Breaking News

ಪ್ರಸಾದ ಸೇವಿಸಿ 100ಕ್ಕೂ ಹೆಚ್ಚು ಜನ ಅಸ್ವಸ್ಥ: THO ಕಾರ್ಯವೈಖರಿಗೆ ದುರ್ಯೋಧನ ಐಹೊಳೆ ತರಾಟೆ

Spread the love

ಚಿಕ್ಕೋಡಿ:ತಾಲೂಕಿನ ಜೋಡಟ್ಟಿ ಗ್ರಾಮದ ಶೇಲವ್ವಾ ದೇವಿ ದೇವಸ್ಥಾನದ ಪ್ರಸಾದ ಸೇವಿಸಿ 100ಕ್ಕೂ ಹೆಚ್ಚು ಭಕ್ತರು ಆಹಾರ ವಿಷಪೂರಿತಗೊಂಡು ಅಸ್ವಸ್ಥಗೊಂಡು ಕಬ್ಬೂರು ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ.

ರೋಗಿಗಳ ಪರಾಮರ್ಶೆಗೆ ಆಗಮಿಸಿದ್ದ ಶಾಸಕ ದುರ್ಯೋಧನ ಐಹೊಳೆ ಅವರು, ಸ್ಥಳದಲ್ಲಿ ಗೈರುಹಾಜರಿದ್ದ ತಾಲೂಕು ಆರೋಗ್ಯಾಧಿಕಾರಿ(THO) ಡಾ. ರಾಜಶೇಖರ ಖಣದಾಳೆ ಅವರನ್ನು ಫೋನ್ ಮೂಲಕ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಜೋಡಟ್ಟಿ ಗ್ರಾಮದ ಶೇಲವ್ವಾ ದೇವಿ ದೇವಸ್ಥಾನದಲ್ಲಿ ವಿತರಿಸಲಾದ ಪ್ರಸಾದ ಸೇವಿಸಿದ ನೂರಾರು ಭಕ್ತರಲ್ಲಿ ವಾಂತಿ, ಭೇದಿ ಕಾಣಿಸಿಕೊಂಡಿದೆ. ತಕ್ಷಣವೇ ಅಸ್ವಸ್ಥಗೊಂಡವರನ್ನು ಕಬ್ಬೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ವಿಷಯ ತಿಳಿಯುತ್ತಿದ್ದಂತೆ ಅಸ್ವಸ್ಥರ ಆರೋಗ್ಯ ವಿಚಾರಿಸಲು ಕಬ್ಬೂರು ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ದುರ್ಯೋಧನ ಐಹೊಳೆ ಅವರಿಗೆ, ಇಷ್ಟೊಂದು ದೊಡ್ಡ ಪ್ರಮಾಣದ ತುರ್ತು ಪರಿಸ್ಥಿತಿ ಇದ್ದರೂ ಆಸ್ಪತ್ರೆಯಲ್ಲಿ ಕರ್ತವ್ಯನಿರತರಾಗಿರಬೇಕಾದ ರಾಜಶೇಖರ ಖಣದಾಳೆ ಗೈರಾಗಿರುವುದು ಕಂಡುಬಂದಿದೆ.

ಇದರಿಂದ ತೀವ್ರ ಆಕ್ರೋಶಗೊಂಡ ಶಾಸಕರು ತಕ್ಷಣವೇ ಟಿಹೆಚ್‌ಒಗೆ ದೂರವಾಣಿ ಕರೆ ಮಾಡಿ, “ಇಷ್ಟೊಂದು ಜನ ಆಸ್ಪತ್ರೆಯಲ್ಲಿ ದಾಖಲಾಗಿದ್ದರೂ ಎಲ್ಲಿದ್ದೀಯಾ? ಸಾರಾಯಿ ಅಂಗಡಿಯಲ್ಲಿದ್ದೀಯಾ? ಕುಡಿದು ಮಲಗಿದ್ದೀಯಾ?” ಎಂದು ಕಟು ಪದಗಳಿಂದ ತರಾಟೆಗೆ ತೆಗೆದುಕೊಂಡರು. ಅಲ್ಲದೆ, “ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡದೆ ತಕ್ಷಣವೇ ಆಸ್ಪತ್ರೆಗೆ ಆಗಮಿಸಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸಿಗುವಂತೆ ಕ್ರಮ ವಹಿಸಬೇಕು” ಎಂದು ಎಚ್ಚರಿಕೆ ನೀಡಿದರು. ಪ್ರಸ್ತುತ ಆಸ್ಪತ್ರೆಯಲ್ಲಿ ಅಸ್ವಸ್ಥರಿಗೆ ಚಿಕಿತ್ಸೆ ಮುಂದುವರಿದಿದೆ.


Spread the love

About Laxminews 24x7

Check Also

ಪೊಲೀಸರು ಅವ್ರ ಡ್ಯೂಟಿ ಮಾಡಿದ್ದಾರೆ, ಅದರಲ್ಲಿ ತಪ್ಪೇನಿದೆ: ಡಿಸಿಎಂ ರಿಯಾಕ್ಷನ್‌

Spread the loveಬೆಂಗಳೂರು: ದಸರಾದಲ್ಲಿ ನಂದಿಧ್ವಜ ಪೂಜೆಗೆ ಮುಖ್ಯಮಂತ್ರಿಗಳೊಂದಿಗೆ  ತೆರಳುತ್ತಿದ್ದ ಸಚಿವರನ್ನು ಎಸ್‌ಪಿ ತಡೆದಿರುವ ಘಟನೆಗೆ ಸಂಬಧಿಸಿದಂತೆ ಉಪಮುಖ್ಯಮಂತ್ರಿ ಜಿ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ