ಮೈಸೂರು: ಈ ಬಾರಿ ದಸರಾದಲ್ಲಿ ಅಂಬಾರಿ ಹೊರುವ ಆನೆ ಯಾವುದು ಅನ್ನೋದು ಇನ್ನೂ ಕುತೂಹಲವಾಗಿಯೇ ಇದೆ. ಇದರ ನಡುವೆ ಅಂಬಾರಿ ಹೊತ್ತು ತಾಲೀಮಿನ ವೇಳೆ ಮತ್ತೆ ವಿಘ್ನ ಎದುರಾಗಿದೆ.
ಮರದ ಅಂಬಾರಿ ಹೊತ್ತು ತಾಲೀಮು ನಡೆಸುವ ವೇಳೆ ತೂಕ ತಡೆಯಲು ಆಗದೇ ಮಹೇಂದ್ರ ಅರ್ಧದಾರಿಯಲ್ಲೇ ಆಯುರ್ವೇದಿಕ ವೃತ್ತದಲ್ಲಿ ನಿಂತುಬಿಟ್ಟಿದ್ದಾನೆ. ಇದಕ್ಕೂ ಮುನ್ನ, ಮೊದಲ ದಿನವೂ ಮಹೇಂದ್ರ ಅರಮನೆಯ ಬಲರಾಮ ದ್ವಾರದ ಬಳಿಯೇ ನಿಂತುಬಿಟ್ಟಿದ್ದ. ಇಂದಿನ ತಾಲೀಮಿನಲ್ಲೂ ಅರ್ಧಕ್ಕೆ ಸುಸ್ತಾಗಿದ್ದಾನೆ.
ತಕ್ಷಣ ಎಚ್ಚೆತ್ತ ಅರಣ್ಯ ಇಲಾಖೆ ಮರದ ಅಂಬಾರಿಯನ್ನು ಇಳಿಸಿ, ದಾರಕಟ್ಟಿ ಆಟೋದಲ್ಲಿ ತೆಗೆದುಕೊಂಡು ಹೋಗಿದ್ದಾರೆ. ಹಾಗಾಗಿ, ಅಂಬಾರಿ ಹೊತ್ತು ಕ್ಯಾಪ್ಟನ್ ಆಗುವ ರೇಸ್ನಿಂದ ಮಹೇಂದ್ರ ಬಹುತೇಕ ಔಟ್ ಆಗಿದ್ದಾನೆ.
ಮತ್ತೊಂದ್ಕಡೆ, ದಸರಾ ಮಹೋತ್ಸವ ನಿರ್ವಿಘ್ನವಾಗಿ ನಡೆಯಲಿ ಎಂದು ಗಜಪಡೆಯ ಮಾವುತರು ಹಾಗೂ ಕಾವಾಡಿಗರು ನಾಗರಹೊಳೆ ಅರಣ್ಯದಲ್ಲಿರುವ ಅಜ್ಜಯ್ಯ, ಅಜ್ಜಮ್ಮ ಹಾಗೂ ಮಾಸ್ತಮ್ಮ ದೇವರ ಗುಡಿಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
Laxmi News 24×7