Breaking News

ರೇಣುಕಾಸ್ವಾಮಿ ಕೊಲೆ ಕೇಸ್‌ | ಮದ್ವೆಯಾದ ಖುಷಿಯಲ್ಲಿದ್ದ ಚಿಕ್ಕಣ್ಣಗೆ ಶಾಕ್‌ – ಇಬ್ಬರು ನಟರಿಗೆ ಕೋರ್ಟ್ ಸಮನ್ಸ್

Spread the love

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಚಿಕ್ಕಣ್ಣ  ಹಾಗೂ ನಟ ಯಶಸ್ ಸೂರ್ಯ ಅವರಿಗೆ 59ನೇ ಸಿಸಿಹೆಚ್ ಕೋರ್ಟ್  ಸಮನ್ಸ್ ಜಾರಿ ಮಾಡಿದೆ.

ಪ್ರಕರಣದಲ್ಲಿ ಸಾಕ್ಷಿಗಳಾಗಿರುವ ಇಬ್ಬರು ನಟರು, ಕೊಲೆಗೂ ಮುನ್ನ ಆರೋಪಿ ದರ್ಶನ್  ಭಾಗಿಯಾಗಿದ್ದ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಹಿನ್ನೆಲೆ ಸಾಕ್ಷ್ಯ ಹೇಳಲು ನ್ಯಾಯಾಲಯ ಸಮನ್ಸ್ ನೀಡಿದೆ.

ಪ್ರಕರಣದ ವಿಚಾರಣೆಯನ್ನ ನಡೆಸುತ್ತಿರುವ 59ನೇ ಸಿಸಿಹೆಚ್ ಕೋರ್ಟ್, ಅಕ್ಟೋಬರ್ 13ರಂದು ವಿಚಾರಣೆಗೆ ಹಾಜರಾಗುವಂತೆ ಇಬ್ಬರು ನಟರಿಗೆ ಸಮನ್ಸ್‌ ಜಾರಿಗೊಳಿಸಿದೆ. ನಟ ಚಿಕ್ಕಣ್ಣ ಅವರಿಗೆ CW-80 ಹಾಗೂ ನಟ ಯಶಸ್ ಸೂರ್ಯ ಅವರಿಗೆ CW-98 ಸಮನ್ಸ್ ಜಾರಿ ಮಾಡಲಾಗಿದೆ.

ಬೆಂಗಳೂರಿನ ಸ್ಟೋನಿ ಬ್ರೂಕ್‌ನಲ್ಲಿ ನಡೆದಿದ್ದ ಪಾರ್ಟಿಯಲ್ಲಿ ಇಬ್ಬರೂ ನಟರು ಕೊಲೆ ಆರೋಪಿ ದರ್ಶನ್‌ ಜೊತೆಗೆ . ಭಾಗಿಯಾಗಿದ್ದರುಈ ಕುರಿತಂತೆ ನ್ಯಾಯಾಲಯದಲ್ಲಿ ಸಾಕ್ಷ್ಯ ನೀಡುವಂತೆ ಕೋರ್ಟ್‌ ಸಮನ್ಸ್‌ ಜಾರಿಗೊಳಿಸಿದೆ.


Spread the love

About Laxminews 24x7

Check Also

ಅಂಬಾರಿ ತೂಕ ತಡೆಯಲಾಗದೇ ತಾಲೀಮು ಅರ್ಧಕ್ಕೆ ಮೊಟಕು – ಬಹುತೇಕ ಕ್ಯಾಪ್ಟನ್ ರೇಸ್‌ನಿಂದ ಮಹೇಂದ್ರ ಔಟ್

Spread the loveಮೈಸೂರು: ಈ ಬಾರಿ ದಸರಾದಲ್ಲಿ  ಅಂಬಾರಿ ಹೊರುವ ಆನೆ ಯಾವುದು ಅನ್ನೋದು ಇನ್ನೂ ಕುತೂಹಲವಾಗಿಯೇ ಇದೆ. ಇದರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ