Breaking News

ಮೂಡಿಗೆರೆ ತಾಲೂಕಿನಲ್ಲಿ ಭಾರೀ ಮಳೆ – ಗಾಳಿಗೆ ಹಾರಿ ಹೋದ ಶಾಲೆಯ ಹೆಂಚುಗಳು

Spread the love

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು  ಜಿಲ್ಲೆಯಲ್ಲಿ ಹಿಂಗಾರು ಮಳೆ ಅಬ್ಬರ ಜೋರಾಗಿದೆ. ಮೂಡಿಗೆರೆ  ತಾಲೂಕು ಸೇರಿದಂತೆ ಮಲೆನಾಡಿನ ಹಲವು ಭಾಗಗಳಲ್ಲಿ ಬಿರುಗಾಳಿಯೊಂದಿಗೆ ಧಾರಾಕಾರ ಮಳೆ ಸುರಿಯುತ್ತಿದೆ.

ಮೂಡಿಗೆರೆ ತಾಲೂಕಿನ ಜಾಣಿಗೆ ಗ್ರಾಮದಲ್ಲಿ ಬಿರುಗಾಳಿ, ಮಳೆಯ ಆರ್ಭಟಕ್ಕೆ ಸರ್ಕಾರಿ ಪ್ರಾಥಮಿಕ ಶಾಲೆಯ ನೂರಾರು ಹೆಂಚುಗಳು ಹಾರಿ ಹೋಗಿವೆ. ಭಾರೀ ಗಾಳಿಯ ರಭಸಕ್ಕೆ ಶಾಲೆಯ ಮೇಲ್ಛಾವಣಿಯ ಹೆಂಚುಗಳು ಕಿತ್ತುಹೋಗಿವೆ.

ಮೂಡಿಗೆರೆ ತಾಲೂಕು, ಕೊಟ್ಟಿಗೆಹಾರ ಹಾಗೂ ಚಾರ್ಮಾಡಿ ಘಾಟ್ ವ್ಯಾಪ್ತಿಯಲ್ಲೂ ಮಳೆಯ ಅಬ್ಬರ ಮುಂದುವರಿದಿದೆ. ಬಿರುಗಾಳಿಯೊಂದಿಗೆ ಮಳೆ ಸುರಿಯುತ್ತಿರುವುದರಿಂದ ಜನಜೀವನದ ಮೇಲೂ ಪರಿಣಾಮ ಉಂಟಾಗಿದೆ.

ಇತ್ತ ಮಲೆನಾಡಿಗರು ಕಾಫಿ ಬೆಳೆ ಉಳಿಸಿಕೊಳ್ಳಲು ಮಳೆಯನ್ನೇ ಎದುರು ನೋಡುತ್ತಿದ್ದಾರೆ. ಕಾಫಿ ಬೆಳೆಗೆ ಮಳೆ ಅಗತ್ಯವಾಗಿರುವ ಹಿನ್ನೆಲೆಯಲ್ಲಿ ಮಲೆನಾಡಿನ ರೈತರು ಹಿಂಗಾರು ಮಳೆಯ ನಿರೀಕ್ಷೆಯಲ್ಲಿದ್ದಾರೆ. 


Spread the love

About Laxminews 24x7

Check Also

ಅಂಬಾರಿ ತೂಕ ತಡೆಯಲಾಗದೇ ತಾಲೀಮು ಅರ್ಧಕ್ಕೆ ಮೊಟಕು – ಬಹುತೇಕ ಕ್ಯಾಪ್ಟನ್ ರೇಸ್‌ನಿಂದ ಮಹೇಂದ್ರ ಔಟ್

Spread the loveಮೈಸೂರು: ಈ ಬಾರಿ ದಸರಾದಲ್ಲಿ  ಅಂಬಾರಿ ಹೊರುವ ಆನೆ ಯಾವುದು ಅನ್ನೋದು ಇನ್ನೂ ಕುತೂಹಲವಾಗಿಯೇ ಇದೆ. ಇದರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ