Breaking News

ಲಗೇಜ್‌ ಟ್ರ್ಯಾಲಿಯಲ್ಲಿ ಸಾಗಿಸುತ್ತಿದ್ದ 1.80 ಕೋಟಿ ಮೌಲ್ಯದ ಚಿನ್ನದ ಬಿಸ್ಕೆಟ್ ವಶಕ್ಕೆ‌

Spread the love

ಬೆಂಗಳೂರು: ಡಿಆರ್‌ಐ  ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ, ಲಗೇಜ್‌ ಟ್ರ್ಯಾಲಿಯಲ್ಲಿ ಸಾಗಿಸುತ್ತಿದ್ದ ಚಿನ್ನದ  ಬಿಸ್ಕೆಟ್‌ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

1.80 ಕೋಟಿ ಮೌಲ್ಯದ 1.3 ಕೆಜಿ ಚಿನ್ನದ ಬಿಸ್ಕೆಟ್ ಅನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ವಿದೇಶದಿಂದ ಇಬ್ಬರು ಆರೋಪಿಗಳು ಚಿನ್ನ ತಂದಿದ್ದರು.

ಆರೋಪಿಗಳೂ ಯಾವುದೋ ಯಾವುದೋ ಟ್ರ್ಯಾಲಿಗೆ ಚಿನ್ನದ ಬಿಸ್ಕೆಟ್ ಅಂಟಿಸಿ ಬಿಡ್ತಾ ಇದ್ದರು. ಅಮಾಯಕ ಪ್ರಯಾಣಿಕರು ಟ್ರ್ಯಾಲಿ ತೆಗೆದುಕೊಂಡು ಕಸ್ಟಮ್ಸ್ ದಾಟುತ್ತಾ ಇದ್ದರು. ಟ್ರ್ಯಾಲಿ ತೆಗೆದುಕೊಂಡು ಹೋದ ಜನರ ಹಿಂಬಾಲಿಸಿ ಬಳಿಕ ಟ್ರ್ಯಾಲಿಯಲ್ಲಿ ಚಿನ್ನ ತೆಗೆದುಕೊಳ್ಳುತ್ತಿದ್ದರು.

ಪ್ರಯಾಣಿಕರು ತಮಗೆ ಅರಿವಿಲ್ಲದೇ ಚಿನ್ನ ಸಾಗಾಟ ಮಾಡುತ್ತಿದ್ದರು. ಮಾಹಿತಿ ತಿಳಿದ DRI ಅಧಿಕಾರಿಗಳು ಚಿನ್ನ ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಮಲೇಷ್ಯಾದ ಕೌಲಾಲಂಪುರದಿಂದ ಚಿನ್ನ ಸಾಗಾಟ ಮಾಡುತ್ತಿದ್ದರು.


Spread the love

About Laxminews 24x7

Check Also

ಕುಡಿದ ಮತ್ತಿನಲ್ಲಿ ಪೆಟ್ರೋಲ್ ಬಂಕ್‌ಗೆ ಜಾಗ್ವಾರ್ ಡಿಕ್ಕಿ – ಕ್ಷಣಾರ್ಧದಲ್ಲಿ ಹೊತ್ತಿ ಉರಿದ ಕಾರು, ಬಂಕ್‌

Spread the loveಬೆಂಗಳೂರು: ಮದ್ಯದ ಅಮಲಿನಲ್ಲಿ ಅತಿವೇಗವಾಗಿ ಬಂದ ಜಾಗ್ವಾರ್ ಕಾರೊಂದು ನಿಯಂತ್ರಣ ತಪ್ಪಿ ಪೆಟ್ರೋಲ್ ಬಂಕ್‌ಗೆ ಡಿಕ್ಕಿ ಹೊಡೆದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ