಕಡಿಮೆಯಾಗುತ್ತಿದೆ. ಜೊತೆಗೆ ಅಂತರರಾಷ್ಟ್ರೀಯ ಯುದ್ಧಗಳು ಕಾರಣವಾಗಿವೆ ಅಂತಾರೆ ಕರ್ನಾಟಕ ಜ್ಯುವೆಲರ್ಸ್ ಅಸೋಸಿಯೇಷನ್ ಪದಾಧಿಕಾರಿಗಳು.

ಇನ್ನೂ ದರ ಇಳಿಕೆ ಈ ವರ್ಷಾಂತ್ಯದವರೆಗೂ ಮುಂದುವರಿಯುವ ಸಾಧ್ಯತೆಯಿದ್ದು, 10%ವರೆಗೂ ಹೆಚ್ಚು ಕಡಿಮೆ ಆಗಲಿದೆ ಎಂದು ಅಂದಾಜಿಸಲಾಗಿದೆ. ಆದರೂ ನವೆಂಬರ್ 3ರಂದು ಅಮೆರಿಕದ ಫೆಡರಲ್ ಸರ್ಕಾರಿ ಬ್ಯಾಂಕ್ ಮೀಟಿಂಗ್‌ನತ್ತ ಚಿನಿವಾರ ಪೇಟೆಯ ಚಿತ್ತ ನೆಟ್ಟಿದ್ದು, ಈ ಮೀಟಿಂಗ್‌ನಲ್ಲಿ ಬಾಂಡ್‌ಗಳ ಮೇಲಿನ ಬಡ್ಡಿ ದರ ಏರಿಕೆ ಮಾಡಿದ್ರೆ ಮತ್ತಷ್ಟು ಚಿನ್ನ ಕುಸಿಯಬಹುದು. ಏರಿಕೆ ಮಾಡದೇ ಇದ್ದರೆ ಮತ್ತೆ ಸ್ವಲ್ಪ ಮಟ್ಟಿಗೆ ಬೆಲೆ ಏರಿಕೆ ಸಾಧ್ಯತೆಯಿದೆ. ಹೀಗಾಗಿ ಈ ಮೀಟಿಂಗ್ ಸಹ ಚಿನ್ನ ಹಾಗೂ ಬೆಳ್ಳಿ ಬೆಲೆ ಏರಿಕೆಯ ಮೇಲೆ ಪ್ರಭಾವ ಬೀರಲಿದೆ. ಡಿಸೆಂಬರ್ ಕ್ರಿಸ್ಮಸ್ ವೇಳೆಗೆ ಒಂದು ತಿಂಗಳ ಮಾರ್ಕೆಟ್ ಇರಲ್ಲ, ಕೇವಲ ಬಳಕೆಗೆ ಬೇಕಾದಷ್ಟು ಮಾತ್ರ ಜನ ಚಿನ್ನ ಕೊಳ್ಳಿ, ಒಂದು ತಿಂಗಳವರೆಗೂ ಕಾಯಿರಿ ಎಂದು ಕರ್ನಾಟಕ ಜ್ಯುವೆಲರ್ಸ್ ಅಸೋಸಿಯೇಷನ್ ಅಧ್ಯಕ್ಷ ಶರವಣ ತಿಳಿಸಿದ್ದಾರೆ.


Spread the love

About Laxminews 24x7

Check Also

ಪ್ರಿಯತಮೆ ದೂರವಾದ್ಲು ಅಂತಾ ರೊಚ್ಚಿಗೆದ್ದ ಪಾಗಲ್ ಪ್ರೇಮಿ – ಲವರ್ ಬಾವನ ಬೈಕ್‌ಗೆ ಬೆಂಕಿ ಹಚ್ಚಿ ವಿಕೃತಿ!

Spread the loveಬೆಂಗಳೂರು: ಸೋಷಿಯಲ್ ಮಿಡೀಯಾದಲ್ಲಿ ಶುರುವಾದ ಪರಿಚಯ ಪ್ರೀತಿಗೆ ತಿರುಗಿತ್ತು. ಆದರೆ ಆ ಪ್ರೀತಿಗೆ ಹೆಚ್ಚು ದಿನ ಬಾಳಲಿಲ್ಲ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ